ಬೆಂಗಳೂರು –
ವಿಧಾನಪರಿಷತ್ ಗೆ ಮೂವರನ್ನು ನಾಮ ನಿರ್ದೇಶನ ಮಾಡಲಾಗಿದೆ ಹೌದು ಸೀತಾರಾಂ, ಉಮಾಶ್ರೀ, ಸುಧಾಮ್ ದಾಸ್ ಗೆ ಅನುಮೋದನೆ ನೀಡಿದ್ದಾರೆ ರಾಜ್ಯಪಾಲರು.
ವಿಧಾನಪರಿಷತ್ ಸ್ಥಾನಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಶಿಫಾರಸು ಮಾಡಿದ್ದ ಮೂವರ ಹೆಸರು ಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮೋದನೆ ನೀಡಿದ್ದಾರೆ.
ಸೀತಾರಾಂ,ಉಮಾಶ್ರೀ, ಸುಧಾಮ್ ದಾಸ್ ಹೆಸರುಗಳಿಗೆ ರಾಜ್ಯಪಾಲರಿಂದ ಮುದ್ರೆ ಬಿದ್ದಿದೆ.
ಕಲಾವಿದರ ಕೋಟಾದಡಿ ಉಮಾಶ್ರೀ ಅವರಿಗೆ ಸ್ಥಾನ ನೀಡಿದರೆ ಶಿಕ್ಷಣ ಕ್ಷೇತ್ರದ ಕೋಟಾದಡಿ ಎಂ.ಆರ್.ಸೀತಾರಾಮ ಹಾಗೂ ಸಮಾಜಸೇವೆ ಕೋಟಾದಡಿ ನಿವೃತ್ತ ಇ.ಡಿ. ಅಧಿಕಾರಿ ಸುಧಾಮ ದಾಸ್ ಅವರನ್ನು ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಪಕ್ಷ ಹೆಸರನ್ನು ಅಂತಿಮಗೊಳಿಸಿತ್ತು.
ಉಮಾಶ್ರೀ ಹೊರತಾಗಿ ಎಂ.ಆರ್.ಸೀತಾರಾಮ್ ಹಾಗೂ ಸುಧಾಮದಾಸ್ ಅವರ ಆಯ್ಕೆಗೆ ಕಾಂಗ್ರೆಸ್ ನಲ್ಲೇ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರುಗಳೇ ಇವರಿಬ್ಬರ ಆಯ್ಕೆಗೆ ವಿರೋಧ ವ್ಯಕ್ತಪಡಿಸಿ, ಹೈಕಮಾಂಡ್ ಗೆ ಪತ್ರ ಕೂಡಾ ಬರೆದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..