This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಸರ್ಕಾರಿ ಶಾಲೆಯಲ್ಲಿ ಹೊಸ ವರ್ಷದ ಎಣ್ಣೆ ಪಾರ್ಟಿ – ಕುಡಿದ ಅಮಲಿನಲ್ಲಿ ಮಾಡಿದ ಕೆಲಸ ನೋಡಿ…..

Join The Telegram Join The WhatsApp

 


ರಾಯಚೂರು –

ಸರ್ಕಾರಿ ಶಾಲೆಯಲ್ಲಿ ಹೊಸ ವರ್ಷದ ಎಣ್ಣೆ ಪಾರ್ಟಿಯನ್ನು ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ.ಹೌದು ಜಿಲ್ಲೆಯ ಮಾನ್ವಿ ತಾಲೂಕಿನ ರಬ್ಬಣಕಲ್ ಕ್ಯಾಂಪ್ ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದೆ.

ಶಾಲೆಯ ಬೇಗ ಮುರಿದು ಪಾರ್ಟಿ ಮಾಡಿ ನಂತರ ಎಲ್ಲಾ ದಾಖಲಾತಿಗಳನ್ನು ಚಲ್ಲಾಪಿಲ್ಲಿ ಮಾಡಿರುವ ದುಷ್ಕರ್ಮಿ ಗಳು.ಅಡುಗೆ ಕೋಣೆಯಲ್ಲಿ ಮೊಟ್ಟೆ,ಹಾಲಿನಪುಡಿ,ಅಕ್ಕಿ, ಸಕ್ಕರೆ ಅಡುಗೆ ಬಳಸುವ ಎಣ್ಣೆ ಇನ್ನಿತರ ಎಲ್ಲಾ ವಸ್ತುಗಳೂ ಕಳ್ಳತನ ಮಾಡಿದ್ದಾರೆ.

ಮಕ್ಕಳಿಗಾಗಿ ನೀಡಲಾಗುತ್ತಿದ್ದ ಆಹಾರ ಪರಿಕರಗಳನ್ನೂ‌ ಕದ್ದೊಯ್ದಿದ್ದಾರೆ ಖದೀಮರು. ಶಾಲಾ ದಾಖಲಾತಿಗಳ ಮೇಲೆ ಮದ್ಯದ ಪೌಚ್ ಇಟ್ಟು ವಿಕೃತಿಯನ್ನು ಮೆರೆದಿದ್ದಾರೆ ಪುಂಡರು. ಶಾಲೆಯ ಆವರಣದಲ್ಲಿ ಮದ್ಯದ ಬಾಟಲ್ ಗಳು, ಮಾಂಸದ ತುಂಡುಗಳನ್ನು ಬೇಕಾ ಬಿಟ್ಟಿಯಾಗಿ ಹಾಕಿ ಎಸೆದು ಹೋಗಿದ್ದಾರೆ.

ಎಂದಿನಂತೆ ಇಂದು ಬೆಳಿಗ್ಗೆ ಶಾಲೆಗೆ ಬಂದ ನಂತರ ಇವುಗ ಳನ್ನು ನೋಡಿದ ಶಾಲೆಯ ಮಕ್ಕಳು ಶಿಕ್ಷಕರು ಚಿತ್ರಣವನ್ನು ಕಂಡು ಶಾಕ್ ಆಗಿದ್ದಾರೆ ಅಲ್ಲದೇ ಬೆಚ್ಚಿ ಬಿದ್ದಿದ್ದು ಇನ್ನೂ ಸುದ್ದಿ ತಿಳಿದ ಶಾಲೆಯ ಮುಖ್ಯಗುರುಗಳು ಮಾನ್ವಿ ಪೊಲೀ ಸರಿಗೆ ಮಾಹಿತಿಯನ್ನು ನೀಡಿದ್ದಾರೆ.ಇನ್ನೂ ಇತ್ತ ಜ್ಞಾನ ದೇಗುಲದಲ್ಲಿ ಹೀಗೆ ಮಾಡಿದವರನ್ನು ಕೂಡಲೇ ಬಂಧನ ಮಾಡುವಂತೆ ಒತ್ತಾಯವನ್ನು ಮಾಡಿದ್ದಾರೆ.


Suddi Sante Desk

Leave a Reply