This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

State Newsಧಾರವಾಡಬೆಂಗಳೂರು ನಗರ

ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಕ್ಷೇತ್ರದಲ್ಲಿ ಕೈ ಪಕ್ಷದ ಟಿಕೇಟ್ ಗೆ ಪೈಪೊಟಿ – ಚುನಾವಣೆಯ ಮುನ್ನವೇ ಜೋರಾಗಿದೆ ಟಿಕೇಟ್ ಗಾಗಿ ಲಾಬಿ ಅರ್ಜಿ ಸಲ್ಲಿಸಿದ್ದು ಯಾರು ಯಾರು ಗೊತ್ತಾ…..

Join The Telegram Join The WhatsApp

 


ಬೆಂಗಳೂರು

ಹೌದು ಇನ್ನೇನು ರಾಜ್ಯದಲ್ಲಿ ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಹತ್ತಿರ ಬರುತ್ತಿದೆ.ಮಹೂರ್ತ ಯಾವಾಗ ಘೋಷಣೆ ಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ರಾಜ್ಯದ ಎಲ್ಲಾ ಪಕ್ಷದವರಿದ್ದು ಇದರ ನಡುವೆ ಕಾಂಗ್ರೇಸ್ ಪಕ್ಷವು ಟಿಕೇಟ್ ಗಾಗಿ ಈಗಲೇ ಅರ್ಜಿಯನ್ನು ಸಲ್ಲಿಸಲು ಆಹ್ವಾನವನ್ನು ನೀಡಿದ್ದು ಹೀಗಾಗಿ ಈಗಲೇ ಚುನಾವಣೆಯ ಮುನ್ನವೇ ನಾ ಮುಂದು ನೀ ಮುಂದು ಎನ್ನುತ್ತಾ ತಮ್ಮ ತಮ್ಮ ಬೆಂಬಲಿಗ ರೊಂದಿಗೆ ಪಕ್ಷ ನೀಡಿರುವ ಸೂಚನೆಯ ಹಿನ್ನಲೆ ಯಲ್ಲಿ ರಾಜ್ಯದ ಕೈ ಪಕ್ಷದ ನಾಯಕರು ಟಿಕೇಟ್ ಗಾಗಿ ಅರ್ಜಿಯನ್ನು ಸಲ್ಲಿಸುತ್ತಿದ್ದು ಇನ್ನೂ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದಿಂದ ಈವರೆಗೆ ಬರೊಬ್ಬರಿ ನಾಲ್ವರು ಅರ್ಜಿಯನ್ನು ಸಲ್ಲಿಸಿದ್ದಾರೆ.

ನಾಗರಾಜ ಗೌರಿ 

ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಪಕ್ಷದಿಂದ ಟಿಕೇಟ್ ಗಾಗಿ ಪಕ್ಷದ ಯುವ ಮುಖಂಡ ನಾಗರಾಜ ಗೌರಿ ಅರ್ಜಿ ಸಲ್ಲಿಸಿದ್ದಾರೆ.ನಾನು ನಿಮ್ಮ ನಾಗರಾಜ ಗೌರಿ ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 20 ವರ್ಷಗಳಿಂದ ಸಕ್ರಿಯವಾಗಿ ಪಕ್ಷ ಕೊಟ್ಟ ಎಲ್ಲಾ ಜವಾಬ್ದಾರಿ ಯನ್ನು ನಿಷ್ಠೆಯಿಂದ ನಿಭಾಯಿಸಿದ್ದೇನೆ 2003 ರಲ್ಲಿ ಪಕ್ಷ ಸೇರ್ಪಡೆಯಾಗಿ 2005 ರಲ್ಲಿ ಜಿಲ್ಲಾ ವಿದ್ಯಾರ್ಥಿ ಕಾಂಗ್ರೇಸ್ ಘಟಕದ ಅಧ್ಯಕ್ಷನಾಗಿ 2010 ರಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೇಸ್ ಘಟಕದ ಉಪಾಧ್ಯಕ್ಷನಾಗಿ 2013 ರಲ್ಲಿ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ 2016ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಯಾಗಿ 2021 ರಿಂದ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ರಾಣಿ ಚನ್ನಮ್ಮ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಾಗಿ ಪಕ್ಷದ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡು ಬಂದಿ ದ್ದೇನೆ.ಹೀಗಾಗಿ 2023 ರ ವಿಧಾನಸಭಾ ಚುನಾವ ಣೆಗೆ ಕೆಪಿಸಿಸಿ ಅಧ್ಯಕ್ಷರ ಆದೇಶದಂತೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸುತ್ತಿದ್ದೇನೆ ಎಂದುಕೊಂಡು ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.ಇನ್ನೂ ಸಧ್ಯ ನಾನು ಕೂಡಾ ಅರ್ಜಿ ಸಲ್ಲಿಸಿ ಬಂದಿದ್ದೇನೆ ಪಕ್ಷ ಮತ್ತು ಮುಖಂಡರು ಬಯಸಿದರೆ ಸ್ಪರ್ಧೆ ಮಾಡು ತ್ತೇನೆ ತಮ್ಮ ಆಶೀರ್ವಾದ ಬಯಸಿದ್ದೇನೆ ಧನ್ಯವಾ ದಗಳು ಎಂಬ ಸಂದೇಶವನ್ನು ನೀಡಿ ನಾಗರಾಜ ಗೌರಿ ಅವರು ಕ್ಷೇತ್ರದಲ್ಲಿ ಟಿಕೇಟ್ ಕೇಳಿದ್ದಾರೆ.

 

 

ಶರಣಪ್ಪ ಕೋಟಗಿ 

ಕಾಂಗ್ರೇಸ್ ಪಕ್ಷದ ಹಿರಿಯರಾಗಿದ್ದು ಕಳೆದ ಹಲವಾರು ವರ್ಷಗಳಿಂದ ಪಕ್ಷದ ಪರವಾಗಿ ಪಕ್ಷದಲ್ಲಿದ್ದುಕೊಂಡು ಪಕ್ಷವು ನೀಡಿದ ಜವಾಬ್ದಾರಿ ಯನ್ನು ತಪ್ಪದೇ ಮಾಡಿಕೊಂಡು ಬರುತ್ತಿದ್ದಾರೆ. ಸಧ್ಯ ಕಿಸಾನ್ ರೈತ ಸಂಘಟನೆಯ ಕಾಂಗ್ರೇಸ್ ಪಕ್ಷದಲ್ಲಿ ಮುಖಂಡರಾಗಿದ್ದು ಅಧಿಕಾರ ಇರಲಿ ಇಲ್ಲದಿರಲಿ ಪಕ್ಷ ಸಂಘಟನೆ ಮಾಡುತ್ತಾ ಪಕ್ಷವು ಕರೆ ನೀಡಿದ ಪ್ರತಿಯೊಂದು ಹೋರಾಟ ಪ್ರತಿಭಟ ನೆಯಲ್ಲಿ ಪಾಲ್ಗೊಂಡು ಹೋರಾಟ ಮಾಡುತ್ತಾ ಧ್ವನಿ ಎತ್ತುತ್ತಿದ್ದಾರೆ.ಅಲ್ಲದೇ ನೊಂದುಕೊಂಡು ಬಂದವರಿಗೆ ನೆರವಾಗಿ ಸಹಾಯ ಮಾಡುತ್ತಾ ಸಹೋದರ ವೀರಣ್ಣ ಮತ್ತಿಕಟ್ಟಿ ಅವರ ಮಾರ್ಗ ದರ್ಶನದೊಂದಿಗೆ ಸರಳ ಸಜ್ಜನಿಕೆಯ ಆದರ್ಶ ರಾಜಕಾರಣಿಯಾಗಿದ್ದು ಮಾಜಿ ಸಭಾಪತಿಗಳಾಗಿ ರುವ ಸಹೋದರರ ನೆರಳಿನಲ್ಲಿಯೇ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಕೆಲಸವನ್ನು ಮಾಡಿ ಕೊಂಡು ಬರುತ್ತಿದ್ದಾರೆ ಹೀಗಾಗಿ ಸಹೋದರರು ಮತ್ತು ಕುಟುಂಬದ ಸದಸ್ಯರೊಂದಿಗೆ ಬೆಂಗಳೂ ರಿನ ಪಕ್ಷದ ಕಚೇರಿಯಲ್ಲಿ ಟಿಕೇಟ್ ಕೇಳಿ ಅರ್ಜಿ ಯನ್ನು ಸಲ್ಲಿಸಿದ್ದು ಸಧ್ಯ ಪ್ರಭಾವಿ ಲಿಂಗಾಯತ ಸಮುದಾಯದ ಮುಖಂಡರಾಗಿದ್ದಾರೆ. ಕ್ಷೇತ್ರದ ಲ್ಲೂ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಲಿಂಗಾಯತ ಸಮುದಾಯದರು ಹೆಚ್ಚಾಗಿದ್ದು ಅವರೆಲ್ಲರೊಂ ದಿಗೆ ಒಳ್ಳೇಯ ಸಂಬಂಧವನ್ನು ಇಟ್ಟುಕೊಂಡಿ ದ್ದಾರೆ. ಹೀಗಾಗಿ ತಾವು ತಮ್ಮ ಸಹೋದರ ಮಾಡಿರುವ ಒಳ್ಳೊಳ್ಳೇಯ ಕೆಲಸ ಕಾರ್ಯ ಗಳನ್ನು ಮುಂದಿಟ್ಟುಕೊಂಡು ಶರಣಪ್ಪ ಕೋಟಗಿ ಅವರು ಈ ಬಾರಿ ಸ್ಪರ್ಧೆಯನ್ನು ಬಯಸಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗಲು ಬಯಸಿ ಬೆಂಗಳೂರಲ್ಲಿ ರುವ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಾಮಪತ್ರವನ್ನು ಸಲ್ಲಿಸಿದ್ದೇನೆ ಗಣ್ಯ ರೊಂದಿಗೆ ಸಲ್ಲಿಸಿದ್ದು ಎಲ್ಲರ ಸಹಕಾರ ಇರಲಿ ಎಂದಿದ್ದಾರೆ.

ದೀಪಕ ಚಿಂಚೋರೆ

ಕಾಂಗ್ರೇಸ್ ಪಕ್ಷದ ಹಿರಿಯ ನಾಯಕನಾಗಿದ್ದು ಸಧ್ಯ ಕೆಪಿಸಿಸಿ ಸದಸ್ಯರಾಗಿ ಕಳೆದ 30 ವರ್ಷ ಗಳಿಂದ ಪಕ್ಷದ ಸಂಘಟನೆ ಸೇರಿದಂತೆ ಹಲವಾರು ವಿಚಾರಗಳ ಕುರಿತಂತೆ ಹೋರಾಟ ಮಾಡುತ್ತಾ ಧ್ವನಿ ಎತ್ತುತ್ತಾ ಬಡವರ ದೀನ ದಲಿತರ ಪರವಾಗಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ.ಕೈ ಪಕ್ಷದ ಪಾಲಿಕೆಯ ಸದಸ್ಯರಾಗಿ ವಿರೋಧ ಪಕ್ಷದ ನಾಯಕರಾಗಿ ಸಾಕಷ್ಟು ಅಭಿವೃದ್ದಿ ಕೆಲಸ ಕಾರ್ಯ ಗಳನ್ನು ಮಾಡಿರುವ ಇವರು ಈ ಹಿಂದೆ ಎರಡು ಬಾರಿ ಟಿಕೇಟ್ ಸಿಗುತ್ತದೆ ಎಂದುಕೊಳ್ಳುವಾಗಲೇ ಸ್ವಲ್ಪದರಲ್ಲಿಯೇ ಟಿಕೇಟ್ ಕೈ ತಪ್ಪಿದ ಉದಾಹ ರಣೆಗಳಿದ್ದು ಹೀಗಾಗಿ ಸಧ್ಯ ಈ ಬಾರಿ ಸ್ಪರ್ಧೆ ಬಯಸಿ ಪಶ್ಟಿಮ ವಿಧಾನ ಸಭಾ ಕ್ಷೇತ್ರದಿಂದ ಟಿಕೇಟ್ ಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಈಗಾಗಲೇ ಕ್ಷೇತ್ರದಲ್ಲೂ ಕೂಡಾ ಸಾಕಷ್ಟು ಜನಪರ ಕೆಲಸ ಕಾರ್ಯಗಳನ್ನು ಸಾಮಾಜಿಕ ಕೆಲಸಗಳನ್ನು ಹಾಗೇ ಕೋವಿಡ್ ಸಮಯದಲ್ಲೂ ಕೂಡಾ ನೂರಾರು ಬಡ ಕುಟುಂಬಗಳಿಗೆ ಕಿಟ್ ಗಳನ್ನು ನೆರವನ್ನು ನೀಡಿದ್ದಾರೆ.

ಪಾಂಡುರಂಗ ನೀರಲಕೇರಿ

ವೃತ್ತಿಯಲ್ಲಿ ಹಿರಿಯ ನ್ಯಾಯವಾದಿಯಾಗಿದ್ದು ಸಧ್ಯ ಧಾರವಾಡದಲ್ಲಿ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕರಾಗಿದ್ದಾರೆ.ಸರಳ ಸಜ್ಜನಿಕೆಯ ಆದರ್ಶ ವ್ಯಕ್ತಿತ್ವ ವನ್ನು ಹೊಂದಿಕೊಂಡು ಅಧಿಕಾರವೇ ಮುಖ್ಯ ಅಲ್ಲ ಜನರಿಗೆ ನೆರವಾಗೊದು ತುಂಬಾ ಮಹತ್ವ ಎಂದುಕೊಂಡು ಯಾರೇ ಎಂತಹ ಸಮಸ್ಯೆಯನ್ನು ತಗೆದುಕೊಂಡು ಬಂದರೆ ಗಮನಕ್ಕೆ ಬಂದರೆ ಕೂಡಲೇ ಆ ಒಂದು ವಿಚಾರ ವನ್ನು ಮುಂದಿಟ್ಟುಕೊಂಡು ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಇತ್ಯರ್ಥ ಮಾಡಿಸಿ ನೊಂದವರಿಗೆ ನ್ಯಾಯವನ್ನು ದೊರಕಿಸಿಕೊಟ್ಟು ನೆರವಾಗುತ್ತಾರೆ.ಇನ್ನೂ ಇವರ ಮತ್ತು ಪಕ್ಷದ ಸಂಬಂಧ ತುಂಬಾ ಹಳೇಯದಾಗಿದ್ದು ಇವರ ಅಜ್ಜ ತಂದೆ ಸಧ್ಯ ಇವರು ಅಂದರೆ 3ನೇ ತಲೆ ಮಾರಾಗಿದ್ದು 1992 ಸೇವಾ ದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೊಂದಿಗೆ ಕಾಂಗ್ರೇಸ್ ಪಕ್ಷದೊಂದಿಗೆ ಪಯನವನ್ನು ಆರಂಭ ಮಾಡಿದ ಇವರು ಪಕ್ಷ ನೀಡಿದ ಕೊಟ್ಟ ಜವಾಬ್ದಾರಿಯನ್ನು ತಪ್ಪದೇ ಶಿಸ್ತಿನಿಂದ ಮಾಡಿಕೊಂಡು ಬರುತ್ತಿರುವ ಶಿಸ್ತಿನ ಸಿಪಾಯಿ ಆಗಿದ್ದಾರೆ.ಈಗಲೂ ಕೂಡಾ ಶಿಸ್ತು ಬದ್ದ ವ್ಯವಸ್ಥೆಯ ನಡುವೆ ನೊಂದವರಿಗೆ ನ್ಯಾಯವನ್ನು ದೊರಕಿಸಿಕೊಡುವ ಜನನಾಯಕ ಆಗಿದ್ದು ಈ ಹಿಂದೆ ಎಮ್ ಪಿ ಕ್ಷೇತ್ರದ ಸ್ಪರ್ಧೆಗಾಗಿ ಟಿಕೇಟ್ ಕೇಳಿದ್ದರು ಸಧ್ಯ ಇವರು ಮಾಡಿರುವ ಜನಪರ ಕೆಲಸ ಕಾರ್ಯಗಳನ್ನು ಮುಂದಿಟ್ಟುಕೊಂ ಡಿರುವ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಪಕ್ಷದಿಂದ ಟಿಕೇಟ್ ಕೇಳಿದ್ದು ಟಿಕೇಟ್ ಸಿಕ್ಕೆ ಸಿಗುತ್ತದೆ ಎಂಬ ಆತ್ಮ ವಿಶ್ವಾಸದಲ್ಲಿ ಇವರಿದ್ದಾರೆ.

ಒಟ್ಟಾರೆ ಸಧ್ಯ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧೆ ಬಯಸಿ ಟಿಕೇಟ್ ಗಾಗಿ ನಾಲ್ವರು ಅಭ್ಯರ್ಥಿ ಗಳು ಅರ್ಜಿಯನ್ನು ಹಾಕಿದ್ದು ಅರ್ಜಿ ಸಲ್ಲಿಸುವ ದಿನಾಂಕವನ್ನು ಮತ್ತೆ ವಿಸ್ತರಣೆಯನ್ನು ಮಾಡಿದ್ದು ಹೀಗಾಗಿ  ಇನ್ನೂ ಯಾರು ಯಾರು ಅರ್ಜಿ ಕೊಡು ತ್ತಾರೆ ಯಾರು ಯಾರು ಅಖಾಡಕ್ಕೆ ಇಳಿಯುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.ಏನೇ ಆಗಲಿ ಚುನಾವಣೆಯ ಮುನ್ನವೇ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದಲ್ಲಿ ಟಿಕೇಟ್ ಗಾಗಿ ಲಾಭಿ ಜೋರಾಗಿದ್ದು ಪಕ್ಷವು ಅಂತಿಮವಾಗಿ ಯಾರಿಗೆ ಮಣಿ ಹಾಕಲಿದೆ ಎಂಬೊದನ್ನು ಕಾದು ನೋಡಬೇಕಿದೆ

ಚಕ್ರವರ್ತಿ ಜೊತೆ ಮಂಜುನಾಥ ಬಡಿಗೇರ ಸುದ್ದಿ ಸಂತೆ ನ್ಯೂಸ್ ಧಾರವಾಡ.


Join The Telegram Join The WhatsApp

Suddi Sante Desk

Leave a Reply