ಬೆಂಗಳೂರು –
ಶೈಕ್ಷಣಿಕ ಪ್ರವಾಸದಲ್ಲಿ ಅವಘಡಗಳು ಸಂಭವಿಸಿದ್ರೆ ಶಾಲಾ ಮುಖ್ಯಸ್ಥರೇ ಹೊಣೆ ಗಾರರು – ಇಲಾಖೆಯಿಂದ ಹೊರಬಿತ್ತು ಹೊಸ ಆದೇಶದಲ್ಲಿ ಉಲ್ಲೇಖ ಇಲಾಖೆ ಜವಾಬ್ದಾರವ ಲ್ಲವೆಂದರು ಆಯುಕ್ತರು ಹೌದು ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಕೈಗೊಂಡ ಶೈಕ್ಷಣಿಕ ಪ್ರವಾಸದ ಸಂದರ್ಭದಲ್ಲಿ ಏನಾದರೂ ಅವಘಡಗಳು ಸಂಭವಿಸಿದ್ರೆ ಆ ಒಂದು ಘಟನೆಗಳಿಗೆ ಆ ಶಾಲೆ ಗಳ ಮುಖ್ಯಸ್ಥರೇ ಹೊಣೆಗಾರರು ಎಂದು ಇಲಾಖೆಯ ಆಯುಕ್ತರು ಹೇಳಿದ್ದಾರೆ.
ರಾಜ್ಯದಲ್ಲಿ ಇತ್ತೀಚಿಗೆ ನಡೆದ ಸಂಭವಿಸಿದ ಕೆಲವೊಂದಿಷ್ಟು ಘಟನೆಗಳ ಕುರಿತಂತೆ ಹೊರಡಿಸ ಲಾಗಿರುವ ಆದೇಶದಲ್ಲಿ ಈ ಒಂದು ಕುರಿತಂತೆ ಆಯುಕ್ತರು ಉಲ್ಲೇಖವನ್ನು ಮಾಡಿದ್ದಾರೆ. ಪ್ರವಾ ಸದ ಸಮಯದಲ್ಲಿ ಸಂಭವಿಸುವ ಯಾವುದೇ ಅವಘಡಗಳಿಗೆ ಶಾಲೆಯ ಮುಖ್ಯಸ್ಥರೇ ನೇರ ಹೂಣೆಗಾರರಾಗಿರುತ್ತಾರೆ.ಆ ಘಟನೆಗಳಿಗೆ ಇಲಾಖೆಯು ಯಾವುದೇ ಕಾರಣಕ್ಕೂ ಜವಾಬ್ದಾ ರಿಯಾಗಿರುವುದಿಲ್ಲ ಎಂದಿದ್ದಾರೆ.
ಇದರೊಂದಿಗೆ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳುವ ಹೊರಡುವ ರಾಜ್ಯದ ಎಲ್ಲಾ ಶಾಲೆಗಳಿಗೆ ಇಲಾಖೆಯ ಆಯುಕ್ತರು ಖಡಕ್ ಎಚ್ಚರಿಕೆಯ ಸಂದೇಶದೊಂದಿಗೆ ಜಾಗೃತಿಯಿಂದ ಮಕ್ಕಳನ್ನು ಕರೆದುಕೊಂಡು ಹೋಗಿ ಶೈಕ್ಷಣಿಕ ಪ್ರವಾಸವನ್ನು ಮಾಡುವಂತೆ ಸೂಚನೆಯನ್ನು ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..