This is the title of the web page
This is the title of the web page

Live Stream

September 2023
T F S S M T W
 123456
78910111213
14151617181920
21222324252627
282930  

| Latest Version 8.0.1 |

State Newsಧಾರವಾಡ

ನಮ್ಮ ನಿಮ್ಮ ಮನೆಯಲ್ಲಿ ಬರಲಿ ನೈಸರ್ಗಿಕ ಮಣ್ಣಿನ ಗಣೇಶ ಸಾಮಾಜಿಕ ಕಾರ್ಯಕರ್ತ ರಜತ್ ಉಳ್ಳಾಗಡ್ಡಿಮಠ ಕರೆ – POP ಬಣ್ಣದ ಗಣೇಶ ಬೇಡ ಪರಿಸರ ಸ್ನೇಹಿ ಗಣಪತಿ ಮೂರ್ತಿ ಪೂಜಿಸಲು ರಜತ್ ಕರೆ…..


ಹುಬ್ಬಳ್ಳಿ

ನಮ್ಮ ನಿಮ್ಮ ಮನೆಯಲ್ಲಿ ಬರಲಿ ನೈಸರ್ಗಿಕ ಮಣ್ಣಿನ ಗಣೇಶ ಸಾಮಾಜಿಕ ಕಾರ್ಯಕರ್ತ ರಜತ್ ಉಳ್ಳಾಗಡ್ಡಿಮಠ ಕರೆ – POP ಬಣ್ಣದ ಗಣೇಶ ಬೇಡ ಪರಿಸರ ಸ್ನೇಹಿ ಗಣಪತಿ ಮೂರ್ತಿ ಪೂಜಿಸಲು ರಜತ್ ಕರೆ

ಹೌದು ಈ ಬಾರಿ ಸೆಪ್ಟೆಂಬರ್ 18ರಂದು ಸಂಭ್ರಮ ಸಡಗರದಿಂದ ಗಣೇಶ ಚತುರ್ಥಿ ಆಚರಿಸಲಾಗು  ತ್ತದೆ ನಮ್ಮ ಭಕ್ತಿ, ಭಾವ, ಸಂಪ್ರದಾಯಕ್ಕೆ ಚ್ಯುತಿ ಆಗದಂತೆ ಪರಿಸರ ಸ್ನೇಹಿ ಮಣ್ಣಿನ ಗೌರಿ, ಗಣಪತಿ ತಂದು ಪೂಜಿಸಿ ಹಬ್ಬ ಆಚರಿಸೋಣ.ಆದರೆ, ನಮ್ಮ ಆಚರಣೆಯಿಂದ ಜಲ, ನೆಲ, ಗಾಳಿ ಮತ್ತು ಪರಿಸರಕ್ಕೆ ಹಾನಿ ಆಗದಂತೆ ಎಚ್ಚರಿಕೆ ವಹಿಸೋಣ ಎಂದು ಸಾಮಾಜಿಕ ಕಾರ್ಯಕರ್ತ ರಜತ್ ಉಳ್ಳಾಗಡ್ಡಿಮಠ ಧಾರವಾಡ ಜಿಲ್ಲೆಯ ಜನತೆ ಯಲ್ಲಿ ಒಂದು ತಿಂಗಳು ಮುಂಚಿತವಾಗಿಯೇ ಮನವಿ ಮಾಡಿದ್ದಾರೆ.

ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಗಣೇಶ ವಿಗ್ರಹಗಳನ್ನ ನಾವು ನೀವೆಲ್ಲರೂ ಸ್ವಯಂ ಪ್ರೇರಿತರಾಗಿ ತಿರಸ್ಕರಿಸಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಯನ್ನು ಕಡ್ಡಾಯವಾಗಿ ಬಳಸ ಬೇಕು ಏಕೆಂದರೆ ಪಿಒಪಿ ಗಣೇಶ ಮೂರ್ತಿ ವಿಸರ್ಜನೆ ಮಾಡುವುದರಿಂದ ಕೆರೆಗಳು, ನದಿಗಳು ಮತ್ತು ಸಮುದ್ರದ ನೀರು ವಿಷಪೂರಿತವಾಗಿ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ.

ಈ ವರ್ಷ ಮರುಬಳಕೆಯ ಕಾಗದ, ನೈಸರ್ಗಿಕ ಜೇಡಿಮಣ್ಣಿನಿಂದ ತಯಾರಿಸಿದ ಗಣೇಶನನ್ನು ಮನೆಗೆ ತನ್ನಿ ಇತರ ನೈಸರ್ಗಿಕವಾಗಿ ಹಬ್ಬ ಆಚರಿಸಿ ಈ ವರ್ಷ ಒಂದು ಬದಲಾವಣೆ ಆಗಲಿ ಎಂದು ರಜತ್ ಉಳ್ಳಾಗಡ್ಡಿಮಠ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಕೆರೆ ಬಾವಿಯಲ್ಲಿ ಕರಗದ ಗಣಪ ನಾವು ಭಕ್ತಿ ಯಿಂದ ಪೂಜಿಸುವ ಗೌರಿ, ಗಣಪತಿಯ ಪಿಒಪಿ ವಿಗ್ರಹಗಳು ನೀರಲ್ಲಿ ಹತ್ತಾರು ದಿನ ಕಳೆದರೂ ಕರಗುವುದಿಲ್ಲ. ಅವುಗಳು ಕೆರೆ, ಕಟ್ಟೆಗಳ ಬಳಿ ಅರ್ಧ ಕರಗಿ, ಮುರಿದು ಬಿದ್ದಿರುವ ಸ್ಥಿತಿ ನೋಡಿ ದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ,ಕಳೆದ ವರ್ಷ ನಾವು ನಮ್ಮ ರಜತ್ ಉಳ್ಳಾಗಡ್ಡಿಮಠ ಪೌಂಡೇಶನ್ ವತಿಯಿಂದ ಹುಬ್ಬಳ್ಳಿಯ ಹಲವು ಬಾವಿಗಳಿಗೆ ಭೇಟ ನೀಡಿ ಇಲ್ಲಿ ಸಾಧ್ಯವಾದಷ್ಟು ಸಮಸ್ಯೆ ಬಗೆಹರಿಸಿದೇವು ವಿಸರ್ಜನೆಯಾದ ಪಿಒಪಿ ಗಣಪತಿ ನೋಡಿ ಮರಗುವ ಬದಲು ಮುಂಚಿತವಾಗಿ ನಮ್ಮ ನಿರ್ಧಾರ ಬದಲಿಸಿದರೆ ದೈವದ ಜೊತೆ ಪರಿಸರದ ಆರಾಧನೆ ಕೂಡ ನಡೆಯಲಿದೆ.

ಗಣೇಶ ಹಬ್ಬ ಆಚರಣೆ ಹೀಗೆ ಮಾಡಬಹುದು

ಗೌರಿ ಮತ್ತು ಗಣೇಶನ ಹಬ್ಬದ ವೇಳೆ ಮಾವಿನ ತೋರಣ ಕಟ್ಟಿ, ತೆಂಗಿನ ಗರಿಯಿಂದ ಮಂಟಪ ಮಾಡಿ, ಬಾಳೆ ಕಂದು ಕಟ್ಟಿ ಮಣ್ಣಿನ ಗೌರಿ, ಗಣಪತಿ ಮೂರ್ತಿಗಳನ್ನು ತಂದು, ಹೂ, ಪತ್ರೆ ಗಳಿಂದ ಪೂಜಿಸಿ, ನೀರಿನಲ್ಲಿ ವಿಸರ್ಜಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ, ಇದನ್ನ ನಾವು ಮತ್ತೆ ಮುನ್ನಲೆಗೆ ತಂದರೆ ಒಳಿತಲ್ಲವೇ

ನಮ್ಮ ಪೂರ್ವಿಕರು ಕೆರೆಯಲ್ಲೇ ಸಿಗುವ ಜೇಡಿ ಮಣ್ಣಿನಲ್ಲಿ ಗೌರಿ, ಗಣಪತಿ ವಿಗ್ರಹ ಮಾಡಿ ಅದಕ್ಕೆ ನೈಸರ್ಗಿಕ ಬಣ್ಣ ಲೇಪಿಸಿ, ಪೂಜಿಸಿ, ನೀರಲ್ಲಿ ವಿಸ ರ್ಜಿಸುತ್ತಿದ್ದರು.ಆ ವಿಗ್ರಹಗಳು 2-3 ದಿನದಲ್ಲಿ ಕರಗುತ್ತಿದ್ದವು. ಆದರೆ ಕಳೆದ ಕೆಲವು ದಶಕದಿಂದ ಪಿಒಪಿ ಗಣಪತಿ ವಿಗ್ರಹ ಮಾಡುತ್ತಿದ್ದು ಇದಕ್ಕೆ ರಾಸಾಯನಿಕ ಬಣ್ಣ ಲೇಪಿಸುತ್ತಾರೆ. ಈ ಬಣ್ಣ ಗಳಿಂದಾಗಿ ಜಲಚರಗಳು ಸಾವಿಗೀಡಾಗುತ್ತಿದ್ದು, ಈ ವಿಗ್ರಹಗಳು ನೀರಲ್ಲಿ ಕರಗುವುದೂ ಇಲ್ಲ. ಜಲ ಮೂಲಗಳನ್ನು ಕಲುಷಿತಗೊಳಿಸುತ್ತಿದೆ ಎಂದು ತಿಳಿಸಿದ್ದಾರೆ.

ಗಣಪತಿಯ ಮಂಟಪದ ಅಲಂಕಾರಕ್ಕೆ ಪ್ಲಾಸ್ಟಿಕ್ ತೋರಣ,ಪ್ಲಾಸ್ಟಿಕ್ ಅಲಂಕಾರಿಕ ವಸ್ತು ಬಳಸದೆ ಹತ್ತಿಯಿಂದ ಮಾಡಿದ ಸಾಂಪ್ರದಾಯಿಕ ಗೆಜ್ಜೆ, ವಸ್ತ್ರ ಬಳಸುವಂತೆ ಮತ್ತು ಪರಿಸರ ಉಳಿಸವಂತೆ ಅವರು ಮನವಿ ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News Join The Telegram Join The WhatsApp

 

 

Suddi Sante Desk

Leave a Reply