ಧಾರವಾಡ –
ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ ಸಮ್ಮೇಳನ ಯಶಸ್ವಿಗೆ ಗುರು ತಿಗಡಿ ಕರೆ ಹೌದು ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ ರಿ ಬೆಂಗಳೂರು, ಧಾರವಾಡ. ಇದರ ವತಿಯಿಂದ ಅಕ್ಟೋಬರ 5 ರಂದು ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ನಿಮಿತ್ತ ಬೆಳಗಾವಿ ಜಿಲ್ಲೆಯ ಶ್ರೀ ಕ್ಷೇತ್ರ ಎಲ್ಲಮ್ಮ ಸವದತ್ತಿ ಯಲ್ಲಿ ಮಹಾ ಸಮ್ಮೇಳನವನ್ನು ಜರುಗಿಸಲು ತೀರ್ಮಾನಿಸಲಾಗಿದೆ
ಅರ್ಥ ಪೂರ್ಣ ಶೈಕ್ಷಣಿಕ ಚಿಂತನಾ ಹಾಗೂ ಸಾಧನೆ ಮಾಡಿ ಎಲೆ. ಮರೆಯ ಕಾಯಿಯಂತೆ ಕಾಯಕ ನಿರತ ಶಿಕ್ಷಕರನ್ನು, ಉಪನ್ಯಾಸಕರು, ಅಂಗನವಾಡಿ ಹಾಗೂ ಉತ್ತಮ ಪ್ರಾಥಮಿಕ, ಪ್ರೌಢ ಪ ಪೂ, ಹಾಗೂ ಅಂಗನ ವಾಡಿ ಗಳಿಗೆ ಪ್ರೇರಣಾಧಾಯಕ ಪುರಸ್ಕಾರ ನೀಡಲು ಉಪೇಕ್ಷಿಸಲಾಗಿದ್ದು, ಸಮ್ಮೇಳನ ಯಶಸ್ವಿ ಗೆ ಸರ್ವ ರೀತಿಯಲ್ಲಿ ತನು ಮನ ಧನ. ಸಹಾಯ ಸಹಕಾರ ನೀಡಲು ಸಂಸ್ಥಾಪಕ ಅಧ್ಯಕ್ಷರು ಗುರು ತಿಗಡಿ ಯವರು ಕರೆ ನೀಡಿದರು
ಬೆಳಗಾವಿ ಜಿಲ್ಲೆಯಲ್ಲಿ ಜರುಗುವ ಈ ರಾಜ್ಯ ಸಮ್ಮೇಳ ನಕ್ಕೆ ಶಿಕ್ಷಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಗಳು ಇಲಾಖೆ ಅಧಿಕಾರಿಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಲ್ಲ ಪದಾಧಿಕಾರಿಗಳು ಸಕ್ರಿಯವಾಗಿ ಕಾರ್ಯಮಾಡುವಂತೆ ಪರಿಷತ್ ರಾಜ್ಯ ಅಧ್ಯಕ್ಷ ಸಂಗಮೇಶ ಖನ್ನಿನಾಯಕರ ಮಾತನಾಡಿದರು.
ಸಮ್ಮೇಳನ ರೂಪ ರೇಷ ಕುರಿತು ಡಾ ಶೇಖರ ಹಲಸಗಿ, ಯವರು ಮಾರ್ಗದರ್ಶನ, ಸಲಹೆ ನೀಡಿ ಮಾತನಾಡಿ ದರು ಸಭೆಯಲ್ಲಿ ಉಪಸ್ಥಿತರಿದ್ದ ಪ್ರಶಾಂತ ಹಂಪಣ್ಣವರ, ರಾಜು ಕೋಲಕಾರ, ರುದ್ರಪ್ಪ ಬಡಿಗೇರ, ಆರ್ ವೈ. ಲೆಂಕಣಟ್ಟಿ, ಕಾರ್ಯದರ್ಶಿ ಹಿರೇಗೌಡರ, ಚಂದು ತಿಗಡಿ, ಶ್ರೀಮತಿ. ಪಂಚಾಳ, ಶ್ರೀಮತಿ ಕೋಟೆಗೌಡರ್,, ಶ್ರೀಮತಿ ಮಹಾದೇವಿ ದೊಡಮನಿ, ಭಾರತಿ ಸದನಿ, ಪ್ರವೀಣ್ ಪಾಳೆಕಾರ ಎಂ ಡಿ ಹೊಸಮನಿ,
ಸಿದ್ದಪ್ಪ ಮೇತ್ರಿ, ಎನ್ ಎನ್ ಕಬ್ಬುರ, ಸತೀಶ್ ಮೀರಜ ಕರ ಮುಂತಾದ ಪದಾಧಿಕಾರಿಗಳು ಸಮ್ಮೇಳನ ಯಶಸ್ವಿ ಕುರಿತು ಸಹಕಾರ ನೀಡುವುದಾಗಿ ತಿಳಿಸಿದರು ಪ್ರಾರಂಭ ದಲ್ಲಿ ಎಸ್ ಬಿ ಶಿವಸಿಂಪಿ ಪ್ರಾರ್ಥನೆ ಮಾಡಿದರು ಯಶಸ್ವಿ ಯಾಗಿ ಸಭೆ ಜರುಗಿತು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..