ರಾಯಚೂರು –
Low BP ಕುಸಿದು ಬಿದ್ದು 5ನೇ ತರಗತಿ ವಿದ್ಯಾರ್ಥಿ ಸಾವು – ಏಕಾಏಕಿಯಾಗಿ ಕುಸಿದು ಬಿದ್ದ ಶಿವಪ್ರಸಾದ್ ಚಿಕಿತ್ಸೆ ಫಲಿಸದೇ ಸಾವು
ರಕ್ತದ ಒತ್ತಡ ಕಡಿಮೆಯಾಗಿ ಕುಸಿದು ಬಿದ್ದು 5 ನೇ ತರಗತಿ ವಿದ್ಯಾರ್ಥಿಯೊರ್ವ ಸಾವಿಗೀಡಾದ ಘಟನೆ ರಾಯಚೂರಿನಲ್ಲಿ ನಡೆದಿದೆ.ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರ್ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.5 ನೇ ತರಗತಿ ವಿದ್ಯಾರ್ಥಿ ಶಿವಪ್ರಸಾದ್ ಲೋ ಬಿಪಿಯಿಂದ ಮೃತಪಟ್ಟವನಾದವನಾಗಿದ್ದಾನೆ.
ಗಬ್ಬೂರ್ ನಲ್ಲಿ ಕೋಚಿಂಗ್ ಸೆಂಟರ್ ಗೆ ಹೋಗಿದ್ದ ಶಿವಪ್ರಸಾದ್ ಏಕಾಏಕಿ ಕುಸಿದು ಬಿದ್ದಿದ್ದಾನೆ.ಶಿವಪ್ರಸಾದ್ ನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಕೂಡ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.ಇನ್ನೂ ಈ ಒಂದು ಘಟನೆಯಿಂದಾಗಿ ಶಿಕ್ಷಕರು ವಿದ್ಯಾರ್ಥಿ ಗಳಲ್ಲಿ ಆತಂಕವನ್ನು ತಂದಿಟ್ಟಿದ್ದು ಭಯಗೊಂಡಿ ದ್ದಾರೆ.
ಆರೋಗ್ಯದ ಬಗ್ಗೆ ಕಾಳಜಿ ಇರಲಿ ಫಾಸ್ಟ್ ಫುಡ್ ನಿಂದ ಸ್ವಲ್ಪು ದೂರ ಇರಿ ಎಂಬ ಸಲಹೆ ಸೂಚನೆ ಗಳನ್ನು ವೈಧ್ಯರು ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ರಾಯಚೂರು…..