ಹಾಲಾಡಿ –
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯೊಂದು ಸೌರ ಶಕ್ತಿ ಯಿಂದಾಗಿ ರಾಜ್ಯಕ್ಕೆ ಮಾದರಿಯಾಗಿದೆ ಹೌದು ಉಡುಪಿ ಯ ಬ್ರಹ್ಮಾವರದ ಕಕ್ಕುಂಜೆ ಶಾಲೆಗೆ “ಸೌರಶಕ್ತಿ’ ಬಲ ಹೆಚ್ಚಿಸಿದೆ.ಬ್ರಹ್ಮಾವರ ವಲಯದ ಹಾಲಾಡಿ ಸಮೀಪದ 110 ಮಕ್ಕಳಿರುವ ಕಕ್ಕುಂಜೆ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 5.16 ಲಕ್ಷ ರೂ. ವೆಚ್ಚ ದಲ್ಲಿ ಸೋಲಾರ್ ಶಕ್ತಿಯನ್ನು ಅನುಷ್ಠಾನಗೊಳಿಸ ಲಾಗಿದೆ.200 ಎಎಚ್‌ನ 8 ಬ್ಯಾಟರಿಗಳನ್ನು ಅಳವಡಿ ಸಲಾಗಿದ್ದು, 6 ಕೆ.ವಿ. ಸೌರಶಕ್ತಿ ಸೌಲಭ್ಯ ಸಿಗಲಿದೆ.
ಇದರಿಂದ ಫ್ಯಾನ್, ಬೆಳಕಿನ ವ್ಯವಸ್ಥೆ, ಬಿಸಿಯೂಟ ತಯಾರಿಗೆ ಮಿಕ್ಸಿ ಬಳಕೆ, ಮೋಟಾರು ಪಂಪ್ ಬಳಕೆ, ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಲ್ಯಾಬ್‌ಗಳಿಗೆ ಸೌರಶಕ್ತಿಯೇ ಬಳಕೆಯಾಗಲಿದೆ. ಮಾಸಿಕವಾಗಿ ಬರುತ್ತಿದ್ದ 3 ಸಾವಿರ ರೂ. ವಿದ್ಯುತ್ ಬಿಲ್ ಉಳಿತಾ ಯವಾಗಿದೆ.
ಗ್ರಾಮಾಂತರ ಭಾಗದ ಬಹುತೇಕ ಕಡೆಗಳ ಸರಕಾರಿ ಶಾಲೆಗಳಲ್ಲಿ ಈಗ ವಿಜ್ಞಾನ ಹಾಗೂ ಕಂಪ್ಯೂಟರ್ ಲ್ಯಾಬ್‌ಗಳಿರುತ್ತವೆ. ಬಿಸಿಯೂಟ, ಮೋಟಾರು ಬಳಕೆಗೆ ವಿದ್ಯುತ್ ಆವಶ್ಯಕ. ಆದರೆ ಮಳೆಗಾಲದಲ್ಲಿ ವಿದ್ಯುತ್ ಕೈಕೊಡುವುದೇ ಜಾಸ್ತಿಯಾಗಿದ್ದರಿಂದ ಸಮಸ್ಯೆ ಉದ್ಭವವಾಗುತ್ತಿತ್ತು.
ಅದನ್ನು ಮನಗಂಡು ಸೆಲ್ಕೋ ಸಂಸ್ಥೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಲವು ಶಾಲೆ ಗಳನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ಸೌರ ಶಕ್ತಿ ಅನುಷ್ಠಾನಕ್ಕೆ ಮುಂದಾಗಿದೆ.ಈಗಾಗಲೇ 2 ಶಾಲೆಗ ಳಲ್ಲಿ ಅನುಷ್ಠಾನ ಪೂರ್ಣಗೊಂಡಿದ್ದು,ಈ ತಿಂಗಳೊ ಳಗೆ ಇನ್ನು 2-3 ಶಾಲೆಗಳಲ್ಲಿ ಈ ಪ್ರಕ್ರಿಯೆ ಆರಂಭ ಗೊಳ್ಳಲಿದೆ.
ಈ ಶೈಕ್ಷಣಿಕ ವರ್ಷದೊಳಗೆ ಉಡುಪಿ ಜಿಲ್ಲೆಯ 25 ಶಾಲೆಗಳನ್ನು ಸೋಲಾರ್ ಸ್ವಾವಲಂಬಿಯಾಗಿಸುವ ಗುರಿಯಿದೆ ಎನ್ನುತ್ತಾರೆ ಸೆಲ್ಕೋ ಫೌಂಡೇಶನ್‌ನ ಪ್ರಾದೇಶಿಕ ವ್ಯವಸ್ಥಾಪಕ ಶೇಖರ್ ಶೆಟ್ಟಿ.ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆ ಸಹಿತ ಉಡುಪಿ ಜಿಲ್ಲೆಯಲ್ಲಿ 1,098 ಹಾಗೂ ದ.ಕ. ಜಿಲ್ಲೆಯಲ್ಲಿ 1,782 ಶಾಲೆಗಳಿವೆ.ಉಳಿದ ಶಾಲೆಗಳಿಗೂ ಉತ್ತೇಜನ ನೀಡಲಾಗುತ್ತಿದೆ.
ಸೌರಶಕ್ತಿಯನ್ನು ಸದ್ಬಳಕೆಗೆ ಇದೊಂದು ಉತ್ತಮ ಕಾರ್ಯಕ್ರಮ ವಾಗಿದ್ದು, ಇದರಿಂದ ವಿದ್ಯುತ್ ಉಳಿತಾಯವಾಗಲಿದೆ. ಮುಖ್ಯವಾಗಿ ಗ್ರಾಮೀಣ ಭಾಗದ ಶಾಲೆಗಳಿಗೆ ಇದರಿಂದ ಬಹಳಷ್ಟು ಅನು ಕೂಲವಾಗಲಿದೆ. 2 ಶಾಲೆಗಳಲ್ಲಿ ಅನುಷ್ಠಾನಗೊಳಿ ಸಲಾಗಿದ್ದು, ಜಿಲ್ಲೆಯ ಇನ್ನಷ್ಟು ಶಾಲೆಗಳಲ್ಲಿ ಸೋಲಾರ್ ಅಳವಡಿಕೆಗೆ ಉತ್ತೇಜನ ನೀಡುವ ಯೋಜನೆ ಇದೆ.
ಸುದ್ದಿ ಸಂತೆ ನ್ಯೂಸ್ ಉಡುಪಿ…..