This is the title of the web page
This is the title of the web page

Live Stream

June 2023
T F S S M T W
1234567
891011121314
15161718192021
22232425262728
2930  

| Latest Version 8.0.1 |

State Newsಬೆಳಗಾವಿ

ಬೆಳಗಾವಿಯಲ್ಲಿ ಯಶಸ್ವಿಯಾಗಿ ನಡೆಯಿತು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ದ ಕಾರ್ಯಕ್ರಮ – ಸಾಕ್ಷಿಯಾದರು ಗಣ್ಯರು ಅಧಿಕಾರಿಗಳು ಶಿಕ್ಷಕ ಶಿಕ್ಷಕಿಯರು…..


ಬೆಂಗಳೂರು

ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ-ಧಾರವಾಡ ಜಿಲ್ಲಾ ಘಟಕ -ಬೆಳಗಾವಿ ಹಾಗೂ ಎಲ್ಲ ತಾಲೂಕು ಘಟಕಗಳ ಉದ್ಘಾಟನಾ ಸಮಾರಂಭ ಯಶಸ್ವಿ ರಜೆ ಇದ್ದರು ತಮ್ಮ ಅಮೂಲ್ಯ ಸಮಯ ನೀಡಿ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು

ಬೆಳಗಾವಿ ಜಿಲ್ಲಾ ಉಪ ನಿರ್ದೇಶಕರಾದ ಬಿ.ಎಂ.ನಾಲತವಾಡ ಸರ ಹಾಗೂ ಕ್ಷೇತ್ರ ಶಿಕ್ಷಣಾ ಧಿಕಾರಿಗಳಾದ ರವಿ ಭಜಂತ್ರಿ ಸಮಸ್ತ ಮಹಿಳಾ ಶಿಕ್ಷಕಿಯರ ಪರವಾಗಿ ಧನ್ಯವಾದಗಳನ್ನು ಅರ್ಪಿ ಸಿದ ಡಾ.ಲತಾ.ಎಸ್.ಮುಳ್ಳೂರ ಸಂಸ್ಥಾಪಕ ರಾಜ್ಯಾಧ್ಯಕ್ಷರು

ಬೆಳಗಾವಿ ನೌಕರರ ಭವನದಲ್ಲಿ ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನೆ ಜರುಗಿತು.ಈ ಘನ ಕಾರ್ಯಕ್ರಮವನ್ನು ಬಸವರಾಜ ರಾಯವ್ವಗೊಳ ಜಿಲ್ಲಾ ಅಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ ಬೆಳಗಾವಿ ಇವರು ಉದ್ಘಾಟಿಸಿ ದರು

ರಾಜ್ಯದ ಶಿಕ್ಷಕಿಯರ ದನಿ, ಡಾ. ಲತಾ.ಎಸ್. ಮುಳ್ಳೂರ ಸಂಸ್ಥಾಪಕ ರಾಜ್ಯಾಧ್ಯಕ್ಷರು ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ರವರು ಕಾರ್ಯಕ್ರಮ ದಲ್ಲಿ ಸಂಘದ ಗುರಿ ಉದ್ದೇಶಗಳು ಸಂಘವು ಬೆಳೆದುಬಂದ ಹಾದಿ ಶಿಕ್ಷಕಿಯರ ಬೇಕು ಬೇಡಿಕೆ ಗಳು.ಸಮಸ್ಯೆಗಳು ಸಂಘದ ಮುಂದಿನ ನಡೆಗಳ ಬಗ್ಗೆ ಪ್ರಾಸ್ತಾವಿಕ ನುಡಿಗಳಲ್ಲಿ ಮಾತನಾಡಿದರು

ಬಸವರಾಜ ಎಮ್ ನಾಲತವಾಡ ಉಪನಿರ್ದೇ ಶಕರು ಆಡಳಿತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳಗಾವಿ ಇವರು ಪರೀಕ್ಷಾ ಸಮಯದ ಹಲವು ಒತ್ತಡಗಳಲ್ಲಿಯೂ,ವಾರದ ಒಂದು ರಜೆ ಭಾನುವಾರವೆಂದು ಲೆಕ್ಕಿಸದೇ ಸಮಾರಂಭಕ್ಕೆ ಆಗಮಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಶುಭಕೋರಿ ಇದರಿಂದ ಸಂಘಟನೆಗೆ ಮತ್ತು ಮಹಿಳಾ ಶಿಕ್ಷಕಿಯರಿಗೆ ಆತ್ಮಸ್ಥೈರ್ಯ ಮೂಡಿದೆ. ಅವರಿಗೆ ಸಂಘಟನೆ ಅಬಾರಿಯಾಗಿದೆ ಅಲ್ಲದೇ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಹಾ ನೆರೆವೇರಿಸಿದರು

ಮುಖ್ಯ ಅತಿಥಿಗಳಾಗಿ ರವಿ ಭಜಂತ್ರಿ ಕ್ಷೇತ್ರ ಶಿಕ್ಷಣಾ ಧಿಕಾರಿಗಳು ಬೆಳಗಾವಿ ನಗರ ಇವರು ಸಹ  ಭಾಗವಹಿಸಿ ಶುಭ ಕೋರಿ ಕಾರ್ಯಕ್ರಮ ಉದ್ದೇಶಿಸಿ ನಗುತ್ತಾ ನಗಿಸುತ್ತಾ ಎಲ್ಲರಿಗೂ ನಗುನಗುತ್ತಾ ವೃತ್ತಿ ಗೆ ಮೊದಲು ನಿಷ್ಟೆಯಾಗಿ ನಂತರ ಬಿಡುವಿನ ಸಮಯದಲ್ಲಿ ಶೈಕ್ಷಣಿಕ ಕಾರ್ಯ ಹಾಗೂ ಸಮಾಜಸೇವೆಗೆ ತೊಡಗಿರುವ ಈ ಶಿಕ್ಷಕಿಯರ ಸಂಘಟನೆಯು ತನ್ನದೇ ಆದ ವಿಶೇಷತೆಯನ್ನ ಹೊಂದಿದೆ ಎಂದು ಶ್ಲಾಘಿಸಿದರು

ಸಾಕಷ್ಟು ಕೆಲಸದ ಒತ್ತಡದ ನಡುವೆಯೂ ಮಹಿಳಾ ಶಿಕ್ಷಕಿಯರಿಗೆ ಬಲ ತುಂಬಲು ಆಗಮಿ ಸಿದ ಶ್ರೀಮತಿ ಎ.ರುಕ್ಮಿಣಿ (P S I) ಪಿ. ಎಸ್. ಐ.ಕ್ಯಾಂಪ್ ,ಹಾಗೂ ಡಾ.ಲಕ್ಷ್ಮೀ ಕೆ. ಎಸ್ ಸಹಾಯಕ ಪ್ರಾಧ್ಯಾಪಕರು ಭೀಮ್ಸ  ಇವರು ಆಗಮಿಸಿ ಶುಭ ಕೋರಿದರು.

ಎಸ್. ಡಿ. ಗಂಗಣ್ಣವರ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಂಘ ರಾಜ್ಯ ಘಟಕ ಬೆಂಗಳೂರು ಶಿವಾನಂದ ಕುಡ ಸೋಮಣ್ಣವರ ರಾಜ್ಯ ಸಹ ಕಾರ್ಯದರ್ಶಿ ಅಧ್ಯಕ್ಷರು ಬೈಲಹೊಂಗಲ ಅನ್ವರ ಲಂಗೋಟಿ ಅಧ್ಯಕ್ಷರು ಬೆಳಗಾವಿ ತಾಲೂಕಾ ಪ್ರಾ.ಶಾ.ಶೀ. ಸೊಸೈಟಿ ಬೆಳಗಾವಿ ಗ್ರಾಮೀಣ  ಆಸಿಫ್ ಆತ್ತಾರ ಜಂಟಿ ಕಾರ್ಯದರ್ಶಿಗಳು ಕ. ರಾ.ಸ.ನೌ.ಸಂಘ ಬೆಳಗಾವಿ  ಸುರೇಶ. ಸಕ್ರೆನ್ನವರ ಅಧ್ಯಕ್ಷರು ಕ.ರಾ. ಸ.ನೌ. ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕ ಬೆಳಗಾವಿ ಬಸವರಾಜ ಸುಣಗಾರ ಬೆಳಗಾವಿ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭಕೋರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ಶ್ರೀಮತಿ ನಸ್ರೀನ ಬಾನು ಕಾಶೀಮನವರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ಜಿಲ್ಲಾಧ್ಯಕ್ಷರಾದ ಶ್ರೀಮತಿ ನಸ್ರೀನ್ ಬಾನು ಅವರ ನೇತೃತ್ವದಲ್ಲಿ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳು ಪದಗ್ರಹಣ ಮಾಡಿದರು

ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು , ಕೋಶಾ ಧ್ಯಕ್ಷರರು ಹಾಗೂ ಸರ್ವ ಉಪಾಧ್ಯಕ್ಷರು, ಸರ್ವ ಸಹಕಾರ್ಯದರ್ಶಿಗಳು ಸಂಘಟನಾ ಕಾರ್ಯದ ರ್ಶಿಗಳು,ಕಾರ್ಯಕಾರಿ ಸಮಿತಿ ಸದಸ್ಯರುಗಳು ಸಹಾ ಪದಗ್ರಹಣ ಮಾಡಿದರು

ಡಾ.ಲತಾ.ಎಸ್. ಮುಳ್ಳೂರ ಸಂಸ್ಥಾಪಕ ರಾಜ್ಯಾ ಧ್ಯಕ್ಷರು ಜಿಲ್ಲಾ ಹಾಗೂ ಎಲ್ಲಾ ತಾಲೂಕಿನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು
ಕಾರ್ಯಕ್ರಮದ ಜೊತೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಬಂಧವಾಗಿ ಜಿಲ್ಲೆ ಯಲ್ಲಿ ಉತ್ತಮ ಸಾಧನೆ ಮಾಡಿರುವ ಶಿಕ್ಷಕಿಯ ರಿಗೆ ಮಾತೇ ಸಾವಿತ್ರಿಬಾಯಿ ಫುಲೆ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿಗಳನ್ನು ಸಹ ಇದೇ ಸಂದರ್ಭದಲ್ಲಿ ನೀಡಲಾಗಿದೆ.

ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಮತಿ ನಸರೀನಬಾನು ಕಾಶೀ ಮನವರು ಮಾತನಾಡಿ ಡಾ.ಲತಾ.ಎಸ್. ಮುಳ್ಳೂರ ಸಂಸ್ಥಾಪಕ ರಾಜ್ಯಾಧ್ಯಕ್ಷರು ಮಹಿಳಾ ಸಮಾನತೆಗಾಗಿ ಮಹಿಳೆಯರ ಹಕ್ಕು ಬೇಡಿಕೆಗ ಳಿಗಾಗಿ ಮಹಿಳೆಯರ ಒಗ್ಗಟ್ಟಿಗಾಗಿ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಶಿಕ್ಷಕಿಯ ರಿಗಾಗಿ ಅವರ ವೈಯಕ್ತಿಕ ಸಮಸ್ಯೆಗಳಿಗಾಗಿ ಅಲ್ಲದೇ ಶೈಕ್ಷಣಿಕ ಸಾಮಾಜಿಕ ಸೇವೆಗಾಗಿ ಈ ಅತ್ಯುತ್ತಮ ವೇದಿಕೆಯನ್ನು ನಮಗೆಲ್ಲರಿಗೂ ದೊರಕಿಸಿಕೊಟ್ಟಂತ ರಾಜ್ಯಘಟಕದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ ಎಸ್ ಮುಳ್ಳೂರರ ವರಿಗೆ ನಾವು ಯಾವತ್ತೂ ಅಬಾರಿಯಾಗಿದ್ದೇವೆ ಎಂದರು.

ಕಾರ್ಯಕ್ರಮದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ವನ್ನ ಶ್ರೀಮತಿ ವನಿತಾ ಹಾಲಪ್ಪನವರ ಅವರು ನಿರೂಪಿಸಿದರು ನಿರೂಪಣೆಯನ್ನು ಶ್ರೀಮತಿ ಮೀನಾಕ್ಷಿ ಸುತಗಟ್ಟಿ ನೆರವೇರಿಸಿದರು

ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದ ಇಲಾಖೆಯ ಅಧಿಕಾರಿಗಳಿಗೂ  ಹಾಗೂ ಪ್ರೋತ್ಸಾ ಹಿಸಿದ ಎಲ್ಲ ಸಂಘಟನೆಯ ಪದಾಧಿಕಾರಿಗಳಿಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಿಗೂ, ಗಣ್ಯ ಮಾನ್ಯರಿಗೂ,ಸರ್ವ ಶಿಕ್ಷಕ ಬಳಗಕ್ಕೂ ಎಲ್ಲಾ ಪದಾಧಿಕಾರಿಗಳಿಗೂ ಬೆಳಗಾವಿ ಜಿಲ್ಲಾ ಹಾಗೂ ತಾಲೂಕು ಘಟಕಗಳ ಸಂಘಟನೆ ಪರವಾಗಿ ಹೃದಯ ಪೂರ್ವಕ ಧನ್ಯವಾದಗಳು.

 

ಸುದ್ದಿ ಸಂತೆ ನ್ಯೂಸ್ ಬೆಳಗಾವಿ…..


Google News Join The Telegram Join The WhatsApp

 

 

Suddi Sante Desk

Leave a Reply