This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ರಾಜ್ಯಸಭಾ ಚುನಾವಣೆ 3 BJP,1 ಕಾಂಗ್ರೆಸ್ ಪಕ್ಷದ ಪಾಲು ಸಿದ್ದರಾಮಯ್ಯ ಕುಮಾರಸ್ವಾಮಿ ಇಬ್ಬರ ನಡುವಿನ ಜಗಳದ ಮಧ್ಯೆ ಗೆದ್ದ CM ಬಸವರಾಜ ಬೊಮ್ಮಾಯಿ…..

Join The Telegram Join The WhatsApp

 


ಬೆಂಗಳೂರು –

ರಾಜ್ಯಸಭೆಯಲ್ಲಿ ಖಾಲಿ ಇರುವ 16 ಸ್ಥಾನಗಳಿಗೆ ನಾಲ್ಕು ರಾಜ್ಯಗಳಲ್ಲಿ ನಡೆದ ಮತದಾನ ಇವತ್ತು ಅಂತ್ಯವಾಗಿದೆ. ರಾಜಸ್ತಾನ,ಮಹಾರಾಷ್ಟ್ರ,ಕರ್ನಾಟಕ ಮತ್ತು ಹರಿಯಾಣ ರಾಜ್ಯದ ಶಾಸಕರು ಇವತ್ತು ಮತ ಹಾಕಿದ್ದಾರೆ.ಚುನಾವಣೆ 57 ಸ್ಥಾನಗಳಿಗೆ ಘೋಷಣೆಯಾಗಿತ್ತು ಆದ್ರೆ 41ಸ್ಥಾನಗಳಿಗೆ ಈಗಾಗ್ಲೇ ಅವಿರೋಧವಾಗಿ ಅಭ್ಯರ್ಥಿಗಳು ಆಯ್ಕೆಯಾಗಿದ್ರು

16 ಸ್ಥಾನಗಳು ಮಾತ್ರ ಮಹತ್ವ ಪಡೆದುಕೊಂಡಿದ್ದು ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಹಿನ್ನಲೆ ಯಲ್ಲಿ ಕೂಡ ಮೇಲ್ಮನೆ ಚುನಾವಣೆ ನಿರ್ಣಾಯಕವಾಗಿತ್ತು. ಇದ್ರಲ್ಲಿ ಈಗ ರಾಜಸ್ಥಾನದಲ್ಲಿ ಅಡ್ಡಮತದಾನ ನಡೆದು ಆಡಳಿತ ಕಾಂಗ್ರೆಸ್‌ಗೆ ಲಾಭವಾಗಿದೆ ಎನ್ನಲಾಗಿದೆ.ಈ ಸಂಬಂಧ ಅಲ್ಲಿ ಒಬ್ಬ ಶಾಸಕರ ಮತವನ್ನು ತಡೆಹಿಡಿಯ ಲಾಗಿದೆ.ಅದಕ್ಕೆ ಫಲಿತಾಂಶ ಕೂಡ ವಿಳಂಬ ಆಗ್ತಿದೆ.ಇನ್ನು ರಾಜ್ಯದ ವಿಚಾರಕ್ಕೆ ಬರೋದಾದ್ರೆ ನಾಲ್ಕು ಸ್ಥಾನಗಳಲ್ಲಿ ಮೂರು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದು ಮತ್ತೊಂದು ಸ್ಥಾನ ಕಾಂಗ್ರೆಸ್‌ ಪಾಲಾಗಿದೆ. ಬಿಜೆಪಿಯಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ನಟ ಜಗ್ಗೇಶ್‌ ಮತ್ತು ಲೆಹರ್‌ ಸಿಂಗ್‌ ಗೆದ್ದು ಬೀಗಿದ್ದಾರೆ.

ಕಾಂಗ್ರೆಸ್‌ನಿಂದ ಜೈರಾಮ್‌ ರಮೇಶ್‌ ಆಯ್ಕೆಯಾಗಿದ್ದಾರೆ. ನಾಲ್ಕನೇ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.ಈ ಸ್ಥಾನಕ್ಕೆ ಬಿಜೆಪಿಯಿಂದ ಲೆಹರ್‌ ಸಿಂಗ್‌,ಕಾಂಗ್ರೆಸ್‌ ನಿಂದ ಮನ್ಸೂರ್‌ ಅಲಿ ಖಾನ್‌ ಮತ್ತು ಜೆಡಿಎಸ್‌ನಿಂದ ಕುಪೇಂದ್ರೆ ರೆಡ್ಡಿ ಸ್ಪರ್ಧಿಸಿದ್ರು.ಆದ್ರೆ ಜೆಡಿಎಸ್‌-ಕಾಂಗ್ರೆಸ್‌ ನಡುವಿನ ವೈಮನಸ್ಸು ಬಿಜೆಪಿಗೆ ವರದಾನವಾಯ್ತು ಲೆಹರ್‌ ಸಿಂಗ್‌ ಗೆಲ್ಲೋಕೆ ಕಾರಣವಾ ಯ್ತು ಅಂತ ಹೇಳಲಾಗಿದೆ.ಇನ್ನು ಇದಕ್ಕೂ ಮೊದ್ಲು ಮತ ದಾನ ಹಲವು ಹೈಡ್ರಾಮಾಗಳಿಗೆ ಸಾಕ್ಷಿಯಾಯ್ತು.ಜೆಡಿಎಸ್‌ ನಾಯಕ ಹೆಚ್‌.ಡಿ. ರೇವಣ್ಣ ಮತ ಹಾಕಿ ಡಿ.ಕೆ.ಶಿವಕುಮಾ ರ್‌ಗೆ ತೋರಿಸಿದ್ದು ಅವ್ರ ಮತವನ್ನ ಅಸಿಂಧುಗೊಳಿಸಬೇಕು ಅಂತ ಬಿಜೆಪಿ ಮತ್ತು ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ರು ಆದ್ರೆ ಆ ರೀತಿ ಏನು ಆಗಿಲ್ಲ ಅಂತ ಆಯೋಗ ರೇವಣ್ಣರಿಗೆ ಕ್ಲೀನ್‌ಚಿಟ್‌ ನೀಡ್ತು.ಇನ್ನು ಅಡ್ಡಮ ತದಾನ ಆಗುವ ಭೀತಿ ಎದುರಿಸಿದ್ದ ಜೆಡಿ ಎಸ್ ನಲ್ಲಿ ಮೂರ ರಿಂದ ನಾಲ್ಕು ಜನ ಶಾಸಕರು ರೆಬಲ್‌ ಆಗ್ತಾರೆ ಎನ್ನಲಾ ಗಿತ್ತು.ಆ‍ದ್ರೆ ಅದ್ರಲ್ಲಿ ಇಬ್ಬರು ಶಾಸಕರು ಮಾತ್ರ ಕೈ ಎತ್ತಿ ರೋದು ಮೇಲ್ನೋಟಕ್ಕೆ ಕಂಡುಬಂದಿದೆ.ಕೋಲಾರದ ಜೆಡಿಎಸ್‌ ಶಾಸಕ ಶ್ರೀನಿವಾಸಗೌಡ ತಾವು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿರೋದಾಗಿ ನೇರವಾಗಿ ಮಾಧ್ಯಮ ಗಳ ಮುಂದೆಯೇ ಹೇಳಿಕೊಂಡ್ರು.ನಾನು ಕಾಂಗ್ರೆಸ್‌ಗೆ ಮತ ಹಾಕದ್ದೀನಿ ಯಾಕಂದ್ರೆ I love it ಅಂತ ಹೇಳಿದ್ರು.ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆ.ಡಿ.ಕುಮಾರಸ್ವಾಮಿ ಆ ಮನುಷ್ಯನಿಗೆ ಮಾನ ಮರ್ಯಾದೆ ಇದ್ರೆ ರಾಜೀನಾಮೆ ಕೊಡ್ಲಿ ಜೆಡಿಎಸ್‌ ಗುರುತಿನೊಂದಿಗೆ ಎಲೆಕ್ಷನ್‌ ಗೆದ್ದು ಈಗ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಅಂತ ಕಿಡಿಕಾರಿದ್ರು.ಇನ್ನೂ ಅತ್ತ ಗುಬ್ಬಿ ಶಾಸಕ ಶ್ರೀನಿವಾಸ್‌ ಜೆಡಿಎಸ್‌ಗೆ ಮತ ಹಾಕಿ ದ್ದೀನಿ ಅಂತ ಸುಳ್ಳು ಹೇಳಿದ್ದಾರೆ.ಆದ್ರೆ ಮತದಾನದ ಡಬ್ಬಿ ಯೊಳಗೆ ಖಾಲಿ ಬ್ಯಾಲೆಟ್‌ ಪೇಪರ್‌ ಹಾಕಿದ್ದಾರೆ ಅಂತ ಕೂಡ ಹೆಚ್‌ಡಿಕೆ ಆರೋಪಿಸಿದ್ರು.ಗುಬ್ಬಿ ‍ಶ್ರೀನಿವಾಸ ಮಾತ್ರ ಇದನ್ನ ಅಲ್ಲಗಳೆದಿದ್ದಾರೆ.ಜೆಡಿಎಸ್‌ನ ಮತ್ತೊಬ್ಬ ರೆಬೆಲ್‌ ಶಾಸಕ ಜಿ.ಟಿ.ದೇವೇಗೌಡ ಕೂಡ ಅಸಮಾಧಾನ ಇದ್ರು ಜೆಡಿಎಸ್‌ಗೆ ಮತ ಹಾಕಿರೋದಾಗಿ ಹೇಳಿದ್ದಾರೆ.ಇನ್ನು ಇದ್ರ ಬೆನ್ನಲ್ಲೇ ಕೋಲಾರ ಶಾಸಕ ಶ್ರೀನಿವಾಸ್‌ ಗೌಡ ಅವ್ರನ್ನ ಪಕ್ಷದಿಂದ ಅಮಾನತು ಮಾಡಲಾಗಿದೆ ಅಂತ ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದ್ದಾರೆ.ಆದ್ರೆ ಇದು ಇನ್ನೂ ಅಧಿಕೃ ತಗೊಂಡಿಲ್ಲ.


Join The Telegram Join The WhatsApp

Suddi Sante Desk

Leave a Reply