ಬೆಂಗಳೂರು –
ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಬಿಸಿ ಹಾಲಿನ ದರ ಹೆಚ್ಚಳ – ಪ್ರತಿ ಲೀಟರ್ ಗೆ 2.10 ರೂಪಾಯಿ ಹೆಚ್ಚಳ ಹೊರಬೀತ್ತು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ನಾಳೆಯಿಂದ ಹೊಸ ದರ ಜಾರಿ ಹೌದು
ಈಗಾಗಲೇ ಬೆಲೆ ಏರಿಕೆಯಿಂದ ಬೇಸತ್ತಿರುವ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಬೆಲೆ ಏರಿಕೆಯ ಶಾಕ್ ನೀಡಿದೆ.ಹೌದು ಕಳೆದ ವಾರವಷ್ಟೇ ಪೆಟ್ರೋಲ್ ಡಿಸೈಲ್ ದರವನ್ನು ಹೆಚ್ಚಳ ಮಾಡಿದ ಬೆನ್ನಲ್ಲೇ ಸಧ್ಯ ಹಾಲಿನ ದರ ವನ್ನು ಹೆಚ್ಚಳ ಮಾಡಲಾಗಿದೆ.ಪ್ರತಿ ಲೀಟರ್ ನಂದಿನ ಹಾಲಿನ ದರವನ್ನು 2.10 ರೂ ಹೆಚ್ಚಳ ವನ್ನು ಮಾಡಲಾಗಿದೆ.
ಈ ಒಂದು ಕುರಿತಂತೆ ರಾಜ್ಯ ಸರ್ಕಾರವು ಆದೇಶವನ್ನು ಕೂಡಾ ಮಾಡಿದ್ದು KMF ಕೂಡಾ ಅಧಿಕೃತವಾದ ಆದೇಶವನ್ನು ಮಾಡಿದೆ.ಕರ್ನಾಟಕ ಹಾಲು ಮಹಾಮಂಡಳ ಕೆಎಂಎಫ್ ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಿದ್ದು ಹೊಸ ದರ ನಾಳೆಯಿಂದಲೇ ಅನ್ವಯವಾಗಲಿದ್ದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಅಧಿಕೃತವಾದ ಮಾಹಿತಿ ಯನ್ನು ನೀಡಿದ್ದಾರೆ.
ಕಳೆದ 05 ದಶಕಗಳಿಂದಲೂ ತನ್ನ ಸದಸ್ಯ ಹಾಲು ಒಕ್ಕೂಟಗಳ ಮೂಲಕ ರಾಜ್ಯದ 27 ಲಕ್ಷಕ್ಕೂ ಹೆಚ್ಚು ಹೈನುಗಾರರಿಂದ ಹಾಲು ಖರೀದಿಸಿ ಸಂಸ್ಕರಿಸಿ ಗೋವಿನಿಂದ ಗ್ರಾಹಕರವರೆಗೆ ಎಂಬ ಶೀರ್ಷಿಕೆಯನ್ನು ಹೊತ್ತು “ನಂದಿನಿ” ಬ್ಯಾಂಡ್‌ನಲ್ಲಿ ಉತ್ಕೃಷ್ಟ ಗುಣಮಟ್ಟದ ವಿವಿಧ ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಪರಿಚಯಿಸಿರುತ್ತದೆ.
ಪ್ರಸ್ತುತ ಸುಗ್ಗಿ ಕಾಲವಾಗಿರುವುದರಿಂದ ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಹಾಲಿನ ಶೇಖರಣೆಯು ಪ್ರತಿ ದಿನ ಹೆಚ್ಚಾಗುತ್ತಿದ್ದು ಪ್ರಸ್ತುತ ಶೇಖರಣೆಯೂ ಒಂದು ಕೋಟಿ ಲೀಟರ್‌ಗಳ ಹತ್ತಿರ ತಲುಪಿರುತ್ತದೆ ಈ ಹಿನ್ನೆಲೆಯಲ್ಲಿ ಗ್ರಾಹಕ ರಿಗೆ ಹೆಚ್ಚುವರಿಯಾಗಿ ಪ್ರತಿ ಅರ್ಧ ಲೀಟರ್ (500) ಮತ್ತು ಒಂದು ಲೀಟರ್ (2000ML) ಪ್ಯಾಕೇಟ್‌ಗಳಿಗೆ ಮಾತ್ರ 50 ಮಿಲಿ ಹಾಲನ್ನು ಹೆಚ್ಚುವರಿ ನೀಡುವುದರೊಂದಿಗೆ
ಪ್ರತಿ ಪ್ಯಾಕೇಟ್‌ಗಳ ದರವನ್ನು ರೂ.2/-ರಂತೆ ಹೆಚ್ಚಳ ಮಾಡಲಾಗುತ್ತಿದೆ.ಅದರ ಅನ್ವಯ ನಂದಿನಿ ಹಾಲಿನ ವಿವಿಧ ಮಾದರಿಗಳ ಪ್ರಮಾಣ ಹಾಗೂ ಮಾರಾಟ ದರವನ್ನು ಹೆಚ್ಚಳ ಮಾಡಲಾ ಗಿದ್ದು ಅಧಿಕೃತವಾಗಿ ಆದೇಶವನ್ನು ಕೂಡಾ ಮಾಡಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..