ಬೆಂಗಳೂರು –
ಶಿಕ್ಷಕರ ವರ್ಗಾವಣೆ ಸಮಸ್ಯೆ ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಆಗುತ್ತಿದೆ.ಅದರಲ್ಲೂ ಯಾರಿಗೂ ಯಾವ ಇಲಾಖೆಗೂ ಇಲ್ಲದ ಈ ಒಂದು ವರ್ಗಾವಣೆ ಸಮಸ್ಯೆ ಗಂಭೀರವಾಗುತ್ತಿದ್ದು ಅದರಲ್ಲೂ ರಾಜ್ಯದಲ್ಲಿನ ಮಹಿಳಾ ಶಿಕ್ಷಕಿಯರ ಪಾಡು ಹೇಳತಿರದು ಇದರ ನಡುವೆ ಇಲ್ಲೊಬ್ಬರು ಮಹಿಳಾ ಶಿಕ್ಷಕಿ ವರ್ಗಾವಣೆ ಕುರಿತು ನೊಂದು ಕೊಂಡಿರುವ ಮಾತುಗಳನ್ನು ಹೇಳಿದ್ದಾರೆ
ಹೌದು ರಾಜ್ಯದ ಶಿಕ್ಷಣ ಸಚಿವರಲ್ಲಿ ವಿನಂತಿ ಮಾಡಿಕೊಂಡು ದಯಮಾಡಿ ತಾವು ವರ್ಗಾವಣೆ ಆಗದಿರುವುದರಿಂದ ಒಂಟಿ ಜೀವನದ ಕೌಟುಂಬಿಕ,ದೈಹಿಕ,ಮಾನಸಿಕ, ಅನಾರೋಗ್ಯದ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ
ಒಂದು ನಿಮಿಷದ ವಿಡಿಯೋಗಳಲ್ಲಿ ಎಲ್ಲವನ್ನೂ ಹಂಚಿ ಕೊಂಡಿದ್ದು ಇನ್ನಾದರೂ ಇದನ್ನು ಅರ್ಥ ಮಾಡಿಕೊಂ ಡು ವರ್ಗಾವಣೆ ಮಾಡಿದರೆ ಒಳಿತು ಎಲ್ಲಾ ರೀತಿಯ ಆಂದೋ ಲನಗಳು ಆಗಬೇಕಾಗಿವೆ ದಯಮಾಡಿ ಎಚ್ಚೆತ್ತುಕೊಳ್ಳೊದು ಅವಶ್ಯಕತೆ ಇದೆ.