ಬೆಂಗಳೂರು –
ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ನೆರವಾದ ಶಾಸಕಕರಿಗೆ KSPSTA ನಿಂದ ಸನ್ಮಾನ ಗೌರವ – ಸರ್ಕಾರಿ ಶಾಲೆಗಳ ಅಭಿವೃದ್ದಿಗೆ 8 ಕೋಟಿ ನೆರವು ನೀಡಿದ ರಘುಮೂರ್ತಿಯವರಿಗೆ ಸಮಸ್ತ ರಾಜ್ಯದ ಶಿಕ್ಷಕರ ಪರವಾಗಿ ಸನ್ಮಾನ
ಹೌದು ಕ್ಷೇತ್ರದಲ್ಲಿನ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ 8 ಕೋಟಿ ರೂಪಾಯಿಗಳನ್ನು ನೀಡಿ ಮಾದರಿಯಾಗಿದ್ದಾರೆ ಶಾಸಕ ರಘುಮೂರ್ತಿಯ ವರು.ಹೌದು ಚಳ್ಳಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ರಘುಮೂರ್ತಿಯವರು ತಮ್ಮ ಕ್ಷೇತ್ರದ ಲ್ಲಿನ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ 8 ಕೋಟಿ ರೂಪಾಯಿಗಳನ್ನು ನೀಡಿ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಹೊಸದೊಂದು ಇತಿಹಾಸವನ್ನು ಬರೆದಿದ್ದಾರೆ.
ಇದರೊಂದಿಗೆ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ನೆರವಾದ ಶಾಸಕರನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.ಹೌದು ಇತ್ತೀಚಿ ಗಷ್ಟೇ ಇವರನ್ನು ಸಣ್ಣ ಕೈಗಾರಿಕ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾ ಗಿದ್ದು ಎರಡು ಕಾರಣಗಳಿಂದಾಗಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬೆಂಗಳೂರಿನಲ್ಲಿ ಇವರನ್ನು ಭೇಟಿಯಾದ ಸಂಘಟನೆಯ ರಾಜ್ಯಾಧ್ಯಕ್ಷ ನಾಗೇಶ್ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಯವರು ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..