This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ರಾಜ್ಯದ ಸರ್ಕಾರಿ ನೌಕರರ ಮತ್ತೊಂದು ಪ್ರಮುಖ ಬೇಡಿಕೆ ವಿಚಾರದಲ್ಲಿ ಕೈಹಾಕಿದ ಷಡಾಕ್ಷರಿ ಅವರು NPS ರದ್ದತಿಯ ಹೋರಾಟಕ್ಕೆ ರಾಷ್ಟ್ರಮಟ್ಟದ ಸಂಘಟನೆಯ ಜೊತೆಗೆ ಮಹತ್ತರವಾದ ಹೈಪ್ರೊಪೈಲ್ ಮೀಟಿಂಗ್

Join The Telegram Join The WhatsApp

 


ಬೆಂಗಳೂರು

 

ರಾಜ್ಯದ ಸರ್ಕಾರಿ ನೌಕರರ ಮತ್ತೊಂದು ಪ್ರಮುಖ ಬೇಡಿಕೆ ವಿಚಾರದಲ್ಲಿ ಕೈಹಾಕಿದ ಷಡಾಕ್ಷರಿ ಅವರು – ಒಂದೇ ರಾಷ್ಟ್ರ,ಒಂದೇ ಪಿಂಚಣಿ ಹಳೇ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಕುರಿತು ಸಂಘಟನೆಯ ನಿಯೋಗದೊಂದಿಗೆ ಭೇಟಿ ಚರ್ಚೆ ಹೌದು

ಸಧ್ಯ ರಾಜ್ಯದ ತುಂಬೆಲ್ಲಾ ಎಲ್ಲಿ ನೋಡಿದಲ್ಲಿ ಕೇಳಿದಲ್ಲಿ ಹೊಸ ಪಿಂಚಣಿ ಯೋಜನೆ ವಿರುದ್ದ ರಾಜ್ಯದ ಸರ್ಕಾರಿ ನೌಕರರು ಬೀದಿಗಿಳಿದು ಹೋರಾಟವನ್ನು ಮಾಡುತ್ತಿದ್ದು ಇದೇಲ್ಲದರ ನಡುವೆ ಒಂದೇ ರಾಷ್ಟ್ರ – ಒಂದೇ ಪಿಂಚಣಿ  ಹಳೇ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ NOPRUF  ಸಂಘಟನೆಯ ನಿಯೋಗದ ಪದಾಧಿಕಾರಿಗಳ ಭೇಟಿ ನೀಡಿ ಚರ್ಚೆಯನ್ನು ಮಾಡಿದರು.

ಹೌದು ನಮ್ಮ ಭಾರತ ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಸುಮಾರು 75 ಲಕ್ಷ OPS ಯೋಜನೆಗೆ ಒಳಪ ಡುವ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು ಇವರಿಗೆ ಸಂದ್ಯಾಕಾಲದ ಬದುಕು ಅನಿಶ್ಚಿತತೆ ಯಿಂದ ಕೂಡಿದ್ದು, ಜೀವನ ಭದ್ರತೆ ಇರುವುದಿಲ್ಲ ಈ ಯೋಜನೆಯು ಕೇಂದ್ರ ಸರ್ಕಾರದ PFRDA ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿರುತ್ತದೆ ಈಗಾಗಲೇ ದೇಶದ 3 ರಾಜ್ಯಗಳಲ್ಲಿ NPS ಯೋಜನೆಯನ್ನು ರದ್ದುಪಡಿಸುವ ತೀರ್ಮಾನ ವನ್ನು ಅಲ್ಲಿನ ಸರ್ಕಾರಗಳು ಕೈಗೊಂಡಿರುತ್ತವೆ.

NPS ಯೋಜನೆಯನ್ನು ರದ್ದುಪಡಿಸಲು ತೀರ್ಮಾನಿಸಿರುವ ರಾಜ್ಯಗಳಲ್ಲಿ ಅಲ್ಲಿನ ನೌಕರರಿಂದ ಕಟಾವಣೆಯಾಗಿರುವ NPS ವಂತಿಕೆ ಹಣವನ್ನು ನೌಕರರಿಗೆ ಮರುಪಾವತಿ ಸಲು ಹಾಗೂ NPS ರದ್ದುಪಡಿಸಲು PFRDA ಕಾಯ್ದೆಯ ನಿಯಮಗಳು ಅಡ್ಡಿಯಾಗಿರುತ್ತವೆ. ಮುಂದಿನ ದಿನಗಳಲ್ಲಿ ಬೇರೆ ರಾಜ್ಯಗಳಲ್ಲಿ NPS ಯೋಜನೆಯನ್ನು ರದ್ದುಪಡಿಸಿದರೂ ಸಹ ವಂತಿಕೆ ಹಣವನ್ನು ಹಿಂಪಡೆಯಲು ಈ ಕಾಯಿದೆಯಲ್ಲಿ ಅವಕಾಶವಿರುವುದಿಲ್ಲ.

ಕಾರಣ PFRDA ಕಾಯ್ದೆಗೆ ಸೂಕ್ತ ತಿದ್ದುಪಡಿಗ ಳನ್ನು ತರುವ ಅಧಿಕಾರ ಕೇಂದ್ರ ಸರ್ಕಾರದ್ದಾಗಿ ರುತ್ತದೆ. ಹಾಗೂ ಈ ಕಾಯ್ದೆಗೆ ತಿದ್ದುಪಡಿ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇರುವುದಿಲ್ಲ.ಆದ್ದರಿಂದ PFDRA ಕಾಯ್ದೆಗೆ ಈ ಕೆಳಕಂಡ ಸೂಕ್ತ ತಿದ್ದುಪಡಿ ತರಬೇಕಾಗಿದೆ.ದೇಶದ ಎಲ್ಲಾ ರಾಜ್ಯಗಳ NPS & OPS ನೌಕರರು “ಒಂದೇ ರಾಷ್ಟ್ರ- ಒಂದೇ ಪಿಂಚಣಿ” ಎಂಬ ಘೋಷಣೆಯೊಂದಿಗೆ ಒಟ್ಟಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ  “PFRDA ಕಾಯ್ದೆಯಲ್ಲಿ  ಸರ್ಕಾರ  ಮತ್ತು  ಸರ್ಕಾರಿ  ಸ್ವಾಮ್ಯದ  ಎಲ್ಲಾ  ನೌಕರರನ್ನು ಈ ಕಾಯಿದೆ ವ್ಯಾಪ್ತಿಯಿಂದ ಕೈಬಿಡುವ ವಿಧೇಯಕವನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿ ಸೂಕ್ತ ತಿದ್ದುಪಡಿ ಯೊಂದಿಗೆ ಎಲ್ಲಾ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆ ಮರುಸ್ಥಾಪನೆ ಮಾಡುವುದು

ಮೇಲ್ಕಂಡಲ್ಕಂತೆ ಎಲ್ಲಾ ರಾಜ್ಯಗಳಲ್ಲೂ OPS ಯೋಜನೆಯನ್ನು ಮರು ಜಾರಿಗೊಳಿಸಲು ಕೇಂದ್ರ ಸರ್ಕಾರದ ಮೇಲೆ ಹಕ್ಕೊತ್ತಾಯದ ಹೋರಾಟ ಮಾಡುವ ಉದ್ದೇಶದಿಂದ ದೇಶದ ಎಲ್ಲಾ ರಾಜ್ಯಗಳ ನೌಕರರ ಸಂಘಟನೆಗಳನ್ನು ಒಗ್ಗೂಡಿಸುವ ಸಲುವಾಗಿ ರಾಷ್ಟ್ರೀಯ ಹಳೆ ಪಿಂಚಣಿ ಮರುಸ್ಥಾಪನಾ ಯುನೈಟೆಡ್ ಫ್ರಂಟ್’ (NOPRUF) ಸಂಘಟನೆಯು “ಹಳೆ ಪಿಂಚಣಿ ಮರುಸ್ಥಾಪನೆ ನ್ಯಾಯ ಯಾತ್ರೆ” ಯನ್ನು ಅಕ್ಟೋಬರ್ 09 ರಿಂದ ಕಾಶ್ಮೀರದಿಂದ ಆರಂಭ ವಾಗಿ ಈವರೆಗೆ 25 ರಾಜ್ಯಗಳಲ್ಲಿ ಹಮ್ಮಿಕೊಂಡು 19ನೇ ಅಕ್ಟೋಬರ್ 2022ರಂದು ಕನ್ಯಾಕುಮಾ ರಿಯಲ್ಲಿ ಯಾತ್ರೆಯು ಕೊನೆಗೊಳ್ಳಲಿದೆ ಎಂದು NOPRUF ಈ ಸಂಘಟನೆಯ ಅಧ್ಯಕ್ಷರಾದ ಬಿ.ಪಿ. ಸಿಂಗ್ ರಾವತ್ ತಿಳಿಸಿದರು.

ಹಾಗೂ ಇಂದು ದಿ: 18-10-22 ರಂದು ಬೆಂಗಳೂರಿಗೆ ಸರ್ಕಾರಿ ನೌಕರರ ಸಂಘಕ್ಕೆ ಭೇಟಿ ನೀಡಿ ಅಲ್ಲಿನ ಅಧ್ಯಕ್ಷರು ಪದಾಧಿಕಾರಿಗಳೊಂದಿಗೆ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿ ನಮ್ಮ ಈ ಹೋರಾಟಕ್ಕೆ ಬೆಂಬಲವನ್ನು ಕೋರಿದರು ಸಭೆಯಲ್ಲಿ ಈ ಕೆಳಕಂಡoತೆ ಚರ್ಚಿಸಿದರು

ಸಂಘಟನೆಯ ಹೋರಾಟವನ್ನು ಕೇಂದ್ರ ಸರ್ಕಾರದ ಗಮನಸೆಳೆಯುವಂತೆ ಮಾಡುವುದು.ಮುಂದಿನ ಲೋಕಸಭಾ ಚುನಾವಣೆ ಪೂರ್ವದಲ್ಲಿ ಎಲ್ಲಾ ರಾಷ್ಟಿçÃಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ NPS  ರದ್ದುಗೊಳಿಸುವ ವಿಷಯವನ್ನು ಪ್ರಸ್ತಾಪಿಸುವುದು.ನವಂಬರ್-2022ರ ಮಾಹೆಯಲ್ಲಿ ಹೈದ್ರಾಬಾದ್ ನಲ್ಲಿ ಎಲ್ಲಾ ರಾಜ್ಯಗಳಲ್ಲಿ ಎಲ್ಲಾ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಸರ್ಕಾರದ ಮಾನ್ಯತೆ ಪಡೆದ ಮಾತೃ ಸಂಘಟನೆಗಳೊAದಿಗೆ ಒಟ್ಟುಗೂಡಿ ರಾಷ್ಟ್ರ ಮಟ್ಟದ ಸಭೆಯನ್ನು ಏರ್ಪಡಿಸಿ OPS ಮರುಸ್ಥಾಪನೆಗಾಗಿ ಮುಂದಿನ ಹೋರಾಟದ ರೂಪು-ರೇಷಗಳನ್ನು ನಿರ್ಣಯಿಸುವುದು

ನಂತರದಲ್ಲಿ ಸೂಕ್ತ ನಿರ್ಣಯ ಸಭೆಯಲ್ಲಿ ಕೈಗೊಂಡು ರಾಷ್ಟçದಾದ್ಯಂತ ಹಂತ ಹಂತವಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯುವುದು ಹಾಗೂ ಅನಿವಾರ್ಯ ಸಂಧರ್ಭದಲ್ಲಿ ದೇಶ ದಾದ್ಯಂತ ಏಕ ಕಾಲದಲ್ಲಿ ಮುಷ್ಕರ ಕೈಗೊಳ್ಳುವ ಉದ್ದೇಶವನ್ನು ಹೊಂದಲಾಗಿದೆ ಎಂದು ಸಭೆ ಯಲ್ಲಿ ತಿಳಿಸಿದರು.ದಿನಾಂಕ:18-10-2022 ರಂದು “ಹಳೆ ಪಿಂಚಣಿ ಮರುಸ್ಥಾಪನೆ ನ್ಯಾಯ ಯಾತ್ರೆ” ಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ  ರಾಜ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಸ್ವಾಗತಿಸಿ, NPS  ರದ್ದುಗೊ ಳಿಸಲು  NOPRUF  ಸಂಘಟನೆಯು ದೇಶ ದಾದ್ಯಂತ ಕೈಗೊಂಡಿರುವ ಯಾತ್ರೆ ಹಾಗೂ ಹೋರಾಟಕ್ಕೆ ಬೆಂಬಲವನ್ನು ಸೂಚಿಸಲಾಯಿತು.

ಈ ಸಂದರ್ಭದಲ್ಲಿNOPRUF ಸಂಘಟನೆಯ ರಾಷ್ಟ್ರ ಅಧ್ಯಕ್ಷರಾದ ಶ್ರೀ ಬಿ.ಪಿ. ಸಿಂಗ್ ರಾವತ್, ಗೌರವ ಸಲಹೆಗಾರರು ಹಾಗೂ ತೆಲಂಗಾಣ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ      ಸಂಪತ್ ಕುಮಾರ್ ಸ್ವಾಮಿ,ರಾಷ್ಟ್ರೀಯಾ ಉಪಾಧ್ಯಕ್ಷರಾದ ವಿನೋದ್ ಕನೋಜಿಯಾ, ಮತ್ತು ಉತ್ತರಪ್ರದೇಶ ನೌಕರರ ಸಂಘದ ಕಾರ್ಯದರ್ಶಿಗಳಾದ  ಭರತೇಂದು ಯಾದವ್, ಹಾಗೂ ತೆಲಂಗಾಣ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಗಳಾದ ಡಾ. ಜಿ ನಿರ್ಮಲರವರು ಭಾಗವಹಿಸಿದ್ದರು. ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿರವರು, ಕಾರ್ಯಧ್ಯಕ್ಷರಾದ  ಮಲ್ಲಿಕಾರ್ಜುನ ಬಿ. ಬಳ್ಳಾರಿ, ಹಿರಿಯ ಉಪಾಧ್ಯಕ್ಷರಾದ ಎಂ.ವಿ. ರುದ್ರಪ್ಪ, ಕಾರ್ಯದರ್ಶಿಗಳಾದ ಡಾ. ನೆಲ್ಕುದ್ರಿ ಸದಾನಂದ, ಜಂಟಿ ಕಾರ್ಯದರ್ಶಿಗಳಾದ ಹರೀಶ್ ಮತ್ತು ಹೀರಾನಾಯಕ್, ಸಂಘಟನಾ ಕಾರ್ಯದರ್ಶಿ ಗಳಾದ ಸದಾನಂದ ಮತ್ತು ಶಂಕರಪ್ಪ ಹಾಗೂ ರಾಜ್ಯ ಪರಿಷತ್ ಸದಸ್ಯರಾದ  ಹೆಚ್.ಎ. ನಾಗೇಶ್, ಚೇತನ್ ಕುಮಾರು ಹಾಗೂ ಕೇಂದ್ರ ಸಂಘದ ಹಲವು  ಪಧಾದಿಕಾರಿಗಳು ಉಪಸ್ಥಿತರಿದ್ದರು.


Join The Telegram Join The WhatsApp

Suddi Sante Desk

Leave a Reply