ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳು – ಸರ್ಕಾರಿ ನೌಕರರ ಮಹಾ ಸಮ್ಮೇಳನದ ಮುನ್ನ ಬೇಡಿಕೆಗಳ ಪಟ್ಟಿ ಬಿಡುಗಡೆ ಹೌದು
ಫೆಬ್ರುವರಿ 27 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ನಡೆಯ ಲಿದೆ.ಮುಖ್ಯಮಂತ್ರಿ ಸೇರಿದಂತೆ ಉಪ ಮುಖ್ಯಮಂತ್ರಿ ರಾಜ್ಯ ಸರ್ಕಾರದ ಸಚಿವರು ಶಾಸಕರು ಸೇರಿದಂತೆ ಹಲವು ಗಣ್ಯ ಮಹೋ ದಯರು ಈ ಒಂದು ಐತಿಹಾಸಿಕ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇನ್ನೂ ಪ್ರಮುಖವಾಗಿ ರಾಜ್ಯದಲ್ಲಿ ಸರ್ಕಾರಿ ನೌಕರರು ಕೆಲವೊಂದಿಷ್ಟು ಬೇಡಿಕೆಗಳ ಪಟ್ಟಿ ಯನ್ನು ಮಾಡಿ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆಗಾಗಿ 7ನೇ ವೇತನ ಆಯೋಗವನ್ನು ರಚನೆ ಮಾಡಿದ್ದು ಇದರೊಂದಿಗೆ ವರದಿ ಸಂಪೂ ರ್ಣವಾಗಿ ಸಿದ್ದಗೊಂಡಿದ್ದರು ಕೂಡಾ ಈವರೆಗೆ ಇದನ್ನು ಸ್ವೀಕಾರ ಮಾಡಿ ಜಾರಿಗೆ ತಗೆದುಕೊಂಡು ಬಂದಿಲ್ಲ.
ಮಾರ್ಚ್ ಅಂತ್ಯದ ವೇಳೆಗೆ ಈ ಒಂದು ಆಯೋಗದ ಅವಧಿ ಮುಕ್ತಾಯವಾಗಲಿದೆ.ಇನ್ನೂ ಇದರೊಂದಿಗೆ ಪ್ರಮುಖವಾಗಿ ಕಳೆದ ಕೆಲ ದಿನಗಳಿಂದ ರಾಜ್ಯದ ಸರ್ಕಾರಿ ನೌಕರರ ಮತ್ತೊಂದು ಪ್ರಮುಖ ಬೇಡಿಕೆಯಾಗಿರುವ ಹಳೇ ಪಿಂಚಣಿ ಯೋಜನೆ(ಒಪಿಎಸ್)ಮರು ಜಾರಿಗೆ ಒತ್ತಾಯ ಕೂಡಾ ಕೇಳಿ ಬರುತ್ತಿದೆ.
ಈ ಕುರಿತಂತೆ ಸಾಕಷ್ಟು ಪ್ರಮಾಣದಲ್ಲಿ ದೊಡ್ಡ ದೊಡ್ಡ ಹೋರಾಟಗಳು ಕೂಡಾ ನಡೆದಿದ್ದು ಅಧಿಕಾರಕ್ಕೆ ಬರುಮ ಮುಂಚೆ ರಾಜ್ಯ ಸರ್ಕಾರ ಈ ಒಂದು ಅಂಶವನ್ನು ತನ್ನ ಚುನಾವಣೆಯಲ್ಲಿ ಉಲ್ಲೇಖ ಮಾಡಿ ಘೋಷಣೆಯನ್ನು ಕೂಡಾ ಮಾಡಿತ್ತು.ಮತ್ತು ಸಧ್ಯ ರಾಜ್ಯದಲ್ಲಿ ಸಮಸ್ತ ಸರ್ಕಾರಿ ನೌಕರರಿಗೆ ಅತಿ ಬೇಡಿಕೆಯಾಗಿರುವ 7ನೇ ವೇತನ ಆಯೋಗದ ವರದಿಯ ಅನುಷ್ಠಾನ ಹಾಗೂ ಆರೋಗ್ಯ ಸಂಜೀವಿನಿ ಯೋಜನೆ ಲೋಕಾರ್ಪಣೆ ಮಾಡುವುದು ರಾಜ್ಯ ಸರ್ಕಾರಿ ನೌಕರರ ಸಂಘದ ಬೇಡಿಕೆಗಳಾಗಿವೆ.
ಫೆಬ್ರುವರಿ 27 ರಂದು ನಡೆಯಲಿರುವ ಐತಿಹಾಸಿಕ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿ ಸೇರಿದಂತೆ ಸಚಿವರು ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಈ ಒಂದು ಸಮಾರಂಭದಲ್ಲಿ ಇವುಗಳನ್ನು ಘೋಷಣೆ ಮಾಡಿದರೆ ಸರಿ ಇಲ್ಲವಾದರೆ ಸಮ್ಮೇಳನದ ನಂತರ ಸಭೆಯನ್ನು ಮಾಡಿ ಸಂಘಟನೆಯವರು ಮುಂದಿನ ಹೋರಾಟದ ನಿರ್ಧಾರವನ್ನು ತಗೆದು ಕೊಳ್ಳಲಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..