ಬೆಂಗಳೂರು –
ಕೆಂಪು ಕೋಟೆಯಲ್ಲಿ ಭಗವಾಧ್ವಜ ಹಾರಿಸುವ ಕುರಿತು ಸಚಿವ ಈಶ್ವರಪ್ಪ ಅವರ ಹೇಳಿಕೆ ವಿರೋಧಿಸಿ ಹೋರಾಟ ಕ್ಕಿಳಿದಿರುವ ಕಾಂಗ್ರೆಸ್ ಪಕ್ಷದ ನಾಯಕರು ರಾಜ್ಯಪಾಲರ ಭೇಟಿಗೆ ಮುಂದಾಗಿದ್ಜಾರೆ.ಹೌದು ಇಂದು ವಿಧಾನಸೌಧ ದಿಂದ ರಾಜಭವನದವರೆಗೆ ಈ ಒಂದು ಪಾದಯಾತ್ರೆ ನಡೆಯಲಿದ್ದು ಸಂಜೆ ೪ ಗಂಟೆಗೆ ಈಶ್ವರಪ್ಪ ವಜಾಕ್ಕೆ ಒತ್ತಾಯಿಸಿ ರಾಜಭವನಕ್ಕೆ ಕಾಂಗ್ರೆಸ್ ನಿಯೋಗ ತೆರಳಲಿದೆ

ಅಲ್ಲದೆ ಶಿವಮೊಗ್ಗ ಪ್ರಕರಣವನ್ನೂ ರಾಜಭವನದ ಅಂಗಳಕ್ಕೆ ಕೊಂಡೊಯ್ಯಲಿದ್ದಾರೆ.ಇನ್ನೂ ಸಚಿವರ ಹೇಳಿಕೆ ಹಾಗೂ ಕಾನೂನು ಸುವ್ಯವಸ್ಥೆ ನಿರ್ವಾಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ರಾಜ್ಯ ಪಾಲರಿಗೆ ದೂರು ಕೊಡಲು ನಿರ್ಧಾರ ಮಾಡಿದ್ದು ವಿಧಾನಸೌಧದಿಂದ ರಾಜಭವನದ ವರೆಗೆ ಕೈ ನಾಯಕರ ಪಾದಯಾತ್ರೆ ಮೂಲಕ ರಾಜಭವನ ಚಲೋ ಹಮ್ಮಿಕೊಂಡಿದ್ದಾರೆ.ಇನ್ನೂ ಇದಕ್ಕೂ ಮುನ್ನ ವಿಧಾನಸೌಧ ದಲ್ಲಿ ನಡೆದ ಕೈ ಪಕ್ಷದ ನಾಯಕರ ಸಭೆಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಈ ಒಂದು ಸಭೆಯಲ್ಲಿ ಪಾಲ್ಗೊಂಡರು.ವಿಧಾನ ಸೌಧ ದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.