ಬೆಂಗಳೂರು –
ರಾಜ್ಯದ ಸಮಸ್ತ NPS ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಿರಾಸೆ ಯನ್ನುಂಟು ಮಾಡಿದೆ.ಹೌದು ರಾಜ್ಯದ ಸಮಸ್ತ NPS ನೌಕರರು ಇಟ್ಟುಕೊಂಡಿರುವ ಬಹುನಿರೀ ಕ್ಷಿತ ಆಸೆಗಳನ್ನು ನಿರಾಸೆ ಮಾಡಿದ ಬಜೆಟ್ ಎಂಬ ಮಾತುಗಳನ್ನು ರಾಜ್ಯದ ಎನ್ ಪಿ ಎಸ್ ನೌಕರರು ಮಾತನಾಡಿಕೊಳ್ಳುತ್ತಿದ್ದಾರೆ.
.ಎಲ್ಲಾ NPS ನೌಕರರು ವೋಟ್ ಫಾರ್ ಓ ಪಿ ಎಸ್ ಎನ್ನುವ ಅಭಿಯಾನದ ಮೂಲಕ ಹಳೇ ಪಿಂಚಣಿ ಜಾರಿಗೆ ಮಾಡುವ ಪಕ್ಷಕ್ಕೆ ನನ್ನ ನನ್ನ ಕುಟುಂಬದವರ,ಹಾಗೂ ನನ್ನ ಸಂಬಂಧಿಗಳ ವೋಟ್ ಇರುತ್ತದೆ ಎನ್ನುವ ಅಜೆಂಡಾದೊಂದಿಗೆ ಎಲ್ಲಾ ಎನ್ ಪಿ ಎಸ್ ನೌಕರರು ವೋಟ್ ಮಾಡಿದರು.
ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಇವತ್ತಿನ ಬಜೆಟ್ ನಲ್ಲಿ ಎನ್ ಪಿ ಎಸ್ ನೌಕರದಾರರಿಗೆ ಸಿಹಿಸುದ್ದಿ ಕೊಡುತ್ತೆ ಅಂತ ಅಂದುಕೊಂಡಿರುವ ಎಲ್ಲಾ ಎನ್ ಪಿ ಎಸ್ ನೌಕರದಾರರಿಗೆ ತುಂಬಾ ನಿರಾಸೆಯಾದ ಬಜೆಟ್ ಇದಾಗಿದೆ.
ಇದನ್ನುಇಂಡಿ ತಾಲೂಕ NPS ನೌಕರರ ಸಂಘದ ಕಾರ್ಯಧ್ಯಕ್ಷನಾದ ನಾನು ಇದನ್ನು ಖಂಡಿಸುತ್ತೇನೆ ಎಂದು ಆನಂದ ಭಿ ಕೆಂಭಾವಿ ಅವರು ಪತ್ರಿಕಾ ಪ್ರಕಟಣೆ ಮೂಲಕ ಹೇಳಿದ್ದಾರೆ.NPS ನೌಕರ
ಕ ರಾ ಸ ಎನ್ ಪಿ ಎಸ್ ನೌಕರರ ಸಂಘ ಇಂಡಿ ಘಟಕ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..