ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರೇ ಗಮನಿಸಿ ಇಲ್ಲಿದೆ ಬಹುಮುಖ್ಯವಾದ ಮಾಹಿತಿ – ಮಹಾ ಸಮ್ಮೇಳ ನಕ್ಕೆ ಬರುವ ಪ್ರತಿಯೊಬ್ಬ ನೌಕರರಿಗೂ ಇಲ್ಲಿದೆ ಒಂದಿಷ್ಟು ಮುಖ್ಯವಾದ ಮಾಹಿತಿ ಹೌದು
ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಸಮಾರಂಭ ಫೆಬ್ರುವರಿ 27 ರಂದು ಬೆಂಗಳೂರಿ ನಲ್ಲಿ ನಡೆಯಲಿದೆ.ಐತಿಹಾಸಿಕ ಈ ಒಂದು ಸಮಾರಂಭಕ್ಕಾಗಿ ಈಗಾಗಲೇ ಅರಮನೆ ಮೈದಾನ ಮಧುವಣಗಿತ್ತಿಯಂತೆ ಸಿದ್ದವಾಗು ತ್ತಿದೆ.ಇನ್ನೂ ಈ ಒಂದು ಕಾರ್ಯಕ್ರಮಕ್ಕೆ ಬರುವ ನೌಕರರಿಗೆ ರಾಜ್ಯ ಸರ್ಕಾರಿ ನೌಕರರ ಸಂಘಟನೆ ಒಂದಿಷ್ಟು ಮಾಹಿತಿಯನ್ನು ನೀಡಿದೆ.ಹೌದು ಈ ಒಂದು ದೊಡ್ಡ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ನೌಕರರು ಬರುತ್ತಿದ್ದು ಹೀಗಾಗಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನಕ್ಕೆ ಬರುವ ಸರ್ಕಾರಿ ನೌಕರರಿಗೆ ಇಲ್ಲಿದೆ ಮುಖ್ಯ ಮಾಹಿತಿ.
ಅರಮನೆ ಆವರಣದಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಮತ್ತು ಆಡಳಿತದಲ್ಲಿ ಕಾರ್ಯ ಕ್ಷಮತೆ ಕಾರ್ಯಾಗಾರವನ್ನು ಆಯೋಜಿಸಿದೆ. ಸಮ್ಮೇಳನದ ಕುರಿತು ಸರ್ಕಾರ ನೌಕರರಿಗೆ ಮಹತ್ವದ ಮಾಹಿತಿ ನೀಡಿದೆ.ದಿನಾಂಕ: 27-02-2024 ರಂದು ಮಂಗಳವಾರ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ ಹಾಜರಾಗುವ ಎಲ್ಲಾ ನೌಕರರು ಬೆಳಿಗ್ಗೆ 10.00ರ ಒಳಗಾಗಿ ಉಪಹಾರ ಮುಗಿಸಿಕೊಂಡು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಹಾಜರಿರಬೇಕು.ಬೆಳಗ್ಗೆ 10.30ಕ್ಕೆ ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಖ್ಯಾತ ಹೃದ್ರೋಗ ತಜ್ಞರಾದ ಡಾ.ಸಿ.ಎನ್.ಮಂಜುನಾಥ್ ರವರು ಕಾರ್ಯಾಗಾ ರದಲ್ಲಿ ‘ವಿಶೇಷ ಉಪನ್ಯಾಸ’ವನ್ನು ನೀಡಲಿದ್ದಾರೆ.
ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಂದ ಕಾರ್ಯಕ್ರಮ ಉದ್ಘಾಟನೆಯಾಗಲಿದೆ.ಉಪ ಮುಖ್ಯಮಂತ್ರಿ ಗಳಾದ ಡಿ.ಕೆ.ಶಿವಕುಮಾರ್ ರವರು ಕಾರ್ಯಕ್ರ ಮದಲ್ಲಿ ನೌಕರರಿಗೆ ಆಶಯ ನುಡಿಗಳನ್ನಾಡಲಿ ದ್ದಾರೆ.ಮಧ್ಯಾಹ್ನ 1.30ರ ನಂತರ ಲಘು ಭೋಜನ ವ್ಯವಸ್ಥೆ ಮಾಡಲಾಗಿದೆ.ಕಾರ್ಯಕ್ರಮ ಮುಗಿದ ನಂತರ ಭಾಗವಹಿಸಿದ ಸರ್ಕಾರಿ ನೌಕರರಿಗೆ ಮಾತ್ರ ಸ್ಥಳದಲ್ಲಿಯೇ ಹಾಜರಾತಿ ಪ್ರಮಾಣ ಪತ್ರವನ್ನು ನೀಡಲಾಗುವುದು.
ಯಾವುದೇ ಕಾರಣಕ್ಕೂ ಹಾಜರಾತಿ ಪ್ರಮಾಣ ಪತ್ರಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರುವವರಿಗೆ ನೀಡಲಾಗುವುದಿಲ್ಲ.ಕಾರ್ಯಕ್ರಮ ಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಬಸ್ ಗಳಿಗೆ ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆ ಯನ್ನು ಮಾಡಲಾಗಿದೆ.ಸರ್ಕಸ್ ಮೈದಾನ, ಜಯಮಹಲ್ ರಸ್ತೆ, ಟಿ.ವಿ. ಟವರ್ ಎದುರು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಇದಕ್ಕಾಗಿ ಕ್ಯೂ.ಆರ್.ಕೋಡ್ ಮತ್ತು ಲಿಂಕ್ ಈಗಾಗಲೇ ಸಾಮಾಜಿಕ ಜಾಲ ತಾಣಗಳ ಮೂಲಕ ಕಳುಹಿಸಲಾಗಿದೆ.ದ್ವಿಚಕ್ರ ವಾಹನಗಳು ಮತ್ತು ಲಘು ವಾಹನಗಳಿಗೆ ತ್ರಿಪುರವಾಸಿನಿ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಇದಕ್ಕೂ ಕೂಡಾ ಪ್ರತ್ಯೇಕವಾಗಿ ಕ್ಯೂ.ಆರ್. ಕೋಡ್ ಮತ್ತು ಲಿಂಕ್ ಈಗಾಗಲೇ ಕಳುಹಿಸ ಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..