ಬೆಂಗಳೂರು –
ಕಳೆದ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ಅಬ್ಬರಿಸಿದ್ದಾನೆ ಗುಡುಗು ಸಿಡಿಲಿನ ಮಳೆಗೆ ರಾಜ್ಯದ ಹಲವೆಡೆ ಹಲವು ಅನಾಹುತ ಗಳಾಗಿದ್ದು ಇನ್ನೂ ಇತ್ತ ಸಿಡಿಲಿಗೆ ರಾಜ್ಯದಲ್ಲಿ ಐದು ಜನ ಸಾವಿಗೀಡಾಗಿದ್ದಾರೆ ಹೌದು ಯಾದಗಿರಿ ಮತ್ತು ಧಾರವಾಡ ಜಿಲ್ಲೆಯಲ್ಲಿ ಈ ಒಂದು ಸಿಡಿಲಿಗೆ ಐದು ಜನ ಮೃತಪಟ್ಟಿದ್ದಾರೆ
ಸಿಡಿಲು ಬಡಿದು ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಯಾದಗಿರಿ ತಾಲೂಕಿನ ಜಿನಕೇರ ತಾಂಡಾದಲ್ಲಿ ನಡೆದಿದೆ.ಯಾದಗಿರಿ ತಾಲೂಕಿನ ಜೀನಕೇರಾ ತಾಂಡಾದ ಕೀಶನ್ ಜಾಧವ್ (25), ಚನ್ನಪ್ಪ ಜಾಧವ್ (18), ಸುನೀಬಾಯಿ ರಾಠೋಡ (27), ನೇನು ಜಾಧವ್ (15) ನಾಲ್ವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ.ಯಾದಗಿರಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲೂಕಿನ ಜಿನಕೇರ ತಾಂಡಾದಲ್ಲಿ ಮಳೆ ಆರಂಭವಾಗುತ್ತಿದ್ದಂತೆಯೇ ಆಶ್ರಯಕ್ಕಾಗಿ ತಾಂಡಾದಲ್ಲಿನ ಚಿಕ್ಕದಾದ ಮುರಗಮ್ಮ ದೇವಿ ದೇವಸ್ಥಾನದಲ್ಲಿ ಜನರು ಆಶ್ರಯಕ್ಕಾಗಿ ನಿಂತಿ ದ್ದಾರೆ. ಮಳೆ ಜೋರಾಗಿ ಗುಡುಗು, ಮಿಂಚಿನ ಸದ್ದು ಹೆಚ್ಚಾದ ನಂತರ ಸ್ವಲ್ಪ ಹೊತ್ತಿನಲ್ಲಿಯೇ ಭಾರಿ ಸದ್ದಿನೊಂದಿಗೆ ಸಿಡಿಲು ನೇರವಾಗಿ ಗುಡಿಗೆ ಅಪ್ಪಳಿಸಿದ ಪರಿಣಾಮ ಒಳಗಿದ್ದವರ ಪೈಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಗಣೇಶ, ದರ್ಶನ್ ಹಾಗೂ ಮೌನೇಶ್ ಮೂವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.ಇನ್ನೂ ಇತ್ತ ಧಾರವಾಡ ಜಿಲ್ಲೆಯಲ್ಲಿ ಸಿಡಿಲು ಬಡಿದು ಒರ್ವ ರೈತ ಮೃತಪಟ್ಟಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..