ಧಾರವಾಡ –
IIT ಲೋಕಾರ್ಪಣೆಗೆ ಗಳಿಗೆಯಲ್ಲಿ ರಾಜ್ಯದ ಕ್ಷೇತ್ರದ ಜನರ ಪರವಾಗಿ ಎರಡು ಬೇಡಿಕೆಗಳನ್ನಿಟ್ಟ ಮಾಜಿ ಸಚಿವ ವಿನಯ ಕುಲಕರ್ಣಿ – ಐಐಟಿ ಧಾರವಾಡ ಗೆ ಬರಲು ನಮ್ಮದು ಪಾತ್ರ ತುಂಬಾ ಇದೆ ಎನ್ನುತ್ತಾ ಎಲ್ಲರೂ ಮೆಚ್ಚುವಂತೆ ರಾಜ್ಯದ ಕ್ಷೇತ್ರದ ಜನರ ಪರವಾಗಿ ಬೇಡಿಕೆಗಳನ್ನಿಟ್ಟು ಧ್ವನಿಯಾದ ನಾಯಕ.
ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಐಐಟಿ ಲೋಕಾರ್ಪಣೆ ಧಾರವಾಡದಲ್ಲಿ ನಡೆಯ ಲಿದೆ. ಮಾರ್ಚ್ 12 ರಂದು ಮಧ್ಯಾಹ್ನ 2 ಗಂಟೆಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಯವರು ಈ ಒಂದು ಸಂಸ್ಥೆಯನ್ನು ಉದ್ಘಾಟನೆ ಮಾಡಲಿದ್ದಾರೆ
ಇದಕ್ಕಾಗಿ ಈಗಾಗಲೇ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದ್ದು ಇನ್ನೂ ಈ ಒಂದು ಐಐಟಿ ಸಂಸ್ಥೆ ಧಾರವಾಡಗೆ ಬರಲು ಈ ಹಿಂದೆ ರಾಜ್ಯದಲ್ಲಿದ್ದ ಕಾಂಗ್ರೇಸ್ ಪಕ್ಷದ ಪಾತ್ರ ತುಂಬಾ ಇದೆ.ಅದರಲ್ಲೂ ನಾನು ಕೂಡಾ ಸಚಿವನಾಗಿದ್ದ ಸಮಯದಲ್ಲಿ ಧಾರವಾಡಗೆ ಬಂದಿದ್ದ ಈ ಒಂದು ಸಂಸ್ಥೆ ನಂತರ ರಾಯಚೂರಿಗೆ ಮೈಸೂರಿಗೆ ಶಿಪ್ಟ್ ಹೀಗಾಗಿ ಇದೇಲ್ಲವನ್ನು ಬಿಟ್ಟು ಧಾರವಾಡಗೆ ತರಲಾಯಿತು.
ಹೀಗಾಗಿ ನಮ್ಮ ಪಾತ್ರವು ತುಂಬಾ ಇದೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ. ಇನ್ನೂ ಸಧ್ಯ ಲೋಕಾರ್ಪಣೆ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎರಡು ಪ್ರಮು ಖವಾದ ಬೇಡಿಕೆಗಳನ್ನು ಮುಂಡಿಟ್ಟಿದ್ದಾರೆ.
ವಿಡಿಯೋ ಮೂಲಕ ಎರಡು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಮಾಜಿ ಸಚಿವರು.ವಿನಯ ಕುಲಕರ್ಣಿ ಮಾಜಿ ಸಚಿವರಾಗಿದ್ದು ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕರಾಗಿದ್ದಾರೆ. ಧಾರವಾಡಗೆ ಐಐಟಿ ಬಂದಿದ್ದು ಸಂತೋಷ ವಾಗಿದೆ.ಪ್ರತಿಯೊಬ್ಬರಿಗೂ ಶುಭವಾಗಲಿ ಎನ್ನುತ್ತಾ ಪ್ರಮುಖವಾಗಿ ಎರಡು ಬೇಡಿಕೆಗಳನ್ನು ಮುಂದಿ ಟ್ಟಿದ್ದಾರೆ
ಹೌದು ಉದ್ಘಾಟನೆಯಲ್ಲಿ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟ ಮಾಜಿ ಸಚಿವರು ರಾಜ್ಯದ ಕ್ಷೇತ್ರದ ಜನರ ಧ್ವನಿಯಾಗಿದ್ದಾರೆ.ಐಐಟಿ ಯಲ್ಲಿ ರಾಜ್ಯದ ಪ್ರತಿಶತ 25 ರಷ್ಟು ವಿದ್ಯಾರ್ಥಿ ಗಳಿಗೆ ಅವಕಾಶ ನೀಡಬೇಕೆಂದು ಒತ್ತಾಯ ವನ್ನು ಮಾಡಿದ್ದಾರೆ
ಐಐಟಿ ಗಾಗಿ ಭೂಮಿಯನ್ನು ನೀಡಿದವರಿಗೆ ಸಂಸ್ಥೆಯಲ್ಲಿ ಅವಕಾಶ ನೀಡಬೇಕು ಅವತ್ತು ಹೇಳಿದಂತೆ ನಡೆದುಕೊಂಡು ಕಾರ್ಯಕ್ರಮದಲ್ಲಿ ಘೋಷಣೆ ಮಾಡುವಂತೆ ಒತ್ತಾಯವನ್ನು ಮಾಡಿದ್ದಾರೆ ವಿನಯ ಕುಲಕರ್ಣಿ.ವಿಡಿಯೋ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯವನ್ನು ಮಾಡಿದ್ದಾರೆ ಮಾಜಿ ಸಚಿವರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..