ಬೆಂಗಳೂರು –
OPS ವಿಚಾರದಲ್ಲಿ ಆರ್ಥಿಕ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾದ KSPSTA ಟೀಮ್ – OPS ಕಡತದೊಂದಿಗೆ ಶೀಘ್ರದಲ್ಲೇ CM ಭೇಟಿಯಾಗಲಿದೆ KSPSTA ನಿಯೋಗ
ರಾಜ್ಯ ಸರ್ಕಾರಿ ನೌಕರರಿಗೆ OPS ಜಾರಿಗೆ ಮಾಡುವ ವಿಚಾರ ಕುರಿತಂತೆ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಾರ್ಯಪ್ರವೃ ತ್ತರಾಗಿದೆ.ಹೌದು 2005 ಅಧಿಸೂಚನೆಗಿಂತ ಮೊದಲು ನೇಮಕವಾದ ನೌಕರರಿಗೆ ಎನ್‌ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೊಳಿಸುವ ಕುರಿತು ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಸಭೆಯನ್ನು ಮಾಡಲಾಯಿತು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ 2005 ಅಧಿಸೂಚನೆಗಿಂತ ಮೊದಲು ನೇಮಕವಾದ ರಾಜ್ಯದ ಸರಿ ಸುಮಾರು 11 ಸಾವಿರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ಎನ್‌ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೊಳಿಸುವ ಕುರಿತು ಆರ್ಥಿಕ ಇಲಾಖೆಯ ಅಧಿಕಾರಿಗಳಾದ ಡಾ.ಪಿ.ಸಿ.ಜಾಫರ್ ಡಾ.ಎಮ್. ಟಿ.ರೇಜು ಅವರ ನೇತೃತ್ವದಲ್ಲಿ ಸಭೆಯನ್ನು ಜರುಗಿಸಲಾಯಿತು.
ಈ ಒಂದು ಸಂಬಂಧಿಸಿದ ಕಡತವನ್ನು ಮುಖ್ಯ ಮಂತ್ರಿಗಳಿಗೆ ಸಲ್ಲಿಸಿ ಓಪಿಎಸ್ ಜಾರಿಗೊಳಿಸಲು ಚರ್ಚಿಸಲಾಯಿತು.ಈ ಒಂದು ಸಂಘಟನೆಯ ನಿಯೋಗಕ್ಕೆ ಇಲಾಖೆಯ ಅಧಿಕಾರಿಗಳು ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಶೀಘ್ರದಲ್ಲೇ ಕಡತ ವನ್ನು ಮುಖ್ಯಮಂತ್ರಿಯವರ ಬಳಿ ತಗೆದುಕೊಂ ಡು ಹೋಗಿ ಅಂತಿಮಗೊಳಿಸೊದಾಗಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಯೋಗವು ತೀರ್ಮಾನವನ್ನು ಕೈಗೊಂಡಿದ್ದು ಏನೇನಾಗಲಿದೆ ಎಂಬೊದನ್ನು ಕಾದು ನೋಡಬೇಕಿದೆ.
ಈ ಒಂದು ಸಭೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಕೆ ನಾಗೇಶ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಸೇರಿದಂತೆ ಹಲವು ಮುಖಂಡರು ನಾಯಕರು ಸದಸ್ಯರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..