This is the title of the web page
This is the title of the web page

Live Stream

March 2023
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

National News

ಚಿಕ್ಕ ಮಕ್ಕಳ ಬ್ಯಾಗ್​ ತೂಕ ಎಷ್ಟಿರಬೇಕು ಗೊತ್ತಾ ಪ್ರಾಥಮಿಕ ಹಂತದಲ್ಲಿನ ಪ್ರತಿಯೊಬ್ಬ ಮಕ್ಕಳ  ತೂಕದ ಕಂಪ್ಲೀಟ್ ಮಾಹಿತಿ ನಿಮಗಾಗಿ…..


ನವದೆಹಲಿ

ಚಿಕ್ಕ ಮಕ್ಕಳ ಬ್ಯಾಗ್​ ತೂಕ ಎಷ್ಟಿರಬೇಕು ಗೊತ್ತಾ ಪ್ರಾಥಮಿಕ ಹಂತದಲ್ಲಿನ ಪ್ರತಿಯೊಬ್ಬ ಮಕ್ಕಳ  ತೂಕದ ಕಂಪ್ಲೀಟ್ ಮಾಹಿತಿ ನಿಮಗಾಗಿ ಹೌದು ರಾಷ್ಟ್ರೀಯ ಶಾಲಾ ಬ್ಯಾಗ್ ನೀತಿಯ ಪ್ರಕಾರ 10 ರಿಂದ 16 ಕೆಜಿ ತೂಕದ ಪೂರ್ವ ಪ್ರಾಥಮಿಕ ಹಂತದಲ್ಲಿ ಓದುತ್ತಿರುವ ಮಕ್ಕಳು ತಮ್ಮೊಂದಿಗೆ ಶಾಲಾ ಬ್ಯಾಗ್ ಕೊಂಡೊಯ್ಯುವ ಅಗತ್ಯವಿಲ್ಲ.

16 ರಿಂದ 22 ಕೆಜಿ ತೂಕದ ಒಂದನೇ ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳು ಗರಿಷ್ಠ 1.6 ರಿಂದ 2.2 ಕೆಜಿ ತೂಕದ ಚೀಲವನ್ನು ಒಯ್ಯಲು ಸೂಚಿಸಲಾಗಿದೆ.6 ರಿಂದ 8 ನೇ ತರಗತಿಯ ಮಕ್ಕಳಿಗೆ ನಿಯಮಗಳು ಇಲ್ಲಿವೆ.

6, 7 ಮತ್ತು 8ನೇ ತರಗತಿಯ ಮಕ್ಕಳ ತೂಕ 20 ರಿಂದ 30 ಕೆಜಿ ಇದ್ದರೆ ಗರಿಷ್ಠ 2 ರಿಂದ 3 ಕೆಜಿ ಚೀಲವನ್ನು ಶಾಲೆಗೆ ತೆಗೆದುಕೊಂಡು ಹೋಗ ಬೇಕು.ಆದರೆ ಅವರ ತೂಕ 25 ರಿಂದ 40 ಕೆಜಿ ಇದ್ದರೆ ಅವರು ಶಾಲೆಗೆ 2.5 ರಿಂದ 4 ಕೆಜಿ ಚೀಲ ವನ್ನು ಒಯ್ಯಬಹುದು ಎಂದು ಹೇಳಲಾಗಿದೆ.

9 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು 9 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು 2.5 ಕೆಜಿಯಿಂದ 5 ಕೆಜಿ ತೂಕದ ಚೀಲವನ್ನು ಒಯ್ಯಬಹುದು.ಇದರಲ್ಲೂ ನಿಯಮವಿದೆ.ನೀವು 9 ಅಥವಾ 10 ನೇ ತರಗತಿ ಓದುತ್ತಿದ್ದರೆ,ನಿಮ್ಮ ಬ್ಯಾಗ್ ಕೇವಲ 2.5 ಕೆಜಿ ಯಿಂದ 4 ಕೆಜಿಯಿಂದ 5 ಕೆಜಿ ತೂಕವಿರಬೇಕು.

ನೀವು 11 ಮತ್ತು 12 ನೇ ತರಗತಿಯಲ್ಲಿ ಓದು ತ್ತಿದ್ದರೆ ನಿಮ್ಮ ಶಾಲಾ ಬ್ಯಾಗ್ 3.5 ರಿಂದ 5 ಕೆಜಿ ತೂಕವಿರಬೇಕು.ರಾಷ್ಟ್ರೀಯ ಸ್ಕೂಲ್ ಬ್ಯಾಗ್ ನೀತಿಯು ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಅನ್ವಯಿಸುತ್ತದೆ. ಕಳೆದ ವರ್ಷ ದೆಹಲಿಯ ಶಿಕ್ಷಣ ನಿರ್ದೇಶನಾಲ ಯವು ಈ ನೀತಿಯನ್ನು ಜಾರಿಗೆ ತರುವಂತೆ ರಾಜಧಾನಿಯ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸದೆ.

ಜೊತೆಗೆ ದೆಹಲಿಯ ಎಲ್ಲಾ ಶಾಲೆಗಳು ತಮ್ಮ ಶಾಲೆಗಳಲ್ಲಿ ಎಸ್‌ಸಿಇಆರ್‌ಟಿ, ಎನ್‌ಸಿಇಆರ್‌ಟಿ ಮತ್ತು ಸಿಬಿಎಸ್‌ಇ ಸೂಚಿಸಿದ ಪಠ್ಯಕ್ರಮವನ್ನು ಜಾರಿಗೆ ತರಬೇಕು.ದೆಹಲಿ ಶಿಕ್ಷಣ ನಿರ್ದೇಶನಾ ಲಯ ತಿಳಿಸಿದೆ.ಈ ಹೊಸ ನಿಯಮದಿಂದ ಎಷ್ಟೋ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ. ಮಕ್ಕಳು ತಮ್ಮ ತೂಕಕ್ಕೆ ಅನುಗುಣವಾದ ಭಾರದ ಬ್ಯಾಗ್​​ಗಳನ್ನು ಶಾಲೆಗೆ ಕೊಂಡೊಯ್ಯುವ ನಿಯಮ ಜಾರಿಗೆ ಬರಲಿದೆ.

ಸುದ್ದಿ ಸಂತೆ ನ್ಯೂಸ್ ನವದೆಹಲಿ…..


Google News Join The Telegram Join The WhatsApp

 

 

Suddi Sante Desk

Leave a Reply