This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ಬಡ್ತಿ ಮೀಸಲಾತಿ ಪ್ರಮಾಣ ಹೆಚ್ಚಳದ ಬೆನ್ನಲ್ಲೇ ಹುದ್ದೆಗಳ ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ಇಟ್ಟ ಪರಿಶಿಷ್ಟ ನೌಕರರ ಒತ್ತಡ – ಶೇ.6 ಹುದ್ದೆಗಳ ಹೆಚ್ಚಳಕ್ಕೆ ಮನವಿ

Join The Telegram Join The WhatsApp

 


ಬೆಂಗಳೂರು –

 

ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ  ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡ ಬೆನ್ನಲ್ಲೆ ಬಡ್ತಿಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ಪರಿಶಿಷ್ಟ ಜಾತಿ ಮತ್ತು ವರ್ಗದ ನೌಕರರು ಬೇಡಿಕೆಯನ್ನಿಟ್ಟಿರು ವುದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ

 

ಪರಿಶಿಷ್ಟ ಜಾತಿಗೆ ಶೇ.15 ರಿಂದ 17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3 ರಿಂದ 7ಕ್ಕೆ ಮೀಸಲಾತಿ ಹೆಚ್ಚಳದ ಆದೇಶ ಹೊರಡಿಸುವ ಸಂದರ್ಭದಲ್ಲಿ ಯೇ ಬಡ್ತಿ ಮೀಸಲಾತಿ ಹೆಚ್ಚಳದ ಆದೇಶ ಆಗ ಬೇಕು ಹಾಗೂ ಹಿಂದಿನ ಅನ್ಯಾಯ ಸರಿಪಡಿಸಬೇ ಕೆಂದು ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ.

 

ಬೇರೆ ಬೇರೆ ಇಲಾಖೆಗಳಲ್ಲಿ ಬಡ್ತಿಯಲ್ಲಿ ಅನ್ಯಾಯ ಆಗಿದೆ. ಜತೆಗೆ ಬ್ಯಾಕ್​ಲಾಗ್ ಹುದ್ದೆಗಳು ಭರ್ತಿ ಯಾಗುತ್ತಿಲ್ಲ ಕೂಡಲೆ ಸರ್ಕಾರ ಈ ನಿಟ್ಟಿನಲ್ಲಿ ಆದ್ಯತೆ ನೀಡುವ ಅಗತ್ಯವಿದೆ ಎಂದು ರಾಜ್ಯ ಎಸ್ಸಿ, ಎಸ್ಟಿ ನೌಕರರ ಸಂಘ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಮಾಡಿದೆ.

 

ಯಾವುದೇ ಬಡ್ತಿ ನೀಡುವಾಗ 33 ಹುದ್ದೆಗಳ ಒಂದು ವೃತ್ತ ಮಾಡಿ ಅದರಲ್ಲಿ ಯಾವ ಹುದ್ದೆ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಸಿಗಬೇ ಕೆಂದು ಲೆಕ್ಕ ಹಾಕಲಾಗುತ್ತದೆ. ಅದರ ಪ್ರಕಾರ 100ಕ್ಕೆ ಲೆಕ್ಕ ಹಾಕಿದಾಗ ಈಗ ಪರಿಶಿಷ್ಟ ಜಾತಿಗೆ 15 ಹಾಗೂ ಪರಿಶಿಷ್ಟ ಪಂಗಡದ 3 ಜನರಿಗೆ ಬಡ್ತಿ ಸಿಗಬೇಕು.

 

ಮೀಸಲಾತಿಯ ಪ್ರಮಾಣ ಹೆಚ್ಚಳವಾದರೆ ಪರಿಶಿಷ್ಟ ಜಾತಿಗೆ 17 ಹಾಗೂ ಪಂಗಡಕ್ಕೆ 7 ಹುದ್ದೆಗಳು ಬಡ್ತಿಯಲ್ಲಿ ಲಭ್ಯವಾಗಬೇಕು ಅಂದರೆ 6 ಜನರಿಗೆ ಹೆಚ್ಚಾಗಿ ಲಭ್ಯವಾಗಬೇಕಾಗುತ್ತದೆ.

 

ಸುಪ್ರೀಂಕೋರ್ಟ್ ಬಿ.ಕೆ. ಪವಿತ್ರ ಪ್ರಕರಣದಲ್ಲಿ ಹೇಳಿರುವಂತೆ ಬಡ್ತಿ ಮೀಸಲಾತಿ ಸಿಗುತ್ತಿಲ್ಲವೆಂಬ ನೋವು ಈಗಾಗಲೆ ಪರಿಶಿಷ್ಟ ಜಾತಿ ಮತ್ತು ವರ್ಗದ ನೌಕರರಲ್ಲಿ ಮಡುವುಗಟ್ಟಿದೆ. ಆದ್ದರಿಂ ದಲೇ ಸರ್ಕಾರದ ಮೇಲೆ ಒತ್ತಡ ತರಲಾರಂಭಿ ಸಿದ್ದಾರೆ. ಬಡ್ತಿ ಮೀಸಲಾತಿ ನೀಡದೆ ನೌಕರರಿಗೆ ಆರ್ಥಿಕ ನಷ್ಟವಾಗಿದೆ.

 

ರ್ಕಾರ ಆ ನಷ್ಟಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡ ಬೇಕು. ಸಿಆರ್​ಇ ಸೆಲ್​ನವರು ಈ ನಿಟ್ಟಿನಲ್ಲಿ ಗಮನ ಹರಿಸಬೇಕೆಂಬ ಬೇಡಿಕೆಯೂ ನೌಕರರ ಕಡೆಯಿಂದ ಬರುತ್ತಿದೆ. ರಾಜ್ಯ ಸರ್ಕಾರದಲ್ಲಿ ಖಾಲಿ ಹುದ್ದೆಗಳನ್ನು ತುಂಬುವ ಸಂದರ್ಭದಲ್ಲಿ ಮೀಸ ಲಾತಿ ಸರಿಯಾಗಿ ಜಾರಿಗೆ ತರಬೇಕು.ಈಗ 2.60 ಲಕ್ಷ ಹುದ್ದೆಗಳು ಖಾಲಿ ಇವೆ ಅದರಲ್ಲಿ ಸುಮಾರು 50 ಸಾವಿರ ಹುದ್ದೆಗಳು ಪರಿಶಿಷ್ಟರಿಗೆ ಲಭ್ಯವಾಗ ಬೇಕಾಗುತ್ತದೆ. ಆ ಪ್ರಮಾಣದ ಹುದ್ದೆಗಳನ್ನು ಮೊದಲು ಮೀಸಲಿರುವ ಬಗ್ಗೆಯೂ ಸರ್ಕಾರ ತೀರ್ಮಾನ ಮಾಡಬೇಕಾಗಿದೆ ಎಂದು ನೌಕರರು ಆಗ್ರಹಿಸಿದ್ದಾರೆ.

 

ಬ್ಯಾಕ್​ ಲಾಗ್ ಹುದ್ದೆಗಳ ಭರ್ತಿ ಮಾಡುವ ಕೆಲಸವೂ ಆಗುತ್ತಿಲ್ಲ. ಸರ್ಕಾರದ ಲೆಕ್ಕದಲ್ಲಿ 3 ಸಾವಿರ ಹುದ್ದೆಗಳು ಬ್ಯಾಕ್​ಲಾಗ್​ನಲ್ಲಿ ಭರ್ತಿ ಯಾಗಬೇಕಾಗಿದೆ.ಆದರೆ ಸರಿಯಾಗಿ ಲೆಕ್ಕ ಹಾಕಿದರೆ 25 ಸಾವಿರ ಹುದ್ದೆಗಳು ಪರಿಶಿಷ್ಟರಿಗೆ ಸಿಗಬೇಕಾಗಿದೆ. ಸರ್ಕಾರ ಕೂಡಲೆ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಇದೆ.

 

ಪರಿಶಿಷ್ಟ ನೌಕರರ ಸಮಸ್ಯೆಗಳ ಬಗ್ಗೆ ಚರ್ಚೆಗೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಹಿಂದಿನ ಪತ್ರಗಳಿಗೆ ಅವರಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಈಗ ಮೀಸಲಾತಿ ಹೆಚ್ಚಳ ಆಗುವುದ ರಿಂದ ಸಮಸ್ಯೆ ಬೇರೆ ರೂಪ ಪಡೆದಿದೆ. ಆದ್ದರಿಂದ ಕೂಡಲೆ ಚರ್ಚೆಗೆ ಸಮಯ ನಿಗದಿಗೆ ಮನವಿ ಮಾಡಲಾಗಿದೆ.

 

ಸಾಮಾನ್ಯ ವರ್ಗದವರಿಗೆ ಅಥವಾ ಹಿಂದುಳಿದ ವರ್ಗದವರಿಗೆ ಸಿಗಬೇಕಾದ ಬಡ್ತಿಯನ್ನು ಕಿತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡಬೇ ಕಾಗುತ್ತದೆ. ಈ ವರ್ಗಗಳ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಆತಂಕ ಸರ್ಕಾರದಲ್ಲಿದೆ. ಈ ಗೊಂದಲವನ್ನು ಹೇಗೆ ಪರಿಹರಿಸಿಕೊಳ್ಳುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯಲ್ಲಿ ಮೀಸಲಾತಿಯಲ್ಲಿ ಅನ್ಯಾಯವಾಗಿದೆ.

 

ಕೃಷಿ ಇಲಾಖೆಯಲ್ಲಿ ಪರಿಶಿಷ್ಟರಿಗೆ ಬಡ್ತಿಯಲ್ಲಿ ಸಿಗಬೇಕಾದ 60 ಹುದ್ದೆಗಳನ್ನು ನೀಡಿಲ್ಲ. ರೇಷ್ಮೆ ಇಲಾಖೆಯಲ್ಲಿ ಬಡ್ತಿಯಲ್ಲಿ ಸಿಗಬೇಕಾಗಿದ್ದ 20 ಹುದ್ದೆಗಳನ್ನು ನೀಡಿಲ್ಲ ಅಬಕಾರಿ ಇಲಾಖೆಯಲ್ಲಿ 4 ಡಿವೈಎಸ್ಪಿ ಹುದ್ದೆಗಳು ಉದ್ಯೋಗ ತರಬೇತಿ ಇಲಾಖೆಯಲ್ಲಿ 60 ಹುದ್ದೆಗಳು ಶಿಕ್ಷಣ ಇಲಾಖೆ ಯಲ್ಲಿ ಸುಮಾರು 642 ಹುದ್ದೆಗಳು ಬಡ್ತಿಯಲ್ಲಿ ಸಿಗಬೇಕಾಗಿತ್ತು ಲೋಕೋಪಯೋಗಿ ಇಲಾಖೆ ಯಲ್ಲಿ ಸೇವಾ ಜ್ಯೇಷ್ಠತೆ ಪಟ್ಟಿಯಲ್ಲಿ ಲೋಪ ಗಳಾಗಿವೆ ಪರಿಶಿಷ್ಟ ನೌಕರರಿಗೆ ಅನ್ಯಾಯ ಮಾಡ ಲಾಗಿದೆ ಎಂಬ ಕೂಗು ನೌಕರರ ವಲಯದಲ್ಲಿದೆ

 


Join The Telegram Join The WhatsApp

Suddi Sante Desk

Leave a Reply