This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಅಮರನಾದ ಅಪ್ಪು ಹೃದಯಾಘಾ ತಕ್ಕೊಳಗಾದ ಪುನೀತ್ ರಾಜ್‍ಕುಮಾರ್ ಇನ್ನೂ ನೆನಪು ಮಾತ್ರ…..

WhatsApp Group Join Now
Telegram Group Join Now

ಬೆಂಗಳೂರು –

ಕನ್ನಡ ಚಿತ್ರರಂಗದ ಯುವ ಉತ್ಸಾಹಿ ಖ್ಯಾತ ನಟ ಪುನೀತ್ ರಾಜ್‍ಕುಮಾರ್ ನಿಧನರಾಗಿದ್ದಾರೆ.ಹೌದು ಎಂದಿನಂತೆ ಇಂದು ಜಿಮ್ ಕಸರತ್ತು ಮಾಡುವ ಸಮಯದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿಕಿತ್ಸೆ ಫಲಿಸದೇ ‌ನಿಧನರಾಗಿದ್ದಾರೆ. ಇಂದು ಹೃದಯ ನೋವು ಕಾಣಿಸಿಕೊಂಡ ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು ಆಗಲೇ ಚಿಕಿತ್ಸೆ ಕೊಡಿಸುವ ಮುನ್ನವೇ ನಿಧನರಾಗಿದ್ದರು.ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಇನ್ನೇನು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಚಿಕಿತ್ಸೆ ಫಲಕಾರಿಯಾಗದೇ ನಿಧನ ರಾದರು

ಹೃದಯಾಘಾತಕ್ಕೆ ಒಳಗಾಗಿ ಖಾಸಗಿ ಕ್ಲಿನಿಕ್ ಒಂದರಲ್ಲಿ ಇಸಿಜಿ ಮಾಡಿಸಿಕೊಂಡು ಬಂದು ವಿಕ್ರಂ ಆಸ್ಪತ್ರೆಗೆ ಚಿಕಿತ್ಸೆ ಗಾಗಿ ದಾಖಲಾಗಿದ್ದರು.ಈ ಎಲ್ಲಾ ಬೆಳವಣಿಗೆಯ ನಂತರ ಹೃದಯಾಘಾತಕ್ಕೆ ಒಳಗಾದಂತ ಅವರಿಗೆ ಕಡೆಯ ಕ್ಷಣದ ಎಲ್ಲಾ ರೀತಿಯ ಪ್ರಯತ್ನವನ್ನು ನಡೆಸಿದರೂ ಚಿಕಿತ್ಸೆಗೆ ಪ್ರತಿಸ್ಪಂದಿಸದ ಕಾರಣ ಇಂದು ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾದರು

ಪುನೀತ್ ರಾಜ್‍ಕುಮಾರ್ 17 ಮಾರ್ಚ್ 1975 ರಂದು ಜನಿಸಿ ಬಾಲ್ಯದಲ್ಲೇ ತಂದೆ ಯೊಂದಿಗೆ ನಟನೆ ಮಾಡುತ್ತಾ ಇದರೊಂದಿಗೆ ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕರಾಗಿ ತೊಡಗಿಸಿಕೊಂಡಿದ್ದರು ಬಾಲ್ಯದಿಂದಲೂ ಕನ್ನಡ ಚಿತ್ರರಂಗದಲ್ಲಿ ತಂದೆ ದಿವಂಗತ ಡಾ.ರಾಜ್ ಕುಮಾರ್ ಜೊತೆಗೆ ನಟರಾಗಿ ತೊಡಗಿಸಿಕೊಂಡಿದ್ದ ಅವರು ಕನ್ನಡ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದಾರೆ

ಪುನೀತ್ 26 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ ವಸಂತ ಗೀತ (1980),ಭಾಗ್ಯದಾತ (1981) ಚಲಿಸುವ ಮೋಡಗಳು (1982) ಎರಡು ನಕ್ಷತ್ರಗಳು (1983) ಮತ್ತು ಬೆಟ್ಟದ ಹೂವು (1985) ಅವರು ನಟಿಸಿದ ಚಿತ್ರಗಳ ನಟನೆಗೆ ಮೆಚ್ಚುಗೆ ಪಡೆದರು.

ಅವರ ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟ ನೆಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾದರು ಪುನೀತ್ ಮೊದಲ ಪ್ರಮುಖ ಪಾತ್ರದಲ್ಲಿ 2002 ಅಪ್ಪು ಚಿತ್ರದಲ್ಲಿ ಅಭಿನಯಿಸಿದರು ಅವರ ಅಭಿ (2003) ಆಕಾಶ್ (2005), ಅರಸು (2007) ಮಿಲನ (2007) ಜಾಕೀ (2010), ಹುಡು ಗರು (2011) ಅಣ್ಣಾ ಬಾಂಡ್ (2012) ಮತ್ತು ಪವರ್ (2014) ಸೇರಿದಂತೆ ಇತರ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಅವರು ಪ್ರಸಿದ್ಧ ಟಿವಿ ಪ್ರದರ್ಶನ ಕನ್ನಡದ ಕೋಟ್ಯಧಿಪತಿ,ಹೂ ವಾಂಟ್ಸ್ ಟು ಬಿ ಮಿಲಿಯ ನೇರ್ ಎಂಬ ಕನ್ನಡ ಆವೃತ್ತಿಯ ಟೆಲಿವಿಷನ್ ಶೋ ನಿರೂಪಣೆ ಮಾಡಿದ್ದಾರೆ.

ಪುನೀತ್ ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಮಗನಾಗಿ ರಾಜಕುಮಾರ್ ದಂಪತಿಯ ಕಿರಿಯ ಮಗ.ನಟರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಸಹೋದರರು.ಪುನೀತ್ ಆರು ವರ್ಷದವರಿದ್ದಾಗ ಅವರ ಕುಟುಂಬ ಬೆಂಗಳೂರಿಗೆ ತೆರಳಿತು. ಅವರು ಹತ್ತು ವರ್ಷ ವಯಸ್ಸಿನ ತನಕ ಅವರ ತಂದೆ ಅವರನ್ನು ಮತ್ತು ಅವರ ಸಹೋದರಿ ಪೂರ್ಣಿಮಾ ರನ್ನು ಚಲನಚಿತ್ರದ ಸೆಟ್ ಗೆ ಕರೆದುಕೊಂಡು ಹೋಗುತ್ತಿ ದ್ದರು.ಪುನೀತ್ ಡಿಸೆಂಬರ್ 1,1999 ರಂದು ಅಶ್ವಿನಿ ರೇವಂತ್ ರನ್ನು ವಿವಾಹವಾದರು. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. ದ್ರಿತಿ ಮತ್ತು ವಂದಿತಾ. ಇವರ ಮೊದಲ ಹೆಸರು ಮಾ.ಲೋಹಿತ್ ಆಗಿತ್ತು.

ಅಭಿನಯಿಸಿದ ಚಲನಚಿತ್ರಗಳು

ಬಾಲ ನಟನಾಗಿ ಅಭಿನಯಿಸಿದಂತ ಚಿತ್ರಗಳು

ಪ್ರೇಮದ ಕಾಣಿಕೆ
ಭಾಗ್ಯವಂತ
ಎರಡು ನಕ್ಷತ್ರಗಳು
ಬೆಟ್ಟದ ಹೂವು
ಚಲಿಸುವ ಮೋಡಗಳು
ಶಿವ ಮೆಚ್ಚಿದ ಕಣ್ಣಪ್ಪ
ಪರಶುರಾಮ್
ಯಾರಿವನು
ಭಕ್ತ ಪ್ರಹ್ಲಾದ
ವಸಂತ ಗೀತ
ನಟರಾಗಿ ಅಭಿನಯಿಸಿದಂತ ಚಿತ್ರಗಳು

ಅಪ್ಪು
ಅಭಿ
ವೀರ ಕನ್ನಡಿಗ
ಮೌರ್ಯ
ಆಕಾಶ್
ನಮ್ಮ ಬಸವ
ಅಜಯ್
ಅರಸು
ಮಿಲನ
ಬಿಂದಾಸ್
ವಂಶಿ
ರಾಜ್ ದ ಶೋಮ್ಯಾನ್
ಪೃಥ್ವಿ
ರಾಮ್
ಜಾಕಿ
ಹುಡುಗರು
ಪರಮಾತ್ಮ
ಅಣ್ಣ ಬಾಂಡ್
ಯಾರೇ ಕೂಗಾಡಲಿ
ನಿನ್ನಿಂದಲೇ
ಮೈತ್ರಿ
ಪವರ್ ಸ್ಟಾರ್
ಧೀರ ರಣಧೀರ
ಚಕ್ರವ್ಯೂಹ
ದೊ‍ಡ್ಮನೆ ಹುಡುಗ
ರಾಜಕುಮಾರ
ಅಂಜನಿ ಪುತ್ರ
ನಟಸಾರ್ವಭೌಮ
ಯುವರತ್ನ
ಸೇರಿದಂತೆ ಇನ್ನೂ ಅನೇಕ ಚಿತ್ರಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಹೀಗೆ ಬಹುಮುಖ ಪ್ರತಿಭೆಯ ಮೂಲಕ, ಬಾಲನಟನಾಗಿ, ನಟನಾಗಿ ನಿರ್ಮಾಪಕನಾಗಿ ತೊಡಗಿಸಿಕೊಂಡಿದ್ದಂತ ಕನ್ನಡದ ದೊಡ್ಮನೆಯ ಕೊಂಡಿ ಯೊಂದು ಇಂದು ಇನ್ನಿಲ್ಲವಾಗಿದೆ. ಈ ಮೂಲಕ ನಟ ಪುನೀತ್ ರಾಜ್ ಕುಮಾರ್ ಬಾರದ ಲೋಕಕ್ಕೆ ತೆರಳಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk