This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಈ ಸರ್ಕಾರಿ ಮಾದರಿ ಶಾಲೆ ಹೇಗಿದೆ ಗೊತ್ತಾ – ಸುಂದರ ಶಾಲೆ ನೋಡಲು ಎರಡು ಕಣ್ಣುಗಳು ಸಾಲೊದಿಲ್ಲ….. ಮಾದರಿ ಶಾಲೆ…..

WhatsApp Group Join Now
Telegram Group Join Now

ಚಿತ್ರದುರ್ಗ –

ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವವರೆ ಹೆಚ್ಚು ಇಂತಹ ಪರಿಸ್ಥಿತಿಯಲ್ಲಿ ಸರಕಾರಿ ಶಾಲೆಗೆ ಹೊಸ ರೂಪ ಕೊಟ್ಟು ಖಾಸಗಿ ಶಾಲೆಗಿಂತ ಕಮ್ಮಿ ಇಲ್ಲವಂತೆ ಸರಕಾರಿ ಶಾಲೆಯ ಚಿತ್ರಣವನ್ನು ಬದಲಿಸಿ ದ್ದಾರೆ.

ಹೌದು ಇದಕ್ಕೆ ಸಾಕ್ಷಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಗೋಸಿಕೆರೆ ಹೊಸ ಕಪಿಲೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

ಲಾಕ್ ಡೌನ್ ಸಮಯವನ್ನು ಬಳಸಿಕೊಂಡು ಶಾಲೆ ಯ ಪರಿಸರವನ್ನೆ ಉತ್ತಮ ಗೊಳಿಸಿ ಮಕ್ಕಳ ಕಲಿಗೆ ಬೇಕಾಗುವಂತಹ ಪಠ್ಯ ಪೂರಕ ವಾತವರಣವನ್ನು ಸೃಷ್ಠಿಸಿದ್ದಾರೆ.

ಈ ಒಂದು ಪಾಠ ಶಾಲೆಯ ಚಿಣ್ಣರ ಚಿತ್ರಲೋಕಕ್ಕೆ ಸುಲಭ ರೀತಿಯಲ್ಲಿ ಅಕ್ಷರ ಅಭ್ಯಾಸ ಮಾಡಲು ವಿನೂತನ ಪ್ರಯತ್ನದ ಮೂಲಕ ಮಕ್ಕಳನ್ನು ಆಕ ರ್ಷಣೆ ಮಾಡುತ್ತಿದ್ದಾರೆ.

ಇನ್ನೂ ಶಾಲೆಯಲ್ಲಿ 1 ರಿಂದ 5 ನೇ ತರಗತಿಯವರಿಗೆ ಕಲಿಯಲು ಅವಕಾಶವಿದೆ ಶಾಲೆಯಲ್ಲಿ 30 ವಿದ್ಯಾ ರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಶಾಲೆಯು ತಾಲ್ಲೂಕಿನಲ್ಲಿಯೇ ವಿಭಿನ್ನವಾದ ಶಾಲೆಯೆಂದರೆ ತಪ್ಪಾಗಲಾರದು.

ಶಾಲೆಯ ಗೋಡೆಗಳನ್ನು ಪುಸ್ತಕದ ಆಳೆಗಳಂತೆ ಪರಿವರ್ತಿಸಿ ಅಕ್ಷರಗಳನ್ನು ಚಿತ್ರಿಸಿದ್ದಾರೆ ಪ್ರಪಂಚದ ಬಹುಮುಖ್ಯ ವಿಷಯಗಳ ಕುರಿತಾದ,ವಿಜ್ಞಾನ ವಿಷ ಯಗಳ ಕುರಿತು ಮಾಹಿತಿ ನೀಡುವ ಚಿತ್ರಗಳನ್ನು ಶಾಲೆ ಗೋಡೆಯ ಮೇಲೆ  ಬರೆಸಿದ್ದಾರೆ.

ಇದರಿಂದ  ಸುಲಭ ರೀತಿಯಲ್ಲಿ ಅಕ್ಷರಗಳು ಮಕ್ಕಳು ಕಲಿಯಲು ಸಹಾಯ ವಾಗುವಂತೆ ಕಾರ್ಯ ವನ್ನು ಗೋಸಿಕೆರೆ ಹೊಸಕಪಿಲೆ ಶಾಲೆಯ ಶಿಕ್ಷಕ ದಿನೇಶ್  ಮಾಡಿದ್ದಾರೆ.

ಶಾಲೆ ಎಲ್ಲಾ ಗೋಡೆಗಳ ಮೇಲೆ ಕಲಿಕೆಯ ವಿಷಯ ಗಳ ಚಿತ್ರಗಳ ನ್ನು ರಚನೆ ಮಾಡಿಸಿ ಮಕ್ಕಳ ಸುಲಭ  ಕಲಿಕೆಗೆ ದಾರಿಯಾಗಿದೆ. ಸರ್ಕಾರಿ ಶಾಲೆಗಳೆಂದರೆ ಎಲ್ಲರ ಮನಸ್ಸಲ್ಲಿ ಮೂಡುವುದು ಸರಿಯಾದ ಸಮಯಕ್ಕೆ ಶಿಕ್ಷಕರು ಶಾಲೆಗೆ ಬರುವುದಿಲ್ಲ‌ ಬಂದರು ನೆಟ್ಟಗೆ ಅಕ್ಷರ ಅಭ್ಯಾಸ ಮಾಡಿಸಲ್ಲ ಎಂದು ಹಳ್ಳಿಗ ಳಲ್ಲಿ ಸರ್ವೆ ಸಾಮಾನ್ಯವಾಗಿ ಮಾತನಾಡಿಕೊಳ್ಳು ವುದೇ ಜಾಸ್ತಿ.

ಆದರೆ ಗೋಸಿಕೆರೆ ಹೊಸಕಪಿಲೆ ಶಾಲೆ ಅಕ್ಷರ ಅಭ್ಯಾಸಕ್ಕೂ ಸೈ, ಕಂಪ್ಯೂಟರ್ ಕಲಿಕೆಗೆ ಸೈ ಎನಿಸಿಕೊಂಡಿದೆ.ಶಾಲೆಯಲ್ಲಿ ಎಲ್ಲಾ ಮಕ್ಕಳಿಗೆ ಶಾಲೆ ಕಟ್ಟಡದ ಮೇಲೆ ಅಕ್ಷರಗಳು, ಇತರೆ ವಿಷಯಗಳ ಕುರಿತು ಮಾಹಿತಿ ನೀಡುವ ಚಿತ್ರಗಳ ರಚನೆ ಮಾಡ ಲಾಗಿದೆ.

ಮಕ್ಕಳಿಗೆ ಅ ಚಿತ್ರಗಳ ಬಗ್ಗೆ ಬರೆದಿರುವ ಅಕ್ಷರಗಳ ಬಗ್ಗೆ ಕೇಳಿದರೆ ಸಾಕು ಥಟ್ ಅಂತಹ ಹೇಳುತ್ತಾರೆ. ಅಷ್ಟರ ಮಟ್ಟಿಗೆ ಶಾಲೆಯ ಶಿಕ್ಷಕರು ಶಿಕ್ಷಣದ ಜ್ಞಾನ ಮಕ್ಕಳಿಗೆ ನೀಡುತ್ತಿದ್ದಾರೆ ಶಿಕ್ಷಕ ದಿನೇಶ್.

ಶಾಲೆಯ ಆವರಣದಲ್ಲಿ 30 ಕ್ಕು ಹೆಚ್ಚು ಗಿಡಗಳನ್ನು ನೆಡಲಾಗಿದೆ. ಈ ಗಿಡಗಳ ಸುತ್ತಮುತ್ತ ಮಕ್ಕಳ ಆಟವಾಡಲು ಆಟದ ಸಾಮಾಗ್ರಿಗಳು ಕೂಡ ಆವರಣದಲ್ಲಿ ಇಡಲಾಗಿದೆ ಮಕ್ಕಳು ಆಟವಾಡಿ ಮರಗಳ ನೆರಳಲ್ಲಿ ವಿಶ್ರಾಂತಿ ಪಡೆಯುವಂತಹ ವಾತವರಣವು ಕೂಡ ಇದೆ. ಲಾಕ್ ಡೌನ್ ಸಮಯ ವನ್ನು ಬಳಸಿಕೊಂಡು ಶಾಲೆಯನ್ನು ಅಭಿವೃದ್ದಿ ಪಡಿಸಲಾಗಿದೆ.ಇದೊಂದು ಉತ್ತಮ ಕಾರ್ಯ ವಾಗಿದೆ ಎಂದು ಪೋಷಕರು ಹಾಗೂ ಅಧಿಕಾರಿಗಳು ಪ್ರಸಂಶಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk