This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಧಾರವಾಡದ ಅಕ್ಷರತಾಯಿ ದತ್ತಿದಾನಿ ಶ್ರೇಷ್ಠ ಶಿಕ್ಷಕಿ ಲೂಸಿ ಸಾಲ್ಡಾನ – ಶಿಕ್ಷಕಿ ವಿ ಎನ್ ಕೀರ್ತಿವತಿ…..

WhatsApp Group Join Now
Telegram Group Join Now

ಧಾರವಾಡ –

ಅಕ್ಷರತಾಯಿ ಲೂಸಿ ಸಾಲ್ಡಾನ ಅದ್ಬುತ ಶಕ್ತಿ ಶ್ರೇಷ್ಠ ಶಿಕ್ಷಕಿ ವಿ ಎನ್ ಕೀರ್ತಿವತಿ ಬಸವರಾಜ ದೇಸೂರ ಲೂಸಿ ಸಾಲ್ಡಾನರವರ 82 ನೆಯ ದತ್ತಿ ನಿಧಿ ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದು ಧಾರವಾಡ ತಾಲೂಕಿನ ಸಿದ್ದರಕಾಲನಿ ವೆಂಕಟಾ ಪೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಧಾರವಾಡದ ಅಕ್ಷರತಾಯಿ ದತ್ತಿದಾನಿ ಶ್ರೀಮತಿ ಲೂಸಿ ಸಾಲ್ಡಾನರವರು ತಮ್ಮ 82 ನೆಯ ದತ್ತಿ ನಿಧಿಯನ್ನು ಸ್ಥಾಪಿಸಿದರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಂಪನ್ಮೂಲ ಶಿಕ್ಷಕರಾದ ಬಸವರಾಜ ದೇಸೂರ ವಿ ಎನ್ ಕೀರ್ತಿವತಿ ಮಾತನಾಡಿದರು,ಉತ್ತರಕನ್ನಡ ಜಿಲ್ಲಾ ಸಂಚಾಲಕ ರಾದ ಸುವರ್ಣ ನಾಯ್ಕ ಮುಖ್ಯ ಶಿಕ್ಷಕ ಎಂ ಐ ಮುಲ್ಲಾ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಅದ್ಯಕ್ಷರು ಉಪಾದ್ಯಕ್ಷರು ಸರ್ವಸದ ಸ್ಯರು ಹಾಜರಿದ್ದರು.

ವಿಶ್ವ ಗುರು ಹೆಗ್ಗಳಿಕೆಯ ನಮ್ಮ ದೇಶದಲ್ಲಿ ಗುರುಪ ರಂಪರೆಗೆ ಗುರುಕುಲ ಶಿಕ್ಷಣ ಕಾಲದಿಂದಲೂ ಪರಮ ಪೂಜ್ಯ ಸ್ಥಾನವನ್ನು ನೀಡಲಾಗಿದೆ.ಭರತಖಂಡದಲ್ಲಿ ಗುರುಮಾತೆಯರಿಗೂ ಗುರುಗಳ ಸಮಾನ ಗೌರವ ಪೂಜ್ಯತೆಯನ್ನು ನೀಡಲಾಗುತ್ತಿದೆ.ಭಾರತಾಂಬೆಯ ಮುಕುಟದಲ್ಲಿ ವಜ್ರಮಣಿ ಗಳಾಗಿ ರಾರಾಜಿಸುತ್ತಿ ರುವ ಗುರುಮಾತೆ ಯರಲ್ಲಿ ಭಾರತದ ಅಕ್ಷರದವ್ವ ತಾಯಿ ಶ್ರೀಮತಿ ಸಾವಿತ್ರಿಬಾಯಿ ಪುಲೆಯವರು ಅಗ್ರಗಣ್ಯರು.ತಾಯಿ ಸಾವಿತ್ರಿಬಾಯಿ ಪುಲೆಯವರು ಆಗಿನಕಾಲದಲ್ಲಿ ಸಾಲುಸಾಲು ಪರ್ವತ ಸಮಾನ ಕಷ್ಟಗಳನ್ನು ಮೆಟ್ಟಿ ನಿಂತು ಮಕ್ಕಳಿಗೆ ಜ್ಞಾನಾರ್ಜನೆ ನೀಡುವುದರ ಮೂಲಕ ಅಕ್ಷರ ಕ್ರಾಂತಿ ಮಾಡಿ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಟ್ಟ ಸಾಧನೆಯ ಕಥೆ ರಣ ರೋಚಕ. ಹಾಗೆಯೇ ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆಯವ ರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಅವರಂತೆ ಸಾಕಷ್ಟು ಕಷ್ಟಗಳನ್ನು ಮೆಟ್ಟಿ ನಿಂತು ಸಾಧನೆಯ ಶಿಖರವಾದ ಧಾರವಾಡದ ಹೆಮ್ಮೆಯ ಶಿಕ್ಷಕ ಮಾತೆ, ವಿದ್ಯಾಕಾಶಿಯ ಅಕ್ಷರದ ಶಬರಿ,ಶಿಕ್ಷಣ ಕ್ಷೇತ್ರದ ದಾನ ಚಿಂತಾಮಣಿ,ದತ್ತಿದಾನಿ ಅತ್ತಿಮಬ್ಬೆ ಶ್ರೀಮತಿ ಲೂಸಿ ಸಾಲ್ಡಾನರವರ ಜೀವನ ಪ್ರತಿಯೊಬ್ಬರಿಗೂ ಮಾರ್ಗ ಸೂಚಕರು ಅವರು ಕಷ್ಟಸಾಧ್ಯ ಸಮಸ್ಯೆಗಳನ್ನು ಮೆಟ್ಟಿ ನಿಂತ ಕಥೆ ಅನುಕ್ಷಣ ಬಲು ರೋಚಕವಾಗಿದೆ‌.

ಶ್ರೀಯುತ ಕಾಶ್ಮೀರ ಸಾಲ್ಡಾನಾ ಹಾಗೂ ಶ್ರೀಮತಿ ಜೂಲಿಯಾನ ಸಾಲ್ಡಾನ ಎಂಬ ರೋಮನ್ ಕ್ಯಾಥೋಲಿಕ್ ಪಂಗಡದ ಕ್ರಿಶ್ಚಿಯನ್ ದಂಪತಿಗಳ ಏಳನೇ ಮಗಳಾಗಿ ಶ್ರೀ ಕೃಷ್ಣನ ನಾಡು ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಬೈಲೂರು ಎಂಬ ಗ್ರಾಮದಲ್ಲಿ ಕೊಂಕಣಿ ಭಾಷೆಯ ಶ್ರೀಮಂತ ಕುಟುಂಬದಲ್ಲಿ ಜನಿಸಿದರು.ತಂದೆಯವರು ಗ್ರಾಮದ ಪ್ರಾಥಮಿಕ ಶಾಲೆಯ ಗುಮಾಸ್ತರಾದರು ಅಡಿಕೆ ತೋಟ,ಗೋಡಂಬಿ ತೋಟದ ರೂಪದಲ್ಲಿ ಸಾಕಷ್ಟು ಆಸ್ತಿಗಳಿದ್ದವಾದರೂ ಹಾಳುಮಾಡುವ ಸಾಕಷ್ಟು ದುರಭ್ಯಾಸಗಳಿದ್ದವು.ತಾಯಿಯವರು ಅನಕ್ಷರಸ್ಥ, ಸಭ್ಯಸ್ತ ಗೃಹಿಣಿಯಾಗಿ ಪ್ರೀತಿಯಿಂದ ಮಕ್ಕಳ ಪಾಲನೆ ಮಾಡುತ್ತಿದ್ದರು.

ಗುರು ಮಾತೆಯ ಜೀವನದಲ್ಲಿ ಮೊದಲನೆಯ ರೋಚಕ ತಿರುವು ಬರುವ ಸಮಯ ಇವರು ಒಂದನೇ ತರಗತಿ ಮುಗಿಸಿ ರಜೆಯ ಮಜಾ ಪಡೆಯಲು ರೈಲಿನ ಮೂಲಕ ದೊಡ್ಡಪ್ಪನ ಮನೆಗೆ ಹೊರಟಿದ್ದರು.

ರೈಲು ಹುಬ್ಬಳ್ಳಿ ನಿಲ್ದಾಣ ತಲುಪಿತ್ತು!
ಬಾಲಕಿಗೆ ಬಲು ಬಾಯಾರಿಕೆ ಆಗಿತ್ತು
ದಂಪತಿಗಳ ಜಾಗೃತಿ ನಿದ್ರೆಗೆ ಜಾರಿತ್ತು
ರೈಲಿಂದಿಳಿದ ಕೂಸು ನೀರರಸುತ್ತಿತ್ತು
ಅದಾಗಲೇ ರೈಲು ಹೊರಟೋಗಿತ್ತು
ಒಬ್ಬಂಟಿ ಮಗು ಅಳುತ್ತಾ ಕುಳಿತಿತ್ತು!

ಮಗುವಿನ ಆರ್ತನಾದ ಕೇಳಿ ಬಂದರೂ ನೋಡಿ ಮಗುವನ್ನು ತಿದ್ದಿ-ತೀಡಿ ಮೂರ್ತಿ ಮಾಡುವ ತ್ರಿಮೂರ್ತಿಗಳಾದ ಗದುಗಿನ ವಾಯ್ ಎಂ ಸದ್ದಾಂಪೂರ,ಸವದತ್ತಿಯ,ಮಹಾದೇವ ಎಂ ಮಡಿವಾಳರ,ಕಲ್ಕತ್ತಾದ, ಬಿ ಸಿ ಚಕ್ರವರ್ತಿ ಯವರು. ಮೂವರು ಬಾಲಕಿಯ ಪರಿಚಯದ ಬಗ್ಗೆ ಪರಿಪರಿ ಕೇಳಿದರು ಅವಳು ಹೇಳಲಿಲ್ಲ ಕಾರಣ ಕಂದಮ್ಮಳಿಗೆ ಕನ್ನಡ ಮಾತನಾಡಲು ಬರುತ್ತಿರಲಿಲ್ಲ.ಕೊನೆಗೆ ಕೊಂಕಣಿ ಬಲ್ಲವರನ್ನು ಕರೆಯಿಸಿ ಅವಳೊಂದಿಗೆ ಮಾತನಾಡಿಸಿ ನಡೆದ ದೃಷ್ಟಾಂತವನ್ನು ಆಲಿಸಿ ತಮ್ಮೊಟ್ಟಿಗೆ ಕರೆದೊಯ್ದರು.ಹೆತ್ತವರಿಗಾಗಿ ಪರಿಪರಿ ಹಲುಬುತ್ತಿದ್ದ ಪುಟ್ಟ ಬಾಲಕಿಗೆ ಚಾಕ್ಲೇಟ್ ಪೇಪ ರ್ಮೆಂಟ್ ಅನ್ನು ಕೊಟ್ಟು ರಮಿಸಿ ತಮ್ಮ ಆಶ್ರಯ ದಲ್ಲಿ ಇರಿಸಿಕೊಂಡರು.3 ಜನ ಆಪ್ತಮಿತ್ರರರು ಮಡಿವಾಳರವರ ಅಣ್ಣನ ಮನೆಯಲ್ಲಿಯೇ ಇರುತ್ತಿ ದ್ದರು.ನಾಲ್ಕೈದು ವರ್ಷಗಳವರೆಗೆ ಮೂವರು ಪುಟ್ಟ ಬಾಲಕಿಗೆ ತಾವೇ ಅಡುಗೆ ತಯಾರಿಸಿ ಉಣಬಡಿಸು ತ್ತಿದ್ದರು.ಎಲ್ಲರ ಮಮತೆಯಲ್ಲಿ ಬೆಳೆದ ಕುಮಾರಿ ಸಾಲ್ಡಾನರವರು 5-6ವರ್ಷದ ನಂತರ ತಮ್ಮ ತಂದೆ- ತಾಯಿಯವರು ದೊರೆತರು ಕೂಡಾ ಅವರೊಟ್ಟಿಗೆ ಹೋಗದೇ ಇವರನ್ನೇ ಅವಲಂಬಿಸಿ ಇಲ್ಲೆ ಉಳಿದು ಬಿಟ್ಟರು.

ಕುಮಾರಿ ಸಾಲ್ಡಾನರವರು ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಶ್ರೀ ಸದ್ದಾಂಪುರ ಹಾಗೂ ಶ್ರೀ ಚಕ್ರವರ್ತಿಯವರ ಮದುವೆ ನಿಶ್ಚಯವಾಯಿತು. ಸಕಲಗುಣ ಸಂಪನ್ನರಾದ ಮಡಿವಾಳರ ಅವರಿಗೂ ಸಾಲು ಸಾಲು ಒಳ್ಳೆಯ ಕುಟುಂಬಗಳಿಂದ ವಧುಗಳ ಆಫರ್ ಬಂದವು.ಆದರೆ ಶ್ರೀ ಮಡಿವಾಳರವರು ಎಲ್ಲಿ ತನ್ನ ಹೆಂಡತಿ ಬಂದರೆ ಈ ಬಾಲಕಿ ಮತ್ತೆ ತಬ್ಬಲಿ ಆಗುವಳೋ ಎಂಬ ಭಯದಿಂದ ಕುಮಾರಿ ಸಾಲ್ಡಾನ ರವರನ್ನು ತಾವೇ ಮದುವೆಯಾದರೆ ಹೇಗಾದೀತು ಎಂಬುದನ್ನು ಸ್ನೇಹಿತರೊಂದಿಗೆ ಚರ್ಚಿಸಿ ಅವರ ಬೆಂಬಲ, ಸಹಾಯದಿಂದ ಮದುವೆ ಮಾಡಿಕೊಳ್ಳಲು ನಿಶ್ಚಯಿಸಿದರು.ಆದರೆ ಸಂಪ್ರದಾ ಯಸ್ಥರಾದ ಅವರ ಅಣ್ಣನವರು ಇದಕ್ಕೆ ವಿರೋಧ ಮಾಡಿದರು. ಇದೇ ಸಂದರ್ಭಕ್ಕೆ ಸರಿ ಎಂಬಂತೆ ಶ್ರೀ ಮಡಿವಾಳ ರವರಿಗೆ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿಗೆ ವರ್ಗಾವಣೆಯಾಯಿತು.ಈ ಪ್ರಬಲ ಕಾರಣದಿಂದಾಗಿ ಕೊನೆಗೆ ಸ್ನೇಹಿತರು ಹಾಗೂ ಅವರ ಅಕ್ಕಂದಿರು ಜವಾಬ್ದಾರಿಯನ್ನು ಹೊತ್ತುಕೊಂಡು ಕೇವಲ 15 ದಿನಗಳಲ್ಲಿಯೇ ಇವರಿಗಿಂತ 20 ವರ್ಷ ದೊಡ್ಡವರಾದ ಶ್ರೀಯುತ ಮಡಿವಾಳರ ಅವರೊಂ ದಿಗೆ ಮದುವೆ ಎಂದರೇನು? ತಾಳಿ ಎಂದರೇನು? ಎಂದು ಏನು ಅರಿಯದ ಪುಟ್ಟ ವಯಸ್ಸಿನಲ್ಲಿಯೇ ರೈಲ್ವೆ ಕ್ವಾಟರ್ಸ್ ನಲ್ಲಿ ಟೀ ಪಾರ್ಟಿಯೊಂದಿಗೆ ಮದುವೆಮಾಡಿಯೇಬಿಟ್ಟರು.

ತಾನೊಂದು ಬಯಸಿದರೆ ವಿಧಿ ಮತ್ತೊಂದು ಬಯಸಿತು ಎಂಬಂತೆ ಮದುವೆಯಾದ ಹತ್ತು ತಿಂಗಳಲ್ಲಿ ಮಾತೆಯವರ ಜೀವನದಲ್ಲಿ ಕ್ರೂರ ವಿಧಿ ಮತ್ತೊಮ್ಮೆ ಆಟವಾಡಿತು.ಸಂಸಾರದ ಆಧಾರಸ್ತಂಭ ವಾಗಿದ್ದ ಮಹಾದೇವರನ್ನು ಇವರಿಂದ ಕಿತ್ತುಕೊಂಡು ಮತ್ತೊಮ್ಮೆ ಇವರನ್ನು ಅನಾಥೆಯನ್ನಾಗಿ ಮಾಡಿತು. ತಮ್ಮನ ಅಗಲಿಕೆ ಅಣ್ಣನಿಗೆ ಆಕಾಶ ತಲೆ ಮೇಲೆ ಬಿದ್ದಂತ ಆದರೆ ಮಾತೆಯವರಿಗೆ ಆಕಾಶ ಮತ್ತು ಭೂಮಿಯೇ ತಲೆ ಮೇಲೆ ಬಿದ್ದು ಪಾತಾಳಕ್ಕೆ ತಳ್ಳಿದಂ ತಾಯಿತು.

ಪ್ರಾಯಶಃ ಮಹದೇವರವರಿಗೆ ತಮ್ಮ ಸ್ವರ್ಗ ವಾಸದ ಮುನ್ಸೂಚನೆ ತಿಳಿದಿರಬಹುದೇನೋ ಅದಕ್ಕಾಗಿಯೇ ಸಾಯುವ ನಾಲ್ಕು ದಿನ ಮುನ್ನ ಸ್ನೇಹಿತರೊಟ್ಟಿಗೆ ಮಾತನಾಡಿ ಸಾಲ್ಡಾನಾ ರವರಿಗೆ ಚೆನ್ನಾಗಿ ಶಿಕ್ಷಣ ಕೊಡಿಸಿ ಸ್ವಾವಲಂಬಿಯಾಗಿಸುವ ಜವಾಬ್ದಾರಿ ನಿರ್ವಹಣೆಯ ವಚನ ಪಡೆದಿದ್ದರಂತೆ. ಕೊಟ್ಟ ವಚನದಂತೆ ತಮ್ಮ ಉಸಿರು ಇರುವವರೆಗೂ ಎಲ್ಲಾ ಸ್ನೇಹಿತರು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದರು.

ಘಟಿಸಿದ ಎಲ್ಲ ಘಟನಾವಳಿಗಳು ಗಾಳಿ ಮಾಧ್ಯಮದ ಮೂಲಕ ಲೂಸಿಯಾರವರ ತಂದೆ-ತಾಯಿಗಳಿಗೆ ತಲುಪಿ ಅವರು ಕರೆಯಲು ಬಂದರು ಇವರು ಹೋಗದೆ ಗಂಡನ ಮನೆಯಲ್ಲಿ ಉಳಿದುಬಿಟ್ಟರು ಮಾವನವರ ಮುದ್ದಿನ ಮಗಳಾಗಿ. ಪಕ್ಕದಮನೆಯ ಶ್ರೀ ವಸಂತ ಕುಲಕರ್ಣಿಯವರ ಮಡದಿ ಮಮತಾಮಯಿಯಾದ ಕುಸುಮ ಬಾಯಿಯವರು 7ನೇ ತರಗತಿ ಪ್ರವೇಶ ಪಡೆದ ಇವರನ್ನು ಕೊಪ್ಪಳಕ್ಕೆ ಕರೆದೊಯ್ದು ಹದಿನೈದು ದಿನ ಅವರ ಮನೆಯಲ್ಲಿ ಇಟ್ಟುಕೊಂಡು ನಂತರ ಹಾಸ್ಟೆಲಿಗೆ ಬಂದು ಅವರ ಬಗ್ಗೆ ಅತೀವ ಕಾಳಜಿ ತೆಗೆದುಕೊಳ್ಳಲು ಹೇಳಿದರು.

ಮಾತೆ ಸಾಲ್ಡಾನ ರವರು ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಾ ಪೂಜ್ಯ ಮುಖ್ಯೋಪಾಧ್ಯಾಯರಾದ ಶ್ರೀ ಎಚ್ . ವಿ .ಕುಲಕರ್ಣಿಯವರ ಮಾರ್ಗದರ್ಶನದಲ್ಲಿ ಏಳನೇ ತರಗತಿಯಲ್ಲಿ ಪ್ರಥಮ ಸ್ಥಾನದೊಂದಿಗೆ ಪಾಸಾದರು. ನಂತರದ ವಿದ್ಯಾಭ್ಯಾಸಕ್ಕಾಗಿ ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠದಲ್ಲಿ ತಮ್ಮ ರೂಮಿನಲ್ಲಿ ಸ್ಟೋ ಇಟ್ಟುಕೊಂಡು ಬೀಸು ಕಲ್ಲಿನಿಂದ ಮುದ್ದೆ ಮಾಡಿಕೊಂಡು ಹೊಟ್ಟೆಯ ಹಸಿವನ್ನು ಹಿಂಗಿಸಿ ಕೊಂಡು ಸಾಕಷ್ಟು ಶ್ರಮದಿಂದ ವಿದ್ಯಾಭ್ಯಾಸ ಮಾಡಿ ಕೊನೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇಡೀ ಶಾಲೆಗೆ ಪ್ರಥಮ ಸ್ಥಾನ ಪಡೆದು ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದರು.

‘ಜೀವನವೇ ಹೀಗೆ ತೂಗು ಉಯ್ಯಾಲೆಯಂತೆ, ಹಿಂದಕ್ಕೂ ಮುಂದಕ್ಕೂ ಜೀಕಲೆಬೇಕು’. ಮಾವನವರ ವಿರೋಧದ ನಡುವೆ ಮುಖ್ಯ ಶಿಕ್ಷಕರಾದ ಶ್ರೀಯುತ ಕೆ. ಟಿ. ಪಾಟೀಲರವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿಯ ಮೂರುಸಾವಿರಮಠದ ಮಹಿಳಾ ಕಾಲೇಜಿನಲ್ಲಿ ಬಿ ಎ ಪದವಿ ಮುಗಿಸಿ ಕುಮಟಾದ ಬಾಳಿಗಾ ತರಬೇತಿ ಸಂಸ್ಥೆಯಲ್ಲಿ ಬಿ ಇಡಿ ಪದವಿ ಪಡೆದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿಯಲ್ಲಿ ಖಾಸಗಿ ಹೈಸ್ಕೂಲ್ ಶಿಕ್ಷಕಿಯಾಗಿ ಸೇವೆ ಮಾಡಿದರು.

“ಗೆದ್ದೆ ಗೆಲ್ಲುವೆವು ಒಂದು ದಿನ
ಗೆಲ್ಲಲೇ ಬೇಕು ಒಳ್ಳೆಯತನ”
‘ಮಾತೆ ಲೂಸಿಯಾರವರ ಒಳ್ಳೆಯತನಕ್ಕೆ ವಿಜಯ ದೊರೆಯುವ ಸಮಯ;
ಸಾಲುಸಾಲು ಕಷ್ಟಗಳಿಗೆ ತರ್ಪಣ ಬಿಡುವ ವಿಷಯ’ ಬಂದೇಬಿಟ್ಟಿತು ನೋಡಿ. ಹೌದು ಬಂಧುಗಳೇ 1977 ರಲ್ಲಿ ಮಾತೆಯವರು ಕಲಘಟಗಿ ತಾಲೂಕಿನ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಆಯ್ಕೆಯಾಗಿದ್ದು. ಇದು ಇವರ ಭವಿಷ್ಯದ ಭದ್ರ ಬುನಾದಿಯಾಯಿತು. ಶ್ರೀಮತಿ ಸಾಲ್ಡಾನ ರವರು ಮಕ್ಕಳ ಹೃದಯಮಂದಿರದಲ್ಲಿ ನಿತ್ಯ ಪೂಜಿಸಲ್ಪಡುವ ಶ್ರೇಷ್ಠ ಶಿಕ್ಷಕಿಯಾಗಿ ಹೆಬ್ಬಳ್ಳಿ, ಮುಗದ, ಲೋಕೂರ, ಅಳ್ನಾವರ ಮುಂತಾದ ಗ್ರಾಮಗಳ ಶಾಲೆಗಳಲ್ಲಿ 29 ವರ್ಷ ಸುದೀರ್ಘ ಅತ್ಯಮೂಲ್ಯ ಸೇವೆ ಮಾಡಿ ಜೂನ್ 2006 ರಂದು ಕೇವಲ ಶಿಕ್ಷಕ ವೃತ್ತಿ ಇಂದ ಮಾತ್ರ ನಿವೃತ್ತಿಯಾಗಿದ್ದಾರೆ ಹೊರತು ಮಕ್ಕಳ ಹೃದಯದಿಂದ ಅಲ್ಲ.

“ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ
ಕೊಟ್ಟಿದ್ದು ತಾ ಕೆಟ್ಟಿತೆನಬೇಡ ಮುಂದೆ
ಕಟ್ಟಿಹುದು ಕೋಟಿ ಪುಣ್ಯದ ಬುತ್ತಿ”
ಎಂಬ ಸರ್ವಜ್ಞರ ಜ್ಞಾನೋಕ್ತಿಯಂತೆ ಮಾತೆಯವರು ಈ ನಾಡು ಕಂಡ ಸಾಮಾಜಿಕ ಕಳಕಳಿಯ ಧೀಮಂತದಾನಿಗಳಲ್ಲೊಬ್ಬರು.

‘ಕೆರೆಯ ನೀರನು ಕೆರೆಗೆ ಚೆಲ್ಲಿ ಕೆರೆಯಂದವ ನಿಂತು ನೋಡು’ ಎಂಬ ತತ್ವಾದರ್ಶಪ್ರಾಯರಾದ ತಾಯಿಯವರು ಸರ್ಕಾರದಿಂದ ತಮಗೆ ದೊರೆಯುತ್ತಿರುವ ವೇತವನ್ನು ಸರ್ಕಾರಿ ಶಾಲೆಗಳ,ಸರ್ಕಾರಿ ಶಾಲೆಯ ಮಕ್ಕಳ ಹಾಗೂ ಸಮಾಜದ ಕೆಳಸ್ತರದವರ ಅಭಿವೃದ್ದಿಗೆ “ದತ್ತಿದಾನ” ದ ರೂಪದಲ್ಲಿ ನೀಡುತ್ತಿರುವ ಮಹಾನ ಚೇತನರು.

ಮಾತೆಯವರು 80ಕ್ಕೂ ಅಧಿಕ ಸಾರಿ ಸರ್ಕಾರಿ ಶಾಲೆಗಳು,ಸಂಸ್ಥೆಗಳು ಹಾಗೂ ಆ ಶಾಲೆಗಳ,ಸಂಸ್ಥೆ ಗಳ ಅಭಿವೃದ್ಧಿಗೆ ದತ್ತಿದಾನದ ಸಹಾಯದ ರೂಪದಲ್ಲಿ ಸದಾಕಾಲ ಶ್ರಮಿಸುತ್ತಿದ್ದಾರೆ.

ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಗ್ರಾಮದ ಸರ್ಕಾರಿ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳ ಶಾಲೆಗೆ ತಲಾ 22,000ರೂಪಾಯಿಗಳ ‘ದತ್ತಿದಾನ’ದ ಮೂಲಕ ಆರಂಭವಾದ ಇವರ ಕೊಡುಗೈ ದಾನದ ಸಹಾಯದ ಯಾದಿ ಹನುಮಂತನ ಬಾಲದಎತ್ತಿನಗುಡ್ಡ ಬೆಳೆಯುತ್ತಾ ಸಾಗುತ್ತಿದೆ ಅದಕ್ಕೆ ಸಾಕ್ಷಿ ಈ ಮುಂದಿನ ದತ್ತಿದಾನ ಪಡೆದ ಶಾಲೆ,ಸಂಸ್ಥೆಗಳ ಯಾದಿ.

ಅತೀ ಹೆಚ್ಚು ದತ್ತಿದಾನ ನೀಡಿದ ಶಾಲೆ,ಸಂಸ್ಥೆಗಳು

50,000 ರೂಪಾಯಿಗಳ ದತ್ತಿದಾನ ನೀಡಿದ ಶಾಲೆ,ಸಂಸ್ಥೆಗಳು
1.ಸದ್ಗುರು ವಾಸುದೇವ ಪ್ರೌಢಶಾಲೆ ಹೆಬ್ಬಳ್ಳಿ.
2.ಕೆ.ವಿ.ಜಿ.ಬಿ.ಶಾಲೆ.ಅಳ್ನಾವರ.
3.ಕರ್ನಾಟಕ ವಿದ್ಯಾವರ್ಧಕ ಸಙಘ ಧಾರವಾಡ.
4.ಪ್ರೀಮಿಯರ್ ಸಿಟಿಜನ್ ಕ್ಲಬ್ ಧಾರವಾಡ.
5.ಉತ್ತರ ಕರ್ನಾಟಕ ಲೇಖಕಿಯರ ಸಂಘ ಧಾರವಾಡ.
6 ಗುಬ್ಬಚ್ಚಿ ಗೂಡು ಶಾಲೆ ಮಾಳಾಪೂರ ಧಾರವಾಡ
ರೂ.30,000ಕ್ಕಿಂತ ಹೆಚ್ಚು ದತ್ತಿದಾನ ನೀಡಿದ ಶಾಲೆಗಳು
1.ಸ.ಹಿ.ಪ್ರಾ.ಶಾಲೆ ಸಲಕಿನಕೊಪ್ಪ-45,000
2.ಸ.ಹಿ.ಪ್ರಾ.ಶಾಲೆ ಮುಗದ 31,800

ರೂ.25,000ದತ್ತಿದಾನ ನೀಡಿದ ಶಾಲೆ ಹಾಗೂ ಸಂಘ ಸಂಸ್ಥೆಗಳು
1.ನೆಹರು ಪ್ರೌಢಶಾಲೆ ಹೆಬ್ಬಳ್ಳಿ
2.ನೆಹರು ಪದವಿಪೂರ್ವ ಕಾಲೇಜು ಹೆಬ್ಬಳ್ಳಿ
3.ಸ.ಹಿ.ಪ್ರಾ.ಶಾಲೆ ಜೀರಿಗವಾಡ
4.ಬಾಲ ಬಳಗ ಶಾಲೆ ಧಾರವಾಡ
5.ಸ.ಹಿ.ಪ್ರಾ.ಶಾಲೆ ಆನಂದನಗರ ಹುಬ್ಬಳ್ಳಿ
6.ಸ.ಹಿ.ಪ್ರಾ.ಶಾಲೆ ಮದಿಹಾಳ
7.ಸ.ಹಿ.ಪ್ರಾ.ಶಾಲೆ ಬಾಡ
8.ಸ.ಹಿ.ಪ್ರಾ.ಶಾಲೆ ತಡಕೋಡ
9.ಸ.ಹಿ.ಪ್ರಾ.ಶಾಲೆ ವೆಂಕಟಾಪುರ
10.ಸೇಂಟ್ ಥೆರೆಸಾ ಶಾಲೆ ಅಳ್ನಾವರ
11.ಬೇರುಗಂಡಿ ಬೃಹನ್ಮಠ ಚಿಕ್ಕಮಗಳೂರು
12.ಆದರ್ಶ ವಿದ್ಯಾಲಯ ಧಾರವಾಡ
13.ವನಿತಾ ಸೇವಾ ಸಮಾಜ ಧಾರವಾಡ
14.ರಂಗಾಯಣ ಧಾರವಾಡ.
15, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದುರ್ಗಾಕಾಲನಿ ಧಾರವಾಡ.
ರೂ 20,000 ದತ್ತಿದಾನ ನೀಡಿದ ಶಾಲೆಗಳು ಹಾಗೂ ಸಂಸ್ಥೆಗಳು
1.ಸ.ಹಿ.ಪ್ರಾ.ಶಾಲೆ ಮುಮ್ಮಿಗಟ್ಟಿ
2.ಸ.ಹಿ.ಪ್ರಾ.ಶಾಲೆ ಮುಗಳಿ
3.ಸ.ಹಿ.ಪ್ರಾ.ಶಾಲೆ ದುಬ್ಬನಮರಡಿ
4.ಸ.ಹಿ.ಪ್ರಾ.ಶಾಲೆ ಭೈರಿದೇವರಕೊಪ್ಪ
5.ಸ.ಹಿ.ಪ್ರಾ.ಶಾಲೆ ಗರಗ(KCB)
6.ಸ.ಹಿ.ಪ್ರಾ.ಶಾಲೆ ಮಡಕಿಹೊನ್ನಳ್ಳಿ
7.ಸ.ಹಿ.ಪ್ರಾ.ಶಾಲೆ ಕಡಬಗಟ್ಟಿ
8.ಸ.ಹಿ.ಪ್ರಾ.ಶಾಲೆ ಖಾನಾಪುರ ಎಂ
9.ಸ.ಹಿ.ಪ್ರಾ.ಶಾಲೆ ನರೇಂದ್ರ
10.ಸ.ಹಿ.ಪ್ರಾ.ಶಾಲೆ ಕುಬಿಹಾಳ
11.ಶಿವಾನಂದ ಭಾರತಿ ಹಿ. ಪ್ರಾ.ಶಾಲೆ ಸುಳ್ಳ
12.BRC ಕಟ್ಟಡಕ್ಕೆ ದೇಣಿಗೆ
13.ನಿರಾಶ್ರಿತರ ಪುನರ್ವಸತಿ ಕೇಂದ್ರ ನವನಗರ.
14 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ 4 ಸವದತ್ತಿ. 15 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಮಾರಗೊಪ್ಪ ತಾಲ್ಲೂಕು ನವಲಗುಂದ
ರೂ 16,000-18,000 ದತ್ತಿದಾನ ನೀಡಿದ ಶಾಲೆಗಳು
1.ಸ.ಹಿ.ಪ್ರಾ.ಶಾಲೆ ಗೋವನಕೊಪ್ಪ
18,000
2.ಸ.ಹಿ.ಉ.ಪ್ರಾ.ಶಾಲೆ ಮುಗದ 17,800

ರೂ 15,000 ದತ್ತಿದಾನ ನೀಡಿದ ಶಾಲೆಗಳು
1.ಸರ್ಕಾರಿ ಪ್ರೌಢಶಾಲೆ ಕೋಟೂರ
2.ಸ.ಹಿ.ಪ್ರಾ.ಶಾಲೆ ವರವಿನಾಗಲಾವಿ
3.ಮಳವಳ್ಳಿ ಮೂಕ ಮಕ್ಕಳ ಶಾಲೆ
4.ಹನುಮತಾಯಿ ನವಲಗುಂದ ಪ್ರೌಢಶಾಲೆ ಧಾರವಾಡ
5.ಸರ್ವಜ್ಞ ಶಾಲೆ ಧಾರವಾಡ.
ಸರ್ಕಾರಿ ಹಿ ಪ್ರಾ ಶಾಲೆ ಕಲಕೇರಿ 6 ಸರ್ಕಾರಿ ಪ್ರೌಢಶಾಲೆ ಕಲಕೇರಿ. 7- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದರಕಾಲನಿ ವೆಂಕಟಾಪೂರ. ಧಾರವಾಡ ತಾಲ್ಲೂಕು.
ರೂ13,000-14000 ದತ್ತಿದಾನ ನೀಡಿದ ಶಾಲೆಗಳು
1.ಸ.ಕಿ.ಉ.ಪ್ರಾ.ಶಾಲೆ ಹೆಬ್ಬಳ್ಳಿ

ರೂ 12,000ದತ್ತಿದಾನ ನೀಡಿದ ಶಾಲೆಗಳು
1.ಸ.ಹಿ.ಪ್ರಾ.ಶಾಲೆ ಮಾರಡಗಿ
2.ಸ.ಹಿ.ಪ್ರಾ.ಶಾಲೆ ಸೋಮಾಪುರ
3.ಸ.ಹಿ.ಪ್ರಾ.ಶಾಲೆ ತಲವಾಯಿ
4.ಸ.ಹಿ.ಪ್ರಾ.ಶಾಲೆ ವನಹಳ್ಳಿ
5.ಸ.ಹಿ.ಪ್ರಾ.ಶಾಲೆ ಕೊಟಬಾಗಿ
6.ಸ.ಹಿ.ಪ್ರಾ.ಶಾಲೆ ಬೇಗೂರ
7.ಸ.ಹಿ.ಪ್ರಾ.ಶಾಲೆ ಲೋಕೂರ
8.ಸ.ಹಿ.ಪ್ರಾ.ಶಾಲೆ ಕುರುಬಗಟ್ಟಿ
9.ಸ.ಹಿ.ಪ್ರಾ.ಶಾಲೆ ಮುಳಮುತ್ತಲ
10.ಸ.ಹಿ.ಪ್ರಾ.ಶಾಲೆ ಚಿಕ್ಕಮಲ್ಲಿಗವಾಡ
11.ಸ.ಹಿ.ಪ್ರಾ.ಶಾಲೆ ಹುಣಸೀಕುಮರಿ
12.ಸ.ಹಿ.ಪ್ರಾ.ಶಾಲೆ ದಡ್ಡಿಕಮಲಾಪೂರ
13.ಸ.ಹಿ.ಪ್ರಾ.ಶಾಲೆ ಮದಿಕೊಪ್ಪ
14.ಸ.ಹಿ.ಪ್ರಾ.ಶಾಲೆ ಕಲ್ಲಾಪುರ
15.ಸ.ಹಿ.ಪ್ರಾ.ಶಾಲೆ ಅಂಬೂಳ್ಳಿ
16.ಸ.ಹಿ.ಪ್ರಾ.ಶಾಲೆ ಹೊನ್ನಾಪುರ
17.ಸ.ಹಿ.ಪ್ರಾ.ಶಾಲೆ ಮುರಕಟ್ಟಿ
18.ಸ.ಹಿ.ಪ್ರಾ.ಶಾಲೆ ಬೆನಕಟ್ಟಿ
19.ಸ.ಹಿ.ಪ್ರಾ.ಶಾಲೆ ಕಣವಿ ಹೊನ್ನಾಪುರ
20.ಸ.ಹಿ.ಪ್ರಾ.ಶಾಲೆ ಲಕಮಾಪೂರ
21.ಸ.ಹಿ.ಪ್ರಾ.ಶಾಲೆ ನಿಗದಿ
22.ಸ.ಹಿ.ಪ್ರಾ.ಶಾಲೆ ದೇವರ ಹುಬ್ಬಳ್ಖಿ
23.ಸರ್ಕಾರಿ ಪ್ರೌಢಶಾಲೆ ಸೋಮಾಪುರ
24.ಸರ್ಕಾರಿ ಪ್ರೌಢಶಾಲೆ ಕಲಕೇರಿ
25.ಸ.ಹಿ.ಪ್ರಾ.ಶಾಲೆ ಧಾರವಾಡ ಪಾರ್ಮ.

ರೂ10,000 ದತ್ತಿದಾನ ನೀಡಿದ ಶಾಲೆಗಳು & ಸಂಸ್ಥೆಗಳು
1.ಸ.ಹಿ.ಪ್ರಾ.ಶಾಲೆ ರಾಮಚಂದ್ರ ನಗರ
2.ಪ್ರವಾಹ ಪೀಡಿತರ ನಿಧಿಗೆ
3.ಅಪ್ನಾ ದೇಶ ಬಳಗದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ

ರೂ 5,000 ದತ್ತಿದಾನ ನೀಡಿದ ಶಾಲೆಗಳು
1.ಸ.ಹಿ.ಉ.ಪ್ರಾ.ಶಾಲೆ ಹೆಬ್ಬಳ್ಳಿ
2.ಸ.ಹಿ.ಪ್ರಾ.ಶಾಲೆ ಎತ್ತಿನಗುಡ್ಡ

ಹೆತ್ತ ಮಕ್ಕಳ ಕೈಯಲ್ಲಿ ಒಂದು ರೂಪಾಯಿ ಕೊಡೋಕು ಹಿಂದು-ಮುಂದು ನೋಡೋ ಈಗಿನ ಜಗದಲ್ಲಿ ಸಮಾಜದ ಸರ್ವರ ಏಳಿಗೆಗಾಗಿ ಒಬ್ಬ ಸಾಮಾನ್ಯ ಶಿಕ್ಷಕಿಯರಾಗಿ ಸುಮಾರು 15 ಲಕ್ಷ ರೂಪಾಯಿಗಿಂತಲೂ ಹೆಚ್ಚು ಮೊತ್ತದ “ದತ್ತಿದಾನ” ಮಾಡಿ ಅಸಾಮಾನ್ಯ ಧೀಮಂತ ಮಹಾನ ಚೇತನ ವಾಗಿ ನಿತ್ಯ ಅಕ್ಷರಕ್ರಾಂತಿಯ ಕಹಳೆ ಊದುತ್ತಿರುವ ‘ದತ್ತಿದಾನದ ಅತ್ತಿಮಬ್ಬೆ’ ಮಾತೆ ಶ್ರೀಮತಿ ಲೂಸಿ ಸಾಲ್ಡಾನಾ ರವರಿಗೆ ಆ ಭಗವಂತನು ಇನ್ನಷ್ಟು ಐಶ್ವರ್ಯಾಆಯುರಾರೋಗ್ಯ ಕರುಣಿಸಲೆಂದು ಪ್ರಾರ್ಥಿಸುತ್ತಾ ಈ ಪುಟ್ಟ ಕಂದನಿಗೆ ನಾಲ್ಕಾರು ನುಡಿನಮನಗಳ ಭಾಗ್ಯ ಸಿಕ್ಕಿದ್ದು ಆ ಜನ್ಮದ ಪುಣ್ಯವೆಂದು ಭಾವಿಸಿ ಈ ಬರವಣಿಗೆಗೆ ಮಾರ್ಗದ ರ್ಶನ ಮಾಡಿದ ನನ್ನ ಮಾತೃ ಇಲಾಖೆಯ ಮಾನ್ಯ ಸರ್ವ ಅಧಿಕಾರಿಗಳಿಗೆ ಹಾಗೂ ವಿಶೇಷವಾಗಿ ಸೂಕ್ತಮಾರ್ಗದರ್ಶನದೊಂದಿಗೆ ಈ ಅವಕಾಶ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಮತಿ ವಿದ್ಯಾ ನಾಡಿಗೇರ, ಡಯಟ್ ನ ಮಾನ್ಯ ಉಪನ್ಯಾಸಕರಾದ ಶ್ರೀಮತಿ ಅಮಲಜರಿ ಮೇಡಂರವರಿಗೆ ಹಾಗೂ ಸರ್ವ ಶಿಕ್ಷಕರಿಗೆ ಅನಂತ ನಮನಗಳನ್ನು ಅರ್ಪಿಸಿ ನಾಲ್ಕಾರು ನುಡಿಪುಷ್ಪಗಳನ್ನು ಮಾತೆಯವರ ದಿವ್ಯ ಗುರಚರಣಕ್ಕೆ ಸಮರ್ಪಿಸುವೆ.

ವರದಿ ✍? ಎಲ್ ಐ ಲಕ್ಕಮ್ಮನವರ ಶಿಕ್ಷಕರು


WhatsApp Group Join Now
Telegram Group Join Now
Suddi Sante Desk