ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಡಾ ರುದ್ರೇಶ ಘಾಳಿ – ಸ್ವಾಗತಿಸಿ ಶುಭಹಾರೈಸಿದ ಪಾಲಿಕೆಯ ಅಧಿಕಾರಿಗಳು,ಸಿಬ್ಬಂದಿಗಳು…..
ಹುಬ್ಬಳ್ಳಿ ಧಾರವಾಡ ಮಹಾನಗರ ಮಹಾನಗರ ಪಾಲಿಕೆಯ ಆಯುಕ್ತರಾಗಿ ಡಾ ರುದ್ರೇಶ ಎಸ್ ಘಾಳಿ ಅಧಿಕಾರವನ್ನು ವಹಿಸಿಕೊಂಡರು.ಹೌದು ಈ ಹಿಂದೆ ಪಾಲಿಕೆಯ ಆಯುಕ್ತರಾಗಿದ್ದ ಡಾ ಈಶ್ವರ ಉಳ್ಳಾಗಡ್ಡಿ ಯವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿದ್ದು ಇವರ ಸ್ಥಾನಕ್ಕೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಗಿರುವ ಡಾ ರುದ್ರೇಶ್ ಎಸ್ ಘಾಳಿ ಅವರನ್ನು ನೇಮಕ ಮಾಡಲಾಗಿದೆ.
ಅತ್ತ ಆದೇಶವಾಗುತ್ತಿದ್ದಂತೆ ಇತ್ತ ರುದ್ರೇಶ ಘಾಳಿಯ ವರು ಹುಬ್ಬಳ್ಳಿಯ ಪಾಲಿಕೆಯ ಕಚೇರಿಯಲ್ಲಿ ಅಧಿಕಾರ ವನ್ನು ವಹಿಸಿಕೊಂಡರು.ಸರಳವಾಗಿ ಕಚೇರಿಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾಗಿ ಜವಾಬ್ದಾರಿಯನ್ನು ವಹಿಸಿಕೊಂಡರು.
ಇದೇ ವೇಳೆ ಮಾತನಾಡಿದ ಅವರು ಅವಳಿ ನಗರದ ಅಭಿವೃದ್ದಿಯೇ ನನ್ನ ಗುರಿಯಾಗಿದೆ ಎನ್ನುತ್ತಾ ಅಧಿಕಾರಿ ಗಳ ನೌಕರರ ಸಿಬ್ಬಂದಿಗಳ ನೇತ್ರತ್ವದಲ್ಲಿ ಸ್ವಚ್ಚ ಸುಂದರ ಆಡಳಿತವನ್ನು ನೀಡುತ್ತೇವೆ ಎಂದರು.ಪಾಲಿಕೆಗೆ ನೂತನ ಆಯುಕ್ತರಾಗಿ ಅಧಿಕಾರವನ್ನು ವಹಿಸಿಕೊಳ್ಳುತ್ತಿದ್ದಂತೆ ಇತ್ತ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ವಿಶ್ವನಾಥ,
ಪಾಲಿಕೆಯ ಉಪ ಆಯುಕ್ತರಾದ ವಿಜಯಕುಮಾರ್ ಬ್ಬಂದಿಗಳಾದ ಶಿವಾನಂದ ದರೇಕಾರ,ಗಣೇಶ ಮಡಿವಾಳರ,ಪುನಿತ್,ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……