ಉಡುಪಿ –
BJP ಯಿಂದ ಮಾಜಿ ಶಾಸಕನ ಉಚ್ಚಾಟನೆ ಪಕ್ಷದ ಸೂಚನೆಗಳನ್ನು ಕಡೆಗಣಿಸಿದ ಮಾಜಿ ಶಾಸಕನಿಗೆ 6 ವರ್ಷ ಉಚ್ಚಾಟನೆ ಶಿಕ್ಷೆ ನೀಡಿದ
ಪಕ್ಷದ ಸೂಚನೆಗಳನ್ನು ಕಡೆಗಣಿಸಿದ ಹಿನ್ನಲೆ ಯಲ್ಲಿ ಮಾಜಿ ಶಾಸಕ ರಘುಪತಿ ಭಟ್ ರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.ಹೌದು ಪದವೀಧರ ಕ್ಷೇತ್ರದಿಂದ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ ಹಿನ್ನಲೆಯಲ್ಲಿ ಇವರನ್ನು ಉಚ್ಚಾಟನೆ ಮಾಡಲಾಗಿದೆ.
ಪ್ರಸಕ್ತ ವಿಧಾನ ಪರಿಷತ್ ಚುನಾವಣೆಗೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಪಕ್ಷದ ಮುಜುಗರಕ್ಕೆ ಕಾರಣ ರಾಗಿದ್ದೀರಿ.ಇದು ಪಕ್ಷದ ಶಿಸ್ತು ಉಲ್ಲಂಘನೆಯಾ ಗಿದೆ ಎಂದು ಆದೇಶದಲ್ಲಿ ಉಲ್ಲೇಖವನ್ನು ಮಾಡಲಾಗಿದೆ.
ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಜವಾಬ್ದಾ ರಿಗಳಿಂದ ಮುಕ್ತಗೊಳಿಸಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಆದೇಶದಲ್ಲಿ ತಿಳಿಸಿದೆ.ಈ ಮೊದಲು ಪಕ್ಷೇತರ ಸ್ಪರ್ಧೆಗೆ ಸ್ಪಷ್ಟನೆ ಕೊಡುವಂತೆ ಶಿಸ್ತು ಸಮಿತಿ ಯಿಂದ ನೋಟಿಸ್ ನೀಡಲಾಗಿತ್ತು.
ಇದೀಗ ಶಿಸ್ತು ಸಮಿತಿಯಿಂದ ರಘುಪತಿ ಭಟ್ ಉಚ್ಚಾಟನೆ ಮಾಡಿ ಅದೇಶ ಹೊರಡಿಸಲಾಗಿದೆ. ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.
ಸುದ್ದಿ ಸಂತೆ ನ್ಯೂಸ್ ಉಡುಪಿ