ಹುಬ್ಬಳ್ಳಿ –
ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅಧಿಕಾರಿಗಳ ಚಳಿ ಬಿಡಿಸಿದ ಪಾಲಿಕೆಯ ನೂತನ ಆಯುಕ್ತರು – ಕೆಲಸ ಮಾಡಿ ಇಲ್ಲ ಕುರ್ಚಿ ಖಾಲಿ ಮಾಡಿ ಎನ್ನತ್ತಾ ತಾಕೀತು ಮಾಡಿದ ಡಾ ರುದ್ರೇಶ ಘಾಳಿ…..ಮೊದಲ ಸಭೆ ಯಲ್ಲಿಯೇ ಗುಡುಗು ಮಿಂಚುಗಳ ಆರ್ಭಟ…..
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿ ಡಾ ರುದ್ರೇಶ ಘಾಳಿ ಅಧಿಕಾರ ವಹಿಸಿಕೊಂಡಿದ್ದಾರೆ.ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಪಾಲಿಕೆಯ ನೂತನ ಆಯುಕ್ತರು ಅಧಿಕಾರಿಗಳೊಂದಿಗೆ ಸಭೆಯನ್ನು ಮಾಡಿದರು.ಹುಬ್ಬಳ್ಳಿ ಧಾರವಾಡ ಮಹಾ ನಗರ ಪಾಲಿಕೆಗೆ ನೂತನವಾಗಿ ಅಧಿಕಾರ ವಹಿಸಿಕೊಂಡ ಆಯುಕ್ತರಾದ ಡಾ ರುದ್ರೇಶ್ ಘಾಳಿ ಯವರು ಜನತಾ ದರ್ಶನ ಕಾರ್ಯಕ್ರಮ ಮುಗಿಸಿಕೊಂಡ ನಂತರ ಪಾಲಿಕೆಯ ಅಧಿಕಾರಿಗಳೊಂದಿಗೆ ಸಭೆಯನ್ನು ಮಾಡಿದರು.
ಪ್ರಮುಖವಾಗಿ ಹುಬ್ಬಳ್ಳಿ ಧಾರವಾಡ ಮಹಾನಗರದ ವ್ಯಾಪ್ತಿಯಲ್ಲಿ 24*7 ನಿರಂತರ ನೀರು ಸರಬರಾಜು ಯೋಜನೆಯ ಪ್ರಗತಿ ಪರಿಶೀಲನಾ ಸಭೆಯನ್ನು ಕರೆದು ಎಲ್ಲಾ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಅನುಷ್ಠಾನ ಮಾಡಲು ಎಲ್ ಅಂಡ್ ಟಿ ನಿರ್ವಾಹಕರಿಗೆ ಸೂಚಿಸಿ ದರು
ಹಾಗೂ ಪ್ರಾಪರ್ಟಿ ಟ್ಯಾಕ್ಸ್ ಜಿ ಎ ಎಸ್ ಸರ್ವೆ ಹೇಗೆ ಮಾಡುತ್ತಿದ್ದಾರೆ ಹಾಗೂ ತಾಂತ್ರಿಕ ಬಿಡ್ ಭಾಗವಾದ ಪ್ರೂಫ್ ಆಫ್ ಕಾನ್ಸೆಪ್ಟ್ ಪ್ರೆಸೆಂಟೇಶನ್ ಕುರಿತಂತೆ ಮಾಹಿತಿಯನ್ನು ಸಭೆಯಲ್ಲಿ ಪಡೆದುಕೊಂಡರು.ಇದೇ ವೇಳೆ ಸರಿಯಾಗಿ ಕೆಲಸವನ್ನು ಮಾಡಿ ಯಾವುದೇ ಕೆಲಸವನ್ನು ವಿನಾಕಾರಣ ವಿಳಂಬವನ್ನು ಮಾಡದೇ ಸಾರ್ವಜನಿಕರಿಗೆ ಒಳ್ಳೇಯ ಸೇವೆಯನ್ನು ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೆಲಸವನ್ನು ಮಾಡದೇ ವಿನಾಕಾರಣ ವಿಳಂಬ ಮಾಡಿದರೆ ಸಾರ್ವಜನಿಕರಿಂದ ದೂರುಗಳು ಬಂದರೆ ಕ್ರಮವನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಈ ಒಂದು ಸಂದರ್ಭದಲ್ಲಿ ಪಾಲಿಕೆಯ ಮುಖ್ಯಲೆಕ್ಕಾಧಿಕಾರಿ ವಿಶ್ವನಾಥ್,ಉಪ ಆಯುಕ್ತರಾದ ವಿಜಯಕುಮಾರ್ ಸೇರಿದಂತೆ ವಲಯ ಕಚೇರಿಯ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..