ಧಾರವಾಡ –
BIG MISHRA ದಲ್ಲಿ ಸುವಾಸನೆ ಬಿರುತ್ತಿದೆ ಭಾರತೀಯ ಸಿಹಿತಿಂಡಿಗಳ ರಾಜ ಘೇವರ್ ಸಂಜಯ ಮಿಶ್ರಾರವರ ಬಿಗ್ ಮಿಶ್ರಾ ದಲ್ಲಿ ಗಮಗಮಿಸುತ್ತಿದೆ ರಾಜಸ್ಥಾನದ ಘೇವರ್ ಸ್ವೀಟ್…..ಬಾಯಲ್ಲಿ ನೀರೂರಿಸುವ ಘೇವರ್ ಸವಿರುಚಿ ಒಮ್ಮೆ ನೋಡಿ…..
ಧಾರವಾಡ ಪೇಢಾ ಮೂಲಕ ಮನೆ ಮಾತಾಗಿ ಸಧ್ಯ ಬೇರೆ ಬೇರೆ ಸಿಹಿ ಪದಾರ್ಥಗಳೊಂದಿಗೆ ಇನ್ನೂ ಕೆಲವೊಂದಿಷ್ಟು ಆಹಾರಗಳ ಮೂಲಕ ಫೇಮಸ್ ಆಗಿದೆ ಬಿಗ್ ಮಿಶ್ರಾ.ಸಂಜಯ ಮಿಶ್ರಾ ಮಾಲಿಕತ್ವದ ಈ ಒಂದು ಬಿಗ್ ಮಿಶ್ರಾ ಸಾಂಪ್ರ ದಾಯಿಕ ತಿಂಡಿ ತಿನಿಸುಗಳೊಂದಿಗೆ ಈಗಷ್ಟೇ ಹೊಟೇಲ್ ಕ್ಷೇತ್ರಕ್ಕೂ ಕಾಲಿಟ್ಟಿದ್ದು ಇನ್ನೂ ಈ ಒಂದು ಬಿಗ್ ಮಿಶ್ರಾ ದಲ್ಲಿ ಘೇವರ್ ಎಂಬ ವಿಶೇಷ ಸಿಹಿ ಪರಾರ್ಥವನ್ನು ಮಾಡಲಾಗುತ್ತಿದೆ.
ದೂರದ ರಾಜಸ್ಥಾನ ರಾಜ್ಯದ ಈ ಒಂದು ಸ್ವೀಟ್ ನ್ನು ಸಧ್ಯ ಬಿಗ್ ಮಿಶ್ರಾದಲ್ಲೂ ಮಾಡಲಾಗುತ್ತಿದೆ ಸಧ್ಯ ಈ ಒಂದು ಹೆಸರಾಂತ ಸಿಹಿ ಪದಾರ್ಥವನ್ನು ಇಲ್ಲಿಯೇ ತಯಾರು ಮಾಡುವ ಮೂಲಕ ಜನಪ್ರಿಯವಾಗಿರುವ ಬಿಗ್ ಮಿಶ್ರಾ ಮತ್ತೊಂದು ವಿಶೇಷ ಸ್ವೀಟ್ ನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ ಸಂಜಯ ಮಿಶ್ರಾ. ಘೇವರ್ ಭಾರತೀಯ ಸಿಹಿ ತಿಂಡಿಗಳ ರಾಜನಾಗಿದ್ದು ವಿವಿಧತೆಯಲ್ಲಿ ಏಕತೆ ಯನ್ನು ಹೊಂದಿರುವ ನಮ್ಮ ದೇಶದಲ್ಲಿ ಇದೊಂದು ಕೂಡಾ ಭಾರತೀಯ ಸಿಹಿತಿಂಡಿ ತಿನಿಸುಗಳಲ್ಲಿ ಇದೊಂದು ಕೂಡಾ ತುಂಬಾ ಫೇಮಸ್ ಆಗಿದೆ.
ಘೇವರ್ ಭಾರತೀಯ ಸಿಹಿತಿಂಡಿಗಳ ರಾಜ ಎಂದೇ ಕರೆಯಿಸಿಕೊಳ್ಳುತ್ತಿದೆ.ಸ್ವಲ್ಪ ಗರಿಗರಿ ಯಾದ,ಸ್ವಲ್ಪ ಮೃದುವಾದ,ಸಕ್ಕರೆಯ ಆನಂದ ದಿಂದ ಲೇಪಿತ ಮತ್ತು ಶ್ರೀಮಂತ ಮಲೈ ಅಥವಾ ರಾಬ್ರಿಯೊಂದಿಗೆ ತಯಾರಾದ ಆಹಾರ ಪದಾರ್ಥವು ಅಗ್ರಸ್ಥಾನದಲ್ಲಿದೆ.ಇದನ್ನು ನೋಡಿ ದರೆ ಬಾಯಲ್ಲಿ ನೀರು ಬರುತ್ತಿವೆ ಎಂಬ ಮಾತು ಗಳು ಕೂಡಾ ಕೇಳಿ ಬರುತ್ತಿದ್ದು ಇದಕ್ಕೆ ಘೇವರ್ ಸವಿರುಚಿಯನ್ನು ಸವಿದಾಗ ಗೊತ್ತಾಗುತ್ತದೆ.
ಎಲ್ಲಾ ಭಾರತೀಯ ಸಿಹಿತಿಂಡಿಗಳಲ್ಲಿ ಇದೊಂದು ರಾಜ ಎಂದೇ ಕರೆಯಲಾಗುತ್ತಿದೆ ಸಾಂಪ್ರದಾಯಿ ಕವಾಗಿ ತೀಜ್ ಹಬ್ಬಕ್ಕೆ ಸಂಬಂಧಿಸಿದ ರಾಜಸ್ಥಾನಿ ಸಿಹಿತಿಂಡಿಯಾಗಿದೆ.ಮಳೆಗಾಲದಲ್ಲಿ ಇದನ್ನು ವಿಶೇಷವಾಗಿ ಸವಿಯುತ್ತಾರೆ.ದೂರದ ರಾಜಸ್ಥಾನ ರಾಜ್ಯದ ಈ ಒಂದು ಸಿಹಿಯ ಸವಿಯನ್ನು ಸವಿ ಯಲು ನಾವು ಅಲ್ಲಿಗೆ ಹೋಗುವ ಅವಶ್ಯಕತೆ ಇಲ್ಲ ಇದರ ಸವಿರುಚಿಯನ್ನು ಸಧ್ಯ ಸಂಜಯ ಮಿಶ್ರಾ ರವರು ಉಣಬಡಿಸುತ್ತಿದ್ದಾರೆ
ಭಾರತದ ಕೆಲವು ಭಾಗಗಳಲ್ಲಿ ಈ ಒಂದು ಸ್ವೀಟ್ ಸಿಗುತ್ತಿತ್ತು ಸಧ್ಯ ಇದು ಬಿಗ್ ಮಿಶ್ರಾದಲ್ಲೂ ಸಿದ್ದ ವಾಗುತ್ತಿದ್ದು ಇದಕ್ಕಾಗಿ ರಾಜಸ್ಥಾನದಿಂದ ವಿಶೇಷ ಬಾಣಸಿಗರೇ ಮಾಡುತ್ತಿದ್ದಾರೆ.ಇದೊಂದು ಡಿಸ್ಕ್-ಆಕಾರದ ಸಿಹಿ ಪದಾರ್ಥವಾಗಿದ್ದು ಗರಿಗರಿಯಾದ ಕೇಕ್ ನಂತೆ ಕಂಡು ಬರುತ್ತಿದೆ. ಮೈದಾದಿಂದ (ಸಂಸ್ಕರಿಸಿದ ಹಿಟ್ಟು)ಸಕ್ಕರೆ ಪಾಕದಲ್ಲಿ ನೆನೆಸಿ, ಕೆಲವು ಡ್ರಾಯ್ ಪ್ರೂಟ್ಸ್ ಗಳ ಬೀಜಗಳೊಂದಿಗೆ ಮಾಡಲಾಗುತ್ತದೆ.
ಅದನ್ನು ತಯಾರಿಸುವುದು ಸುಲಭವಲ್ಲ ಇದೊಂದು ಕಲೆಯಾಗಿದ್ದು ತೆಳುವಾದ ಹಿಟ್ಟಿನ ಗೆರೆ ಬಿಸಿ ತುಪ್ಪ ಅಥವಾ ಎಣ್ಣೆಗೆ ಹೋಗುತ್ತದೆ ನಂತರ ಅದು ಕೆಲವು ಸೆಕೆಂಡುಗಳಲ್ಲಿ ನೆಲೆಗೊ ಳ್ಳುವ ಜ್ವಾಲಾಮುಖಿಯಂತಹ ಗುಳ್ಳೆಗಳನ್ನು ರೂಪಿಸುತ್ತದೆ.ನಂತರ ಮತ್ತೆ ಎಣ್ಣೆಯಲ್ಲಿ ಹಿಟ್ಟಿನ ಗೆರೆಯನ್ನು ಹಾಕಿದಾಗ ಇದು ರೇಡಿಯಾಗುತ್ತದೆ.
ಡೀಪ್ ಫ್ರೈ ಮಾಡಿದಾಗ ಅದು ಗರಿಗರಿಯಾಗಿ ಹೊರಬರುತ್ತದೆ ಮತ್ತು ಸ್ವಲ್ಪ ಮೃದುವಾಗಲು ಸ್ವಲ್ಪ ತೇವಾಂಶದ ಅಗತ್ಯವಿದೆ.ಅದಕ್ಕಾಗಿಯೇ ಇದನ್ನು ಮಳೆಗಾಲದಲ್ಲಿ ತಯಾರಿಸಲಾಗುತ್ತದೆ. ಮಳೆಗಾಲದಲ್ಲಿ ಆರ್ದ್ರತೆ ಇರುತ್ತದೆ.ಇದು ಗಾಳಿ ಯಲ್ಲಿನ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ಮೃದು ಮತ್ತು ಕೋಮಲವಾಗುತ್ತದೆ. ಆದರೆ ಈಗ, ಗರಿಗರಿಯಾದ ಘೇವರ್‌ಗೆ ಬೇಡಿಕೆ ಹೆಚ್ಚುತ್ತಿದೆ.
ಅದಕ್ಕಾಗಿಯೇ ಗ್ರಾಹಕರಿಗೆ ಈಗಾಗಲೇ ಬೇರೆ ಬೇರೆ ಸಿಹಿ ಪದಾರ್ಥಗಳ ಸವಿರುಚಿಯನ್ನು ಉಣಬಡಿಸುತ್ತಿರುವ ಸಂಜಯ ಮಿಶ್ರಾರವರು ಸಧ್ಯ ಮತ್ತೊಂದು ವಿಶೇಷವಾದ ರಾಜಸ್ಥಾನ ರಾಜ್ಯದ ಘೇವರ್ ಸಿಹಿ ಪದಾರ್ಥವನ್ನು ಪರಿಚ ಯಿಸಿದ್ದಾರೆ.ರುಚಿಕರವಾದ ರಾಜಸ್ಥಾನಿ ಸಿಹಿ ತಿಂಡಿಯಾಗಿದ್ದು ತೀಜ್ ಮತ್ತು ರಕ್ಷಾ ಬಂಧನದ ಹಬ್ಬವಾದಾಗ ಆಗಸ್ಟ್ ಅಥವಾ ಶ್ರಾವಣದ ಮಂಗಳಕರ ತಿಂಗಳುಗಳಲ್ಲಿ ಅತ್ಯಂತ ಜನಪ್ರಿಯವಾಗಿ ತಯಾರಿಸಲಾಗುತ್ತದೆ.
ಘೇವಾರ್ ಒಂದು ಡಿಸ್ಕ್-ಆಕಾರದ ಸಿಹಿ ಯಾಗಿದ್ದು ಅದು ಜೇನುಗೂಡನ್ನು ಹೋಲುವ ವಿನ್ಯಾಸವನ್ನು ಸಕ್ಕರೆ ಪಾಕದಲ್ಲಿ ನೆನೆಸಲಾ ಗುತ್ತದೆ.ಮಾವಾ ಮತ್ತು ಮಲೈ ಸೇರಿದಂತೆ ಹಲವು ಸಾಂಪ್ರದಾಯಿಕ ಸಿಹಿತಿಂಡಿ ಘೇವಾರ್ ನಲ್ಲಿ ಸಾಕಷ್ಟು ವಿಧಗಳಿವೆ.ಘೇವಾರ್‌ನ ಸುಲಭ ವಾದ ತೊಂದರೆಯಿಲ್ಲದ ಪಾಕವಿಧಾನ ಇಲ್ಲಿದೆ ನೀವು ಸುಲಭವಾಗಿ ಮನೆಯಲ್ಲಿ ಅಡುಗೆ ಮಾಡ ಬಹುದು ಮತ್ತು ನಿಮ್ಮ ಕುಟುಂಬದೊಂದಿಗೆ ಹಬ್ಬಗಳನ್ನು ಆನಂದಿಸಬಹುದು
ಇದನ್ನು ಸಧ್ಯ ಸಂಜಯ ಮಿಶ್ರಾ ರವರು ತಮ್ಮ ಬಿಗ್ ಮಿಶ್ರಾ ರವರು ತಮ್ಮ ಆಹಾರ ಮಳಿಗೆ ಯಲ್ಲಿ ಇದನ್ನು ಸಧ್ಯ ಗ್ರಾಹಕರಿಗಾಗಿ ನೀಡುತ್ತಿದ್ದು ನೀವು ಏನಾದರೂ ಈ ಒಂದು ಸಿಹಿ ಪದಾರ್ಥದ ಸವಿಯನ್ನು ಸವಿಯಬೇಕಾದರೆ ಒಮ್ಮೆ ಬಿಗ್ ಮಿಶ್ರಾ ಮಳಿಗೆಗೆ ಭೇಟಿ ನೀಡಿ ಟೆಸ್ಟ್ ಮಾಡಿ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..