ಬೆಂಗಳೂರು –
ಮುಂಗಾರು ಮಳೆ ಆರ್ಭಟ ಸದ್ಯಕ್ಕೆ ಸೈಲೆಂಟ್ ಆಗುವ ಯಾವುದೇ ಮುನ್ಸೂಚನೆ ಕಾಣುತ್ತಿಲ್ಲ ಮುಂದಿನ ವಾರ ಕೂಡ ಇದೇ ರೀತಿಯಲ್ಲಿ ಮಳೆ ಅಬ್ಬರ ಗ್ಯಾರಂಟಿ ಆಗಿದೆ. ಹೀಗಿದ್ದಾಗ ಶನಿವಾರ ರಾಜ್ಯದ ಹಲವು ಜಿಲ್ಲೆ ಗಳಲ್ಲಿ ಶಾಲಾ ಕಾಲೇಜು ಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ
ಹೌದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ಹಾಸನ ಜಿಲ್ಲೆಗಳಲ್ಲಿ ಮಳೆ ಅಬ್ಬರ ಇರುವ ಕಾರಣ ಶಾಲಾ ಕಾಲೇಜು ಬಂದ್ ಮಾಡಲು ಆದೇಶ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಬೀಳುತ್ತಿರುವ ಕಾರಣ, ಶಾಲಾ & ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿ ಯಿಂದ ರಜೆ ಘೋಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಇದೇ ರೀತಿ ಮಳೆ ಅಬ್ಬರ ಜೋರಾಗಿದ್ದು, ನಾಳೆ ಜಿಲ್ಲೆಯ ಎಲ್ಲಾ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗೇ ಉಡುಪಿಯಲ್ಲಿ ಕೂಡ ಮಳೆ ಆರ್ಭಟ ಹೆಚ್ಚಾದ ಕಾರಣಕ್ಕೆ ಶಾಲಾ & ಕಾಲೇಜುಗಳಿಗೆ ರಜೆ ನೀಡಲಾಗಿದ್ದರೂ, ಪದವಿ ಕಾಲೇಜು, ಎಂಜಿನಿಯರಿಂಗ್, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿಲ್ಲ
ಹಾಸನ ಜಿಲ್ಲೆಯ 6 ತಾಲೂಕುಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಸಕಲೇಶಪುರ ಸೇರಿ ಆಲೂರು, ಬೇಲೂರು, ಹಾಸನ, ಹೊಳೆನರಸೀ ಪುರ & ಅರಕಲಗೂಡು ತಾಲೂಕು ಪೂರ್ತಿ ಮಳೆ ಅಬ್ಬರಕ್ಕೆ ತತ್ತರಿಸಿದೆ. ಹೀಗಾಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..