ಬೆಂಗಳೂರು –
ಶಿಕ್ಷಕರ ವರ್ಗಾವಣೆಯನ್ನು ಆರಂಭ ಮಾಡಿ ಮನವಿ ಸಲ್ಲಿಸಿದ ಶಿಕ್ಷಕರ ನಿಯೋಗ – ಹಿಂದಿನ ವರ್ಗಾವಣೆಯಂತೆ ಮತ್ತೆ ಐತಿಹಾಸಿಕ ವರ್ಗಾ ವಣೆ ಮಾಡಿ ಮಹೇಶ್ ಮಡ್ಡಿ ನೇತ್ರತ್ವದಲ್ಲಿನ ಶಿಕ್ಷಕರ ಟೀಮ್ ಒತ್ತಾಯ ಹೌದು ಶಿಕ್ಷಕರ ವರ್ಗಾವಣೆಯನ್ನು ಮತ್ತೆ ಆರಂಭ ಮಾಡುವಂತೆ ಒತ್ತಾಯಿಸಿ ಶಿಕ್ಷಕರ ನಿಯೋಗವೊಂದು ಮನವಿ ಯನ್ನು ಸಲ್ಲಿಸಲಾಯಿತು.
ಹೌದು ಈ ಒಂದು ಬೇಡಿಕೆ ಕುರಿತಂತೆ ಶಿಕ್ಷಣ ಇಲಾಖೆಯ ಆಯುಕ್ತರನ್ನು ಭೇಟಿ ಮಾಡಿದ ಮಹೇಶ್ ಮಡ್ಡಿ ನೇತ್ರತ್ವದಲ್ಲಿನ ಶಿಕ್ಷಕರ ನಿಯೋಗವು ಈ ಕೂಡಲೇ ಈ ಒಂದು ವರ್ಗಾ ವಣೆ ಪ್ರಕ್ರಿಯೆಯನ್ನು ಆರಂಭ ಮಾಡುವಂತೆ ಒತ್ತಾಯವನ್ನು ಮಾಡಿದರು.ಈ ಹಿಂದೆ ಇದ್ದ ವರ್ಗಾವಣೆಯಂತೆ ಮತ್ತೊಮ್ಮೆ ವರ್ಗಾವಣೆ ಯನ್ನು ಮಾಡಿ ವರ್ಗಾವಣೆಯಿಲ್ಲದೇ ಪರದಾ ಡುತ್ತಿರುವ ಶಿಕ್ಷಕರಿಗೆ ನೆಮ್ಮದಿಯಿಂದ ಕೆಲಸವನ್ನು ಮಾಡುವಂತೆ ಅನುಕೂಲವನ್ನು ಕಲ್ಪಿಸುವಂತೆ ಆಗ್ರಹವನ್ನು ಮಾಡಲಾಯಿತು.
2023-24 ನೇ ಸಾಲಿನ ಶಿಕ್ಷಕರ ವರ್ಗಾವಣೆ ಯನ್ನು ಹಿಂದಿನ ವರ್ಗಾವಣೆಯಂತೆ ಮತ್ತೊಮ್ಮೆ ಐತಿಹಾಸಿಕ ವರ್ಗಾವಣೆ ರೀತಿಯಲ್ಲಿಯೇ ಆರಂಭ ಮಾಡಬೇಕು. ಜೊತೆಗೆ ಕೆಲ ಅವೈಜ್ಞಾನಿಕ ವರ್ಗಾವಣೆ ತಿದ್ದುಪಡಿ ಮಾಡಿ ಆದಷ್ಟು ಬೇಗನೆ ವರ್ಗಾವಣೆ ಪ್ರಕ್ರಿಯೆ ಪ್ರಾರಂಭ ಮಾಡುವಂತೆ ಆಗ್ರಹವನ್ನು ಮಾಡಲಾಯಿತು.ದೊಡ್ಡ ಮಟ್ಟದ ವರ್ಗಾವಣೆ ವಂಚಿತರ ನಿಯೋಗದೊಂದಿಗೆ ಆಯುಕ್ತರಾದ ಪ್ರಸನ್ನಕುಮಾರ್ ಮತ್ತು ನಿರ್ದೇ ಶಕರು ಪ್ರಾಥಮಿಕ ಮತ್ತು ಪ್ರೌಢ ವಿಭಾಗ ಇವರನ್ನು ಭೇಟಿಯಾದ ಶಿಕ್ಷಕರ ನಿಯೋಗವು ಈ ಒಂದು ಕುರಿತಂತೆ ಮನವಿಯನ್ನು ಸಲ್ಲಿಸಲಾ ಯಿತು
ಇದೇ ವೇಳೆ ವರ್ಗಾವಣೆ ಗೆ ರಾಜ್ಯ ನೋಡಲ್ ಅಧಿಕಾರಿಗಳಾದ ಬೈಯಪ್ಪ ರೆಡ್ಡಿ ಇವರನ್ನು ಭೇಟಿಯಾಗಿ ಈ ಕೂಡಲೇ ಈ ಒಂದು ವರ್ಗಾ ವಣೆ ಪ್ರಕ್ರಿಯೆಯನ್ನು ಆರಂಭ ಮಾಡುವಂತೆ ಮನವಿ ಮಾಡಲಾಯಿತು.ಆದಷ್ಟು ಬೇಗನೆ ವರ್ಗಾವಣೆ ಪ್ರಕ್ರಿಯೆ ಪ್ರಾರಂಭದ ಬಗ್ಗೆ ಸ್ಪಂದಿ ಸಿದ ಅಧಿಕಾರಿಗಳಿಗೆ ರಾಜ್ಯದ ಶಿಕ್ಷಕರ ನಿಯೋ ಗವು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಶಿಕ್ಷಕ ಮಹೇಶ್ ಮಡ್ಡಿ ಅವರೊಂದಿಗೆ ಈ ಒಂದು ನಿಯೋಗದಲ್ಲಿ ಟೀಮ್ ನಲ್ಲಿ ಹಲವಾರು ಶಿಕ್ಷಕ ಬಂಧುಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..