ಬೆಂಗಳೂರು –
ಮೇ 29 ರಿಂದ ರಾಜ್ಯದಲ್ಲಿ ಶಾಲೆಗಳು ಆರಂಭ ವಾಗುತ್ತಿವೆ ಹೌದು ಈಗಾಗಲೇ ಇಲಾಖೆ ಎಲ್ಲಾ ಸಿದ್ಧತೆ ಗಳನ್ನು ಮಾಡಲಾಗಿದ್ದು ಇದರ ನಡುವೆ ಮೊದಲ ದಿನ ಸಿಹಿಯೂಟ ನೀಡುವಂತೆ ಸೂಚನೆ ನೀಡಲಾಗಿದೆ ಶಾಲಾ ಮಕ್ಕಳಿಗೆ ಮೊದಲ ದಿನವೇ ಪಠ್ಯಪುಸ್ತಕ, ಎರಡು ಜತೆ ಸಮವಸ್ತ್ರ ವಿತರಿಸಲಾ ಗುತ್ತದೆ.
ಇದೇ ಮೊದಲ ಬಾರಿ ಶಾಲಾ ಆರಂಭಕ್ಕೂ ಮೊದಲೇ ಎಲ್ಲ ವಿಷಯಗಳ ಪಠ್ಯಪುಸ್ತಕಗಳು ಶಾಲೆಗಳನ್ನು ತಲುಪಿವೆ.ಒಂದೇ ಬಾರಿಗೆ ಎರಡೂ ಜತೆ ಸಮವಸ್ತ್ರ ನೀಡಲಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಕೇಸರಿ ಬಾತ್, ಹೆಸರುಬೇಳೆ ಪಾಯಸ ಸೇರಿದಂತೆ ಯಾವುದಾದರೂ ಒಂದು ಸಿಹಿ ತಿನಿಸು ನೀಡಲಾಗುತ್ತಿದೆ ಇದನ್ನು ಇಲಾಖೆ ಯ ಮೇಲಾಧಿಕಾರಿಗಳು ತಿಳಿಸಿದ್ದಾರೆ
ಈಗಾಗಲೇ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಡಲಾಗಿದೆ ಹೀಗಾಗಿ ಶಾಲಾ ಆರಂಭ ದ ಮೊದಲ ದಿನ ಬಿಸಿಯೂಟ ದೊಂದಿಗೆ ವಿಶೇಷ ಸಿಹಿ ಯೂಟ ವನ್ನು ನೀಡಿ ಮಕ್ಕಳಿಗೆ ಸ್ವಾಗತಿಸಲು ಸೂಚನೆ ನೀಡಲಾಗಿದೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..