ಧಾರವಾಡ –
ಶಿಕ್ಷಣ ಇಲಾಖೆಯ ಜಿಲ್ಲಾ ಕಾರ್ಯಕ್ರಮ ಸಹಾಯಕರಾಗಿ ಅಧಿಕಾರ ವಹಿಸಿಕೊಂಡ ಕೆ ಬಿ ಕುರಹಟ್ಟಿ – ಶಿಕ್ಷಕ ನೇತಾರ ಗುರು ತಿಗಡಿ,ಎಲ್ ಐ ಲಕ್ಕಮ್ಮನವರ,ಪಿ ಎಸ್ ಅಂಕಲಿ, ರಾಚಣ್ಣನವರ, ಹುರಕಡ್ಲಿ,ಹಳೆಮನಿ ಹಲವರು ಉಪಸ್ಥಿತಿ ಶುಭಹಾರೈಕೆ…..
ಧಾರವಾಡ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಜಿಲ್ಲಾ ಕಾರ್ಯಕ್ರಮ ಸಹಾಯಕರಾಗಿ ಕೆ ಬಿ ಕುರಹಟ್ಟಿ ಯವರು ಅಧಿಕಾರವನ್ನು ವಹಿಸಿಕೊಂ ಡಿದ್ದಾರೆ.ಹೌದು ರಾಜ್ಯಪಾಲರ ಆದೇಶಾನುಸಾರ ಹಾಗೂ ಶಿಕ್ಷಣ ಸಚಿವರ ಅನುಮೋದನೆಯ ಮೇರೆಗೆ ವರ್ಗಾವಣೆಗೊಂಡಿರುವ ಇವರು ಧಾರವಾಡ ಜಿಲ್ಲೆಯ ವಯಸ್ಕರ ಶಿಕ್ಷಣ ಇಲಾಖೆಯ ಜಿಲ್ಲಾ ಕಾರ್ಯಕ್ರಮ ಸಹಾಯ ಕರಾಗಿ ಅಧಿಕಾರವನ್ನು ವಹಿಸಿಕೊಂಡರು.
ಧಾರವಾಡದಲ್ಲಿ ಕಚೇರಿಯಲ್ಲಿ ಸರಳವಾಗಿ ಅಧಿಕಾರವನ್ನು ವಹಿಸಿಕೊಂಡರು.ಈ ಒಂದು ಸಂದರ್ಭದಲ್ಲಿ ಧಾರವಾಡದ ಶಿಕ್ಷಕರ ನೇತಾರ ರಾದ ಗುರು ತಿಗಡಿ,ಶಿಕ್ಷಕರಾದ ಎಲ್ ಆಯ್ ಲಕ್ಕಮ್ಮನವರ ,ಪಿ ಎಸ್ ಅಂಕಲಿ ,ಎಸ್ ಆರ್ ರಾಚಣ್ಣವರ, ಆಯ್ ಎಮ್ ಹುರಕಡ್ಲಿ ಹಾಗೂ ಹಳೆಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದು ಶುಭವನ್ನು ಹಾರೈಸಿದರು.
ಧಾರವಾಡ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶ್ರೀಮತಿ ಜಯಶ್ರೀ ವರೂರ ಅವರು ಹಾಜರಪ ಡಿಸಿಕೊಂಡು ಶುಭವನ್ನು ಕೋರಿದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..