ಬೆಂಗಳೂರು –
ಲೋಕಾಯುಕ್ತ ಬಲೆಗೆ ಬಿದ್ದ ಮತ್ತೊಬ್ಬ ಭ್ರಷ್ಟ ಸರ್ಕಾರಿ ಅಧಿಕಾರಿ ಲಂಚ ತಗೆದುಕೊಳ್ಳುವಾಗ ರೇಡ್ ಹ್ಯಾಂಡ್ ಆಗಿ ಟ್ರ್ಯಾಪ್.ಹೌದು ರಾಜಧಾನಿ ಬೆಂಗಳೂರಿನಲ್ಲಿ ಇಂತಹ ದೊಂದು ದಾಳಿಯೊಂ ದು ನಡೆದಿದ್ದು ಅಧಿಕಾರಿಯೊಬ್ಬರು ಬಲೆಗೆ ಬಿದ್ದಿದ್ದಾನೆ.
ಲಂಚ ಪಡೆಯುತ್ತಿರುವಾಗಲೇ ಅಧಿಕಾರಿ ಲೋಕಾಯುಕ್ತರಿಗೆ ಸಿಕ್ಕು ಬಿದ್ದಿದ್ದಾನೆ ಒಂದೇ ವಾರದಲ್ಲಿ ಲೋಕಾಯುಕ್ತರು ಮತ್ತೊಂದು ಯಶಸ್ಸು ಕಂಡಿದ್ದಾರೆ.
ನಗರದ ಸಿವಿ ರಾಮನ್ ನಗರದಲ್ಲಿ ಈ ಒಂದು ದಾಳಿ ನಡೆದಿದ್ದು ಈ ಬಾರಿ ಹೆಲ್ತ್ ಇನ್ಸ್ಪೆಕ್ಟರ್ 18 ಸಾವಿರ ರೂಪಾಯಿ ಲಂಚ ತಗೆದುಕೊಳ್ಳುವಾಗ ಬಿಬಿಎಂಪಿ ಹೆಲ್ತ್ ಇನ್ಸ್ಪೆಕ್ಟರ್ ರಾಮಯ್ಯ (ವಾರ್ಡ್ ಸಂಖ್ಯೆ 58) ಸಿಕ್ಕಿಬಿದ್ದಿದ್ದಾರೆ. ಸ್ಪಾ ಒಂದರ ಪರವಾನಗಿಯನ್ನು ನವೀಕರಿಸಲು ಲಂಚವನ್ನು ಕೇಳಿದ್ದರು.
ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರನ್ನು ನೀಡಲಾಗಿತ್ತು.ಹೆಲ್ತ್ ಇನ್ಸ್ಪೆಕ್ಟರ್ ರಾಮಯ್ಯ ಲಂಚ ಪಡೆಯುತ್ತಿದ್ದಾಗಲೇ ಸಿಕ್ಕಿ ಬಿದ್ದಿದ್ದಾರೆ ಲೋಕಾಯುಕ್ತ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಅವರ ನಿವಾಸದ ಮೇಲೆಯೂ ದಾಳಿ ನಡೆದಿದ್ದು ತನಿಖೆ ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..