This is the title of the web page
This is the title of the web page

Live Stream

April 2023
T F S S M T W
 12345
6789101112
13141516171819
20212223242526
27282930  

| Latest Version 8.0.1 |

State News

ಸರ್ಕಾರಿ ನೌಕರ ಬಂಧುಗಳೇ ಅಪ್ಪಿ ತಪ್ಪಿಯೂ ಈ ಒಂದು ಕೆಲಸವನ್ನು ಯಾವತ್ತೂ ಮಾಡಬೇಡಿ – ನಿಮ್ಮ ಮೇಲೆ ನಿಗಾ ಇಡಲು ತಂಡವನ್ನು ರಚನೆ ಮಾಡಿದ್ದಾರೆ ಹುಷಾರಾಗಿರಿ


ಬೆಂಗಳೂರು

ಹೌದು ರಾಜ್ಯದ ಯಾವುದೇ ಸರ್ಕಾರಿ ನೌಕರರು ರಾಜ್ಯ ಸರ್ಕಾರದ ವಿರುದ್ದ ಸಾಮಾಜಿಕ ಜಾಲ ತಾಣಗಳಲ್ಲಿ ಪೊಸ್ಟ್ ಹಾಕಿದರೆ ಅಂಥವರ ಮೇಲೆ ಸೂಕ್ತವಾದ ಕಾನೂನು ಕ್ರಮ ಆಗಲಿದೆ.ಈ ಒಂದು ವಿಚಾರ ಕುರಿತಂತೆ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಪ್ರಮಾಣದಲ್ಲಿ ದೂರುಗಳು ಬಂದ ಹಿನ್ನಲೆಯಲ್ಲಿ ಇದನ್ನು ಗಂಭೀರವಾಗಿ ತಗೆದುಕೊಂಡಿರುವ ರಾಜ್ಯ ಸರ್ಕಾರ ಟೀಮ್ ವೊಂದನ್ನು ರಚನೆ ಮಾಡಿದೆ

ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಿ ನೌಕರರು ಮನಸ್ಸಿಗೆ ಬಂದಂತೆ,ಸಿಕ್ಕಸಿಕ್ಕ ಪೋಸ್ಟ್ ಗಳನ ಹಂಚಿಕೊಳ್ಳುವ ಮುನ್ನ ಇನ್ನೂ ಮುಂದೆ ಎಚ್ಚರವಾಗಿರಿ ಏಕೆಂದರೆ ಸೋಶಿಯಲ್ ಮೀಡಿಯಾ ಖಾತೆಗಳ ಮೇಲೆ ಸರ್ಕಾರ ನಿಗಾ ವಹಿಸಿದೆ.ಸರ್ಕಾರಕ್ಕೆ ಮುಜುಗರ ತರುವಂತಹ ಸರ್ಕಾರಕ್ಕೆ ವಿರುದ್ಧವಾಗಿರುವಂತಹ ಸಂದೇಶ ಗಳನ್ನು ಕೆಲ ಸರ್ಕಾರಿ ನೌಕರರು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್, ಟೆಲಿಗ್ರಾಂನಲ್ಲಿ ಹಂಚಿಕೆ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಖಾತೆಗಳ ಮೇಲೆ ಕಣ್ಣಿಡಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.

ಆದ್ದರಿಂದ ಯಾರೂ ರಾಜಕೀಯ ಕುರಿತು ಚರ್ಚೆ ಗಳನ್ನು ಜಾಲತಾಣ ಗಳಲ್ಲಿ ಮಾಡಬೇಡಿ ಎಂದು ಸರ್ಕಾರಿ ನೌಕರರ ವಾಟ್ಸ್ಆಪ್ ಗ್ರೂಪ್ ಗಳಲ್ಲಿ ಸಂದೇಶ ಹರಿದಾಡುತ್ತಿದೆ.2016ರಲ್ಲಿ ಪೊಲೀಸರು ಪ್ರತಿಭಟನೆ ಮಾಡಿದ ದಿನದಿಂದ ಹಿಡಿದು ಇತರ ಸರ್ಕಾರಿ ನೌಕರರ ವಿವಿಧ ಬೇಡಿಕೆಗಾಗಿ ನಡೆದ ಎಲ್ಲ ಹೋರಾಟಗಳ ಸಂದರ್ಭ ಪೊಲೀಸರ ಮೂಲಕ ಸರ್ಕಾರಿ ನೌಕರರ ವಾಟ್ಸ್ ಆಪ್,ಟ್ವಿಟರ್, ಇನ್ಸ್ಟಾಗ್ರಾಂ, ಫೇಸ್ಬುಕ್ ಖಾತೆಗಳ ಮೇಲೆ ಸರ್ಕಾರ ನಿಗಾ ಇರಿಸುತ್ತಲೇ ಬಂದಿದೆ.ಇತ್ತೀಚಿಗೆ ಸರ್ಕಾರದ ಮೇಲೆ ನೌಕರರು ಮುನಿಸಿಕೊಂಡಿದ್ದಾರೆ.

ಸರ್ಕಾರ ಘೋಷಿಸಿದ ಪುಣ್ಯಕೋಟಿ ಯೋಜನೆಗೆ ಹಣ ನೀಡಿದವರು ಕೇವಲ ಶೇ.20 ನೌಕರರು. ಎನ್ಪಿಎಸ್ ವಿರುದ್ಧ ಹೋರಾಟದ ವೇಳೆ, ನಂತರವೂ ಸರ್ಕಾರದಿಂದ ಯಾವುದೇ ರೀತಿಯ ಸೂಕ್ತ ಭರವಸೆ ಸಿಕ್ಕಿಲ್ಲ. ಹೀಗಾಗಿ ಸರ್ಕಾರದ ಆಡಳಿತ ವೈಖರಿ ವಿರುದ್ಧ ಸಂದೇಶಗಳನ್ನು ಹರಿ ಬಿಡುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರವಾಗಿ ನಿಗಾ ವಹಿಸಲೆಂದೇ ಪೊಲೀಸರಿಗೆ ತರಬೇತಿ ನೀಡಲಾಗಿದೆ.ಜಾಲತಾಣಗಳ ಪರಿಶೀಲ ನೆಗಾಗಿ ಪ್ರತಿ ಜಿಲ್ಲೆಯಲ್ಲಿ ಒಂದು ಪ್ರತ್ಯೇಕ ತಂಡ ಕೆಲಸ ಮಾಡುತ್ತಿದೆ.

ಪ್ರಚೋದಿಸಿದವರ ವಿರುದ್ಧ ಕೇಸ್: ಫೇಸ್ ಬುಕ್, ವಾಟ್ಸ್ಆಪ್, ಟ್ವಿಟ್ಟರ್ ಸೇರಿ ಸಾಮಾಜಿಕ ಜಾಲ ತಾಣದಲ್ಲಿ ಕಾನೂನು ಸುವ್ಯವಸ್ಥೆ,ಶಾಂತಿ ಸುವ್ಯ ವಸ್ಥೆಗೆ, ಕೋಮು ಸೌಹಾರ್ದತೆಗೆ ಧಕ್ಕೆ ತರುವಂ ತಹ ಹಾಗೂ ಪರಸ್ಪರ ಗುಂಪಿನ ನಡುವೆ ದ್ವೇಷ ಭಾವನೆ ಬರುವಂತಹ ಪ್ರಚೋದನಕಾರಿ ಪೋಸ್ಟ್ ಗಳನ ಹಾಕುವವರ ಹಾಗೂ ಅದನ್ನು ಫಾರ್ವರ್ಡ್ ಮಾಡುವವರ ವಿರುದ್ಧ ಕಾನೂನು ರೀತಿಯ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದು ಏನೇನಾ ಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

 


Google News Join The Telegram Join The WhatsApp

 

 

Suddi Sante Desk

Leave a Reply