ಬೆಂಗಳೂರು –
ರಾಜ್ಯದಲ್ಲಿ ಲಕ್ಷಾಂತರ ಶಾಲೆಗಳಿದ್ದು ಈ ನಡುವೆ ಅಧಿಕೃತ ಶಾಲೆಗಳು ಕೇವಲ 17000 ಅರೇ ಇವರೇನು ಹೇಳತಾ ಇದ್ದಾರೆಂದು ಗಾಬರಿಯಾಗ ಬೇಡಿ ಈ ಒಂದು ಪಟ್ಟಿ ಯನ್ನು ಇಲಾಖೆ ಸಧ್ಯ ಬಿಡುಗಡೆ ಮಾಡಿದೆ
ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಡಿಎಸ್‌ಇಎಲ್) ಕರ್ನಾಟಕದ 17,000 ಕ್ಕೂ ಹೆಚ್ಚು ಅಧಿಕೃತ ಖಾಸಗಿ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಈ ಪಟ್ಟಿ ಬಿಡುಗಡೆಯ ನಂತರ ಪೋಷಕರು ಕೂಡಾ ಗೊಂದಲಕ್ಕೆ ಈಡಾಗುವಂ ತಾಗಿದೆ.ಯಾಕೆಂದರೆ ಸರ್ಕಾರದ ಒಪ್ಪಿಗೆ ಇಲ್ಲದೆ ನಡೆಸುತ್ತಿರುವ ಶಾಲೆಗಳಿಗೆ ದಾಖಲಾದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಡಿಎಸ್‌ಇಎಲ್‌ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಪಟ್ಟಿಯಲ್ಲಿ ಜಿಲ್ಲಾವಾರು ಶಾಲೆಗಳ ಹೆಸರನ್ನು ನೀಡಲಾಗಿದೆ.ಅದರ ಅಡಿಯಲ್ಲಿ ಒಬ್ಬರು ಬ್ಲಾಕ್ ಅನ್ನು ಆಯ್ಕೆ ಮಾಡಿಕೊಳ್ಳಬೇಕ ಇಲ್ಲಿ ತಮ್ಮ ಮಗುವಿನ ಶಾಲೆಯು ಅಧಿಕೃತವಾಗಿ ದೆಯೇ ಎಂದು ನೋಡಲು ಪಟ್ಟಿ ಮಾಡಲಾದ ಹೆಸರುಗಳ ಸರಣಿಯನ್ನು ನೋಡಬೇಕು.
ಈ ಶಾಲೆಗೆ ಅನುಮತಿ ನೀಡಿದ ಅವಧಿಯನ್ನು ಕೂಡಾ ಪರಿಶೀಲಿಸಬಹುದು.ಈ ಲಿಸ್ಟ್ ಶಾಲೆಯು ನೀಡಬಹುದಾದ ಬೋರ್ಡ್‌ಗಳು ಮತ್ತು ತರಗತಿ ಗಳನ್ನು ಸಹ ಉಲ್ಲೇಖಿಸುತ್ತದೆ.ಬೆಂಗಳೂರು ಒಂದರಲ್ಲೇ, 3,064 ಶಾಲೆಗಳು ಅನುಮೋದನೆ ಪಡೆದಿದೆ.
ಈ ಪೈಕಿ ಬೆಂಗಳೂರು ದಕ್ಷಿಣ (1,312) ಉತ್ತರ (1,302) ಮತ್ತು ಗ್ರಾಮಾಂತರ (449)ಗಳಲ್ಲಿ ಅಧಿಕೃತ ಶಾಲೆಗಳಿವೆ. ಇನ್ನು ಎಷ್ಟು ಶಾಲೆಗಳು ಅನುಮತಿ ಇಲ್ಲದೆ ನಡೆಯುತ್ತಿದೆ ಎನ್ನುವುದರ ಬಗ್ಗೆ ನಿಖರ ಮಾಹಿತಿಯನ್ನು ಇಲಾಖೆ ಅಧಿಕಾರಿ ಗಳು ನೀಡಿಲ್ಲ
ಈ ಬಗ್ಗೆ ಮಾತನಾಡಿದ ಡಿಎಸ್‌ಇಎಲ್‌ನ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಮಾರ್ ಸಿಂಗ್,ನಾವು ಅನಧಿಕೃತ ಶಾಲೆಯ ಪಟ್ಟಿಯನ್ನು ನೀಡುತ್ತಿಲ್ಲ. ಬದಲಾಗಿ ನಾವು ಸಕಾರಾತ್ಮಕ ನಿರ್ಮಾಣಕ್ಕೆ ಒತ್ತು ನೀಡುತ್ತಿದ್ದೇವೆ.ಇಲ್ಲಿ ಅಧಿಕೃತ ಶಾಲೆಗಳ ಪಟ್ಟಿ ನೋಡುವ ಮೂಲಕ ಪೋಷಕರಿಗೆ ಅವರ ಮಕ್ಕಳು ಓದುತ್ತಿರುವ ಶಾಲೆ ಅಧಿಕೃತವೇ, ಅನಧಿಕೃತವೆ ಎನ್ನುವುದು ತಿಳಿಯಲಿದೆ ಎಂದಿದ್ದಾರೆ.
ಅಲ್ಲದೆ ಈ ಪಟ್ಟಿಯನ್ನು ಪರಿಶೀಲಿಸುವ ಮೂಲಕ ಪೋಷಕರು ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..