This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಸರ್ಕಾರಿ ನೌಕರರು ದಾಖಲಾತಿ ಯಲ್ಲಿ ಹೆಸರು ಬದಲಾಯಿಸುವುದು ಹೇಗೆ ಗೊತ್ತಾ – ಬದಲಾವಣೆ ಕುರಿತು ಕಂಪ್ಲೀಟ್ ಮಾಹಿತಿ ಸರ್ಕಾರಿ ನೌಕರರಿಗಾಗಿ…..

WhatsApp Group Join Now
Telegram Group Join Now

ಬೆಂಗಳೂರು –

ಸರ್ಕಾರಿ ದಾಖೆಲೆಗಳಲ್ಲಿ ಹೆಸರು ಬದಲಾವಣೆ ಪ್ರಕ್ರಿಯೆ ಹಲವಾರು ಜನರಲ್ಲಿ ಗೊಂದಲ ಉಂಟು ಮಾಡುತ್ತದೆ. ಅದರಲ್ಲೂ ಸರ್ಕಾರಿ ನೌಕರರು ಹೆಸರು ಬದಲಾವಣೆ ಮಾಡುವಾಗ ಈ ಪ್ರಕ್ರಿಯೆ ಹೇಗೆ ಮಾಡಬೇಕು ಎಂಬ ಮಾಹಿತಿ ಹುಡುಕುವುದು ಸಾಮಾನ್ಯವಾಗಿದೆ.ತಂದೆ-ತಾಯಿ ಸಾಂಪ್ರದಾಯಿಕವಾಗಿ ಅಥವ ಗ್ರಾಮಾಂತರ ಹಾಗೂ ಜನಪದ ಶೈಲಿಯಲ್ಲಿ ಮೊದಲು ಹೆಸರು ಇಡಲಾಗಿರುತ್ತದೆ. ಹಂತ ಹಂತವಾಗಿ ಅವರ ಹೆಸರು ಬದಲಾವಣೆ ಮಾಡಬೇ ಕಾದರೆ ಸರ್ಕಾರಿ ದಾಖಲೆಗಳಲ್ಲಿ ಮೂಲ ಹೆಸರು ಉಳಿದು ಬಿಡುತ್ತದೆ.ಸಾರ್ವಜನಿಕ ಉದ್ದಿಮೆಗಳ ಇಲಾಖೆ ರದ್ದುಗೊಳಿ ಸಲು ಆದೇಶ ಅದನ್ನು ಬದಲಾವಣೆ ಮಾಡುವ ಪ್ರಕ್ರಿಯೆ ಹೇಗೆ?…..ಹೇಗೆ ಅರ್ಜಿ ಸಲ್ಲಿಸಬೇಕು?…..ಎಲ್ಲಿಗೆ ಅರ್ಜಿ ಸಲ್ಲಿಸಬೇಕು? ಎಂಬ ಮಾಹಿತಿಗಳನ್ನು ತಿಳಿದಿರುವುದು ಅತ್ಯಗತ್ಯವಾಗಿದೆ.ಇದಕ್ಕಾಗಿ ಕಾನೂನಿನ ನಿಯಮಗಳು ಏನು ಹೇಳುತ್ತವೆ? ಎಂದು ಮೊದಲು ತಿಳಿಯಬೇಕಿದೆ.

ಸರ್ಕಾರಿ ನೌಕರರು ಹೆಸರು ಬದಲಿಸಿಕೊಳ್ಳುವ ಬಗ್ಗೆ 9/12/1960ರ ಅಧಿಕೃತ ಜ್ಞಾಪನ ಜೆಎಡಿ 62 ಪಿಎಲ್‌ಎಕ್ಸ್‌ 60 ರಲ್ಲಿ ಕೆಲವು ಮಾರ್ಗದರ್ಶನಗಳನ್ನು ಸೂಚಿಸಲಾಗಿತ್ತು. ಬಳಿಕ ಕರ್ನಾಟಕ ಸರ್ಕಾರಿ ನೌಕರರ(ಹೆಸರು ಬದಲಾವಣೆ ವಿಧಾನ)ನಿಯಮಗಳು1967ನ್ನು ಸರ್ಕಾರಿ ಆದೇಶ ಸಂಖ್ಯೆ ಜಿಎಡಿ 1 ಡಿಸಿಎನ್ 66 8/3/67ರಲ್ಲಿ ಹೊರಡಿಸಲಾಗಿದೆ.
ನಿವೃತ್ತ ಸರ್ಕಾರಿ ನೌಕರ ಕುಟುಂಬ ಸದಸ್ಯರಿಂದಲೇ ಕೊಲೆ ಯಾದರೆ ಪಿಂಚಣಿ ಯಾರಿಗೆ….ನಿಯಮ ತಿದ್ದುಪಡಿ

1967 ರ ಕರ್ನಾಟಕ ಸರ್ಕಾರಿ ನೌಕರರ (ಹೆಸರು ಬದಲಾ ವಣೆ ವಿಧಾನ) ನಿಯಮಗಳು ಕರ್ನಾಟಕ ರಾಜ್ಯಪತ್ರ ದಿನಾಂಕ 6/4/1967ರಲ್ಲಿ ಪ್ರಕಟಿಸಿದ್ದರೂ ದಿನಾಂಕ 11/4/1967ರಿಂದಲೇ ಜಾರಿಗೆ ಬರುವಂತೆ ಉಪಬಂಧದ ಕಲ್ಪಿಸಲಾಗಿದೆ.ರಾಜ್ಯ ಸರ್ಕಾರಿ ನೌಕರರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವ ಪ್ರಕ್ರಿಯೆ ಅರ್ಜಿ ಸಲ್ಲಿಕೆ ಮಾಡುವ ಮಾಹಿತಿ ಮುಂತಾದವರ ವಿವರಗಳನ್ನು ಇಲ್ಲಿ ನೀಡಲಾಗಿದೆ
ರಾಜ್ಯ ಸರ್ಕಾರಿ ನೌಕರರು ತಮ್ಮ ಹೆಸರನ್ನು ಬದಲಾಯಿಸಿ ಕೊಳ್ಳುವ ಅನುಮತಿಗಾಗಿ ಅರ್ಜಿಯನ್ನು 3 ಪ್ರತಿಯಲ್ಲಿ ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು.ಇಲ್ಲಿ ನೇಮಕಾತಿ ಪ್ರಾಧಿಕಾರ ಎಂದರೆ ಕರ್ನಾಟಕ ಸಿವಿಲ್ ಸೇವಾ (ವರ್ಗೀಕ ರಣ,ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ರೀತ್ಯಾ ಅರ್ಥವನ್ನು ಹೊಂದಿರುತ್ತದೆ.ಸ್ಪಷ್ಟವಾದ ಅಕ್ಷರಗಳಲ್ಲಿ ತಿಳಿಸಬೇಕು

ನೌಕರರು ತಮ್ಮ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸು ವಾಗ ಸ್ಪಷ್ಟವಾದ ಅಕ್ಷರಗಳಲ್ಲಿ ಈಗಿರುವ ಹೆಸರು ಹಾಗೂ ಬದಲಾಯಿಸಿಕೊಳ್ಳುವ ಇಚ್ಚಿಸಿದ ಹೆಸರು ತಿಳಿಸಬೇಕು ಹಾಗೂ ಕೆಲವು ನೌಕರರು ಹುಟ್ಟಿದ ಸ್ಥಳ,ವ್ಯಾಸಂಗ ಮಾಡಿದ ಸ್ಥಳ,ವಾಸವಾಗಿರುವ ಸ್ಥಳ,ಸ್ಥಿರಾಸ್ತಿ ಹೊಂದಿರುವ ವಿಷಯ ವಿವರಗಳನ್ನು ಅರ್ಜಿಯಲ್ಲಿ ತಿಳಿಸಬೇಕು. ಮುದ್ರಣ ಮತ್ತು ಲೇಖನ ಸಾಮಾಗ್ರಿ ಪ್ರಕಟಣೆಗಳ ಇಲಾಖೆ ಹೆಸರು ಬದಲಾವಣೆ ಎಂಬ ಶೀರ್ಷಿಕೆಗೆ 15 ರೂ. ಪಾವತಿಸಿ ಅದರ ಚಲನ್‌ ಅನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಎಲ್ಲ ವಿವಿರ ಪರಿಶೀಲಿಸಿ ಅನುಮತಿ

ನೇಮಕಾತಿ ಪ್ರಾಧಿಕಾರವು ಹೆಸರು ಬದಲಾವಣೆ ಬಯಸಿದ ಸರ್ಕಾರಿ ನೌಕರನ ಎಲ್ಲಾ ವಿವರಗಳನ್ನು ಪರಿಶೀಲಿಸಿ ಅನು ಮತಿ ನೀಡಬಹುದು.ಅನುಮತಿ ನೀಡುವ ಮುನ್ನ ನೇಮ ಕಾತಿ ಪ್ರಾಧಿಕಾರ ಸರ್ಕಾರಿ ನೌಕರನು ದುರುದ್ದೇಶದಿಂದ ಅಥವ ಕಾನೂನು ಉಪಕ್ರಮಗಳನ್ನು ತಪ್ಪಿಸಿಕೊಳ್ಳುವ ದೃಷ್ಟಿಯಿಂದ ಈ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾ ನೆಯೇ? ಎಂಬ ಬಗ್ಗೆ ಪರಿಶೀಲನೆ ನಡೆಸಲಿದೆ.ಸಂಬಂಧಿಸಿದ ಪೊಲೀಸ್ ಅಧೀಕ್ಷಕರು ಅಥವ ಇನ್ಯಾವುದೇ ಪ್ರಾಧಿಕಾರಕ್ಕೆ ಅವಶ್ಯ ಎಂದು ಎನಿಸಿದರೆ ಅಂತವರನ್ನು ಲಿಖಿತವಾಗಿ ಸಂಪರ್ಕಿಸಿ ವಿವರಗಳನ್ನು ಪಡೆಯಬಹುದು.ಹೆಸರು ಬದ ಲಾವಣೆಯ ಮೂಲಕ ಪ್ರತಿಕೂಲ ಪರಿಣಾಮ ಉಂಟಾ ಗುತ್ತದೆ ಎಂಬ ಅಭಿಪ್ರಾಯವನ್ನು ನೇಮಕಾತಿ ಪ್ರಾಧಿಕಾರ ಹೊಂದಿದ್ದಲ್ಲಿ ಸೂಕ್ತ ಕಾರಣಗಳೊಂದಿಗೆ ಅನುಮತಿ ನಿರಾಕ ರಿಸಬಹುದು.ಇಂತಹ ನಿರಾಕರಣೆ ವಿರುದ್ಧ ಮೇಲ್ಮನವಿ ಸಲ್ಲಿಕೆಗೆ ಅವಕಾಶವಿಲ್ಲ.ರಾಜ್ಯಪತ್ರದಲ್ಲಿ ಪ್ರಕಟವಾಗಬೇಕು

ಹೆಸರು ಬದಲಾವಣೆ ಪ್ರಕ್ರಿಯೆಗಾಗಿ ನೇಮಕಾತಿ ಪ್ರಾಧಿಕಾರ ಅನುಮತಿಸಿದ ಅಧಿಸೂಚನೆಯನ್ನು ಕರ್ನಾಟಕ ರಾಜ್ಯಪತ್ರ ದಲ್ಲಿ ಪ್ರಕಟಿಸಲು ನಿರ್ದೇಶಕರು,ಮುದ್ರಣ ಮತ್ತು ಲೇಖನ ಸಾಮಾಗ್ರಿಗಳ ಪ್ರಕಟಣಾ ಇಲಾಖೆಗೆ ನೇಮಕಾತಿ ಪ್ರಾಧಿ ಕಾರ ರವಾನೆ ಮಾಡಬೇಕು.ಅಂತಹ ಪ್ರಕಟಣೆ ಮಾಡಿದ ರಾಜ್ಯ ಪತ್ರದ ಪ್ರತಿಗಳನ್ನು ನೇಮಕಾತಿ ಪ್ರಾಧಿಕಾರಕ್ಕೆ ಕಳು ಹಿಸಬೇಕು.ಸಂಬಂಧಿತ ನೌಕರನಿಗೆ ಸಹ ಈ ಪ್ರತಿಯನ್ನು ನೀಡಲಾಗುತ್ತದೆ.ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು

ಹೆಸರು ಬದಲಾವಣೆ ಮಾಡಿಕೊಂಡ ನೌಕರನು ತಮ್ಮ ಸ್ವಂತ ವೆಚ್ಚದಲ್ಲಿ ಇಂಡಿಯನ್ ರಿಜಿಸ್ಟ್ರೇಷನ್ ಆಕ್ಟ್ ಉಪ ಬಂಧಗಳ ಅಡಿಯಲ್ಲಿ ನೌಕರರು ಪ್ರಮಾಣಿಸಿದ ಪ್ರತಿಯ ನ್ನು ಸಲ್ಲಿಸಬೇಕು.ಪುನಃ ರಾಜ್ಯಪತ್ರದಲ್ಲಿ ಪ್ರಕಟಿಸುವ ಬಗ್ಗೆ ಮುದ್ರಣ ಮತ್ತು ಲೇಖನ ಸಾಮಾಗ್ರಿಗಳ ಪ್ರಕಟಣೆ ಇಲಾ ಖೆಗೆ ಸಲ್ಲಿಸಬೇಕು.ಆಗ ಇಂತಹ ಅಧಿಕೃತ ಹೆಸರು ಬದ ಲಾದ ಬಗ್ಗೆ ರಾಜ್ಯಪತ್ರದಲ್ಲಿ ಪ್ರಕಟಿಸಲಾಗುತ್ತದೆ.ಸರ್ಕಾರಿ ನೌಕರನು ತನ್ನ ಹೆಸರು ಬದಲಾಯಿಸಿದ ಬಗ್ಗೆ ತನ್ನದೇ ವೆಚ್ಚದಲ್ಲಿ ಸಾರ್ವಜನಿಕರ ಪ್ರಕಟಣೆಗಾಗಿ ದಿನಪತ್ರಿಕೆಗಳಲ್ಲಿ ಪ್ರಕಟಿಸಿಕೊಳ್ಳಬಹುದು.


Google News

 

 

WhatsApp Group Join Now
Telegram Group Join Now
Suddi Sante Desk