ಬೆಂಗಳೂರು –
ಕೊನೆಗೂ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.ರಾಜ್ಯದ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿದ್ದ 7ನೇ ವೇತನ ಆಯೋಗ ವನ್ನು ಜಾರಿಗೆ ತರಲಾಗಿದೆ ಹೌದು ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಕೊನೆಗೂ 7ನೇ ವೇತನ ಆಯೋಗ ವನ್ನು ಅನುಷ್ಠಾನ ಮಾಡಲು ಒಪ್ಪಿಗೆ ನೀಡಲಾಗಿದೆ
ಈಗಾಗಲೇ ಈ ಒಂದು ವಿಚಾರ ಕುರಿತು ರಾಜ್ಯದ ಸರ್ಕಾರಿ ನೌಕರರು ಹೋರಾಟಕ್ಕೆ ಕರೆ ನೀಡಿದ್ದರು ಈ ಒಂದು ನೌಕರರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಸಚಿವ ಸಂಪುಟದ ಸಭೆಯಲ್ಲಿ 7ನೇ ವೇತನ ಆಯೋಗ ಅನುಷ್ಠಾನ ಕ್ಕೆ ಒಪ್ಪಿಗೆ ನೀಡಿದ್ದು ಆಗಸ್ಟ್ ಒಂದರಿಂದ ಏಳನೇ ವೇತನ ಆಯೋಗ ಜಾರಿಗೆ ಸೂಚನೆ ನೀಡಲಾಗಿದೆ ಸಂಪುಟ ಸಭೆಯಲ್ಲಿ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.
ಇನ್ನೂ ಈ ಒಂದು ವಿಚಾರ ಕುರಿತು ಸುದ್ದಿ ಸಂತೆ ನ್ಯೂಸ್ ಬೆಳಿಗ್ಗೆ ಅಷ್ಟೇ ವರದಿ ಪ್ರಸಾರ ಮಾಡಿತ್ತು ಈ ಒಂದು ವರದಿ ಗೆ ಸಚಿವ ಸಂಪುಟದ ಒಪ್ಪಿಗೆ ಸತ್ಯವಾಗಿದ್ದು ಏನೇ ಆಗಲಿ ಬಹು ನಿರೀಕ್ಷಿತ ದೊಡ್ಡ ಪ್ರಮಾಣದ ವರದಿ ಯೊಂದಿಗೆ ರಾಜ್ಯ ಸರ್ಕಾರ ನೌಕರರಿಗೆ ಗುಡ್ ನ್ಯೂಸ್ ನೀಡಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..