ಬೆಂಗಳೂರು –
ನೀತಿ ಸಂಹಿತೆಗೂ ಮುನ್ನ ಶಿಕ್ಷಕರ ವರ್ಗಾವಣೆ ಆರಂಭ ಮಾಡಿ – ಶಿಕ್ಷಣ ಸಚಿವರು,ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವರನ್ನು ಭೇಟಿಯಾದ ಮಹೇಶ್ ಮಡ್ಡಿ ನೇತ್ರತ್ವದಲ್ಲಿನ ಶಿಕ್ಷಕರ ನಿಯೋಗ
ಹೌದು ಶಿಕ್ಷಕರ ವರ್ಗಾವಣೆ ವಿಚಾರ ಕುರಿತಂತೆ ಶಿಕ್ಷಕರ ನಿಯೋಗವು ಶಿಕ್ಷಣ ಸಚಿವರು ಸೇರಿದಂತೆ ಹಲವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿ ದ್ದಾರೆ.ಹೌದು ಬೆಂಗಳೂರಿನಲ್ಲಿ ಮಹೇಶ್ ಮಡ್ಡಿ ನೇತ್ರತ್ವದಲ್ಲಿನ ನಿಯೋಗವು ಶಿಕ್ಷಣ ಸಚಿವ ಮಧು ಬಂಗಾರಪ್ಪ,ಇಲಾಖೆಯ ಆಯುಕ್ತರಾಗಿರುವ ಕಾವೇರಿ,ಸಚಿವರ ಆಪ್ತ ಕಾರ್ಯದರ್ಶಿ ಕಿಶೋರ್ ಕುಮಾರ್,ರಿತೇಶ್ ಕುಮಾರ್ ಸಿಂಗ್,ಮತ್ತು ಪ್ರಸನ್ ಕುಮಾರ್ ಅವರನ್ನು ಭೇಟಿಯಾಗಿ ವರ್ಗಾವಣೆ ಸಮಸ್ಯೆ ಕುರಿತಂತೆ ಚರ್ಚೆಯನ್ನು ಮಾಡಿದರು.
ಪ್ರಮುಖವಾಗಿ ಸಧ್ಯ ವರ್ಗಾವಣೆಯಲ್ಲಿರುವ ಕೆಲವೊಂದಿಷ್ಟು ತಾಂತ್ರಿಕವಾದ ಅವೈಜ್ಞಾನಿಕವಾ ಗಿರುವ ಅಂಶಗಳನ್ನು ಕೈಬಿಡಬೇಕು.ಸೂಕ್ತವಾದ ಹೊಸ ಬದಲಾವಣೆಗಳೊಂದಿಗೆ ಎಲ್ಲಾ ವರ್ಗಗ ಳಲ್ಲಿ ಈ ಕೂಡಲೇ ಶಿಕ್ಷಕರ ವರ್ಗಾವಣೆಯನ್ನು ಆರಂಭ ಮಾಡುವಂತೆ ಶಿಕ್ಷಕರ ನಿಯೋಗವು ಒತ್ತಾಯವನ್ನು ಮಾಡಿದೆ.ಶಿಕ್ಷಕ ಮಹೇಶ್ ಮಡ್ಡಿ ನೇತ್ರತ್ವದಲ್ಲಿನ 150 ಕ್ಕೂ ಹೆಚ್ಚು ಶಿಕ್ಷಕರು ಈ ಒಂದು ನಿಯೋಗದಲ್ಲಿ ಪಾಲ್ಗೊಂಡು ಶಿಕ್ಷಣ ಸಚಿವರು ಸೇರಿದಂತೆ ಹಲವರನ್ನು ಭೇಟಿಯಾಗಿ ವರ್ಗಾವಣೆ ಸಮಸ್ಯೆ ಕುರಿತಂತೆ ಎಳೆಎಳೆಯಾಗಿ ಸಮಸ್ಯೆಯನ್ನು ಬಿಚ್ಚಿಟ್ಟರು.
ಅಲ್ಲದೇ ಈ ಒಂದು ವರ್ಗಾವಣೆಯಿಲ್ಲದೇ ರಾಜ್ಯದ ಶಿಕ್ಷಕರು ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದು ಎಲ್ಲವನ್ನು ಶಿಕ್ಷಕರ ನಿಯೋಗವು ಪುನಃ ಸಚಿವರ ಮತ್ತು ಅಧಿಕಾರಿಗಳ ಗಮನಕ್ಕೆ ತಗೆದುಕೊಂಡು ಬಂದರು.ಈ ಒಂದು ನಿಯೋಗದಲ್ಲಿ ಶಿಕ್ಷಕ ಮಹೇಶ್ ಮಡ್ಡಿ ಅವರೊಂದಿಗೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ 150 ಕ್ಕೂ ಹೆಚ್ಚು ಶಿಕ್ಷಕರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..