ಹುಬ್ಬಳ್ಳಿ –
ಸೆನ್ಸಾರ್ ಕಳೆದುಕೊಂಡ ಚಿಗರಿ – ಟುಯ್ ಟುಯ್ ಎನ್ನುತ್ತಿದ್ದರು ನೋಡದ ಅಧಿಕಾರಿಗಳು ಪರದಾಡುತ್ತಿದ್ದಾರೆ ಚಾಲಕರು…..ಅದರಲ್ಲಿಯೇ ಸಂಚಾರ ಮಾಡುತ್ತಿವೆ ಬಸ್ ಗಳು
ಹುಬ್ಬಳ್ಳಿ ಧಾರವಾಡ ಅವಳಿ ನಗರದ ಮಧ್ಯೆ ಸುಗಮ ಸಾರಿಗೆ ಸಂಪರ್ಕ ಸೇತುವೆಯಾಗಿ ಚಿಗರಿ ಬಸ್ ಗಳು ಸಂಚಾರವನ್ನು ಮಾಡುತ್ತಿವೆ.ಕಳೆದ ಐದು ವರ್ಷಗಳ ಹಿಂದೆ ಆರಂಭಗೊಂಡ ಈ ಒಂದು ಚಿಗರಿ ಬಸ್ ಗಳನ್ನು ನುರಿತ ಚಾಲಕರು ತುಂಬಾ ಜಾಗರೂಕತೆಯಿಂದ ಹುಬ್ಬಳ್ಳಿಯಿಂದ ಧಾರವಾಡ,ಧಾರವಾಡದಿಂದ ಹುಬ್ಬಳ್ಳಿ ರೇಲ್ವೆ ನಿಲ್ದಾಣ,ಸಿಬಿಟಿ,ಧಾರವಾಡದ ಹಳೆ ಬಸ್ ನಿಲ್ದಾಣ,
ಹೊಸ ಬಸ್ ನಿಲ್ದಾಣ ಹೀಗೆ ಜನರಲ್ ಮತ್ತು A ಮತ್ತು B ಹೀಗೆ ಎರಡು ಹಂತದಲ್ಲಿ ಸಂಚಾರ ವ್ಯವಸ್ಥೆ ನಡೆಯುತ್ತಿದೆ.ಇದು ಒಂದು ವಿಚಾರವಾ ದರೆ ಸಧ್ಯ ಹುಬ್ಬಳ್ಳಿ ಧಾರವಾಡ ಜನತೆಗೆ ಈ ಒಂದು ಚಿಗರಿ ಬಸ್ ಸೇವೆ ಏನೋ ಸಾಕಷ್ಟು ಅನುಕೂಲಕರವಾಗಿದೆ ಆದರೆ ಐದು ವರ್ಷಗ ಳಿಂದ ಅವಳಿ ನಗರದ ಮಧ್ಯೆ ಓಡಾಡುತ್ತಿರುವ ಈ ಒಂದು ಬಸ್ ಗಳ ವ್ಯವಸ್ಥೆ ಅಂದರೆ ಮೆಂಟೆ ನೆನ್ಸ್ ಇಲ್ಲದೇ ಸಾಕಷ್ಟು ತೊಂದರೆ ಸಮಸ್ಯೆಯಾ ಗುತ್ತಿದೆ.
ಈ ಹಿಂದೆ ಬಸ್ ನಲ್ಲಿದ್ದ ನಿಲ್ದಾಣಗಳ ಹೆಸರು ಗಳನ್ನು ಹೇಳುವ ವ್ಯವಸ್ಥೆ ನಿಂತುಕೊಂಡಿದೆ.ಐಟಿ ಸಂಪೂರ್ಣವಾಗಿ ಹಾಳಾಗಿದ್ದು ಕೇವಲ ಬಸ್ ಗಳ ಬೋರ್ಡ್ ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ ಇನ್ನೂ ಬಸ್ ಗಳು ಸಂಪೂರ್ಣವಾಗಿ ಸೆನ್ಸಾರ್ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು ಸರಿಯಾದ ಮೆಂಟೆನೆನ್ಸ್ ಇಲ್ಲದೇ ಬಸ್ ಗಳಲ್ಲಿ ಸಧ್ಯ ಹೇಳ ಲಾರದಷ್ಟು ಸಮಸ್ಯೆ ತೊಂದರೆಯಾಗುತ್ತಿದೆ.
ಬಸ್ ಗಳು ಎಲ್ಲೆಂದರಲ್ಲಿ ನಿಂತುಕೊಳ್ಳುತ್ತಿದ್ದು ನೆಮ್ಮದಿಯಿಂದ ಕರ್ತವ್ಯವನ್ನು ಮಾಡುತ್ತಿರುವ ಚಾಲಕರು ಕೈಕೊಡುತ್ತಿರುವ ಈ ಒಂದು ಬಸ್ ಗಳ ಬಿಡಿ ಯಿಂದಾಗಿ ಸಮಸ್ಯೆಯನ್ನು ಅನುಭವಿಸುತ್ತಿ ದ್ದಾರೆ.ಟುಯ್ ಟುಯ್ ಎಂಬ ಸದ್ದು ಪ್ರತಿ ಯೊಂದು ಬಸ್ ಗಳಲ್ಲಿ ಬರುತ್ತಿದ್ದು ಇದೊಂದು ಚಾಲನೆಯನ್ನು ಮಾಡುತ್ತಿರುವ ಚಾಲಕರಿಗೆ ಮತ್ತು ಪ್ರಯಾಣವನ್ನು ಮಾಡುವ ಸಾರ್ವಜನಿಕ ರಿಗೂ ಕಿರಿಕಿರಿಯಾಗುತ್ತಿದ್ದು
ಪ್ರತಿದಿನ ಇದನ್ನು ನೋಡಿದರು ಕಂಡರು ಕಾಣ ದಂತೆ ಇದ್ದಾರೆ ಅಧಿಕಾರಿಗಳು ಮೆಕ್ಯಾನಿಕ್ ಗಳು.ಇತ್ತ ಏನೇ ಆಗಲಿ ಡೂಟಿ ಆದರೆ ಸಾಕು ಬಿಡಿ ಎಂದುಕೊಂಡು ಜನರಲ್ ಮತ್ತು ಎ ಮತ್ತು ಬಿ ಹಂತದಲ್ಲಿರುವ ಚಾಲಕರು ಬಂದು ಡೂಟಿ ಮಾಡಿ ಹೋಗುತ್ತಿದ್ದು
ಸೆನ್ಸಾರ್ ಗಳನ್ನು ಕಳೆದು ಕೊಂಡಿರುವ ಚಿಗರಿ ಬಸ್ ಗಳ ಮೆಂಟೆನೆನ್ಸ್ ಗಳನ್ನು ಇನ್ನಾದರೂ ಇಲಾಖೆಗೆ ಹೊಸದಾಗಿ ವ್ಯವಸ್ಥಾಪಕರಾಗಿ ಬಂದಿರುವ ಮಹಿಳಾ ಅಧಿಕಾರಿಯವರು ನೋಡುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..