ಬೆಂಗಳೂರು –
ರಾಜ್ಯದಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಗೊತ್ತಾ ಅಪಾರ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇದ್ದರೂ ತುಂಬಲು ಮನಸ್ಸು ಮಾಡುತ್ತಿಲ್ಲ ಸರ್ಕಾರ ಹಾಲಿ ನೌಕರರಿಗೆ ಹೆಚ್ಚಾಗುತ್ತಿದೆ ಕಾರ್ಯದೊತ್ತಡ
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಸರ್ಕಾರಿ ಇಲಾಖೆ ಯಲ್ಲಿನ ಖಾಲಿ ಹುದ್ದೆಗಳ ಪ್ರಮಾಣ ಹೆಚ್ಚಾಗು ತ್ತಿದೆ.ಸಧ್ಯ ರಾಜ್ಯದ ಎಲ್ಲಾ ಇಲಾಖೆಗಳಲ್ಲಿ 2.52 ಲಕ್ಷ ಹುದ್ದೆ ಖಾಲಿ ಇವೆ.ವಿವಿಧ ಸರ್ಕಾರಿ ಇಲಾಖೆ ಗಳು ಇಲಾಖೆಯ ಸಂಸ್ಥೆಗಳು, ನಿಗಮ ಹಾಗೂ ಮಂಡಳಿಗಳು ಸೇರಿ ಸರ್ಕಾರದ ವಿವಿಧ ಇಲಾಖೆ ಗಳಲ್ಲಿ ಒಟ್ಟು 7,69,981 ಹುದ್ದೆಗಳು ಮಂಜೂರಾ ಗಿರುವ ಪೈಕಿ 5,11,272 ನೌಕರರು ಕಾರ್ಯ ನಿರ್ವಹಿಸುತ್ತಿದ್ದು 2,58,709 ಲಕ್ಷ ಹುದ್ದೆಗಳು ಖಾಲಿ ಇವೆ.
ಇದರಿಂದಾಗಿ ಶ್ರೇಣೀಕೃತ ನೌಕರಶಾಹಿ ಪಿರಮಿಡ್ ತಲೆಕೆಳಗಾಗಿದೆ.ಎಲ್ಲಾ ಮಂಜೂರಾದ ಹುದ್ದೆಗ ಳನ್ನು ಭರ್ತಿ ಮಾಡಿದರೆ ವೇತನ, ಭತ್ಯೆಗಾಗಿ ಸರ್ಕಾರಕ್ಕೆ ವಾರ್ಷಿಕ 8,531 ಕೋಟಿ ರೂ. ಹೆಚ್ಚುವರಿ ಖರ್ಚಾಗಲಿದೆ. ಆರ್ಥಿಕ ಮಿತವ್ಯಯ ಲೆಕ್ಕಾಚಾರದಲ್ಲಿ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗುತ್ತಿಲ್ಲ.ಸಿಬ್ಬಂದಿ ಕೊರತೆಯಿಂದ ಹಾಲಿ ನೌಕರರಿಗೆ ಕಾರ್ಯದೊತ್ತಡ ಸಮಸ್ಯೆ ಎದುರಾ ದರೆ ಸಾರ್ವಜನಿಕರಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯ ಸಿಗದಂತಾಗಿದೆ.
ಇದೇಲ್ಲಾ ವಿಚಾರವು ರಾಜ್ಯ ಸರ್ಕಾರಕ್ಕೆ ಜನಪ್ರತಿನಿಧಿಗಳಿಗೆ ಗೊತ್ತಿದ್ದರೂ ಕೂಡಾ ಗೊತ್ತಿ ಲ್ಲದಂತೆ ಮೌನವಾಗಿದ್ದಾರೆ ಹೀಗಾಗಿ ನಡೆಯುತ್ತಿದೆ ನಡೆದುಕೊಂಡು ಹೋಗುತ್ತಿದೆ ಎಂಬ ಆಲೋಚನೆ ಯಲ್ಲಿ ನಮ್ಮನ್ನಾಳುವ ಜನಪ್ರತಿನಿಧಿಗಳಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..