ಬಳ್ಳಾರಿ –
ಸಂಡೂರು ಉಪಚುನಾವಣೆಯ ಪ್ರಚಾರದ ಅಖಾಕ್ಕಿಳಿದ ಮಣಿಕಂಠ ಶ್ಯಾಗೋಟಿ – ಪಕ್ಷದ ಅಭ್ಯರ್ಥಿ ಪರವಾಗಿ ಅಬ್ಬರದ ಪ್ರಚಾರ ಕೈಗೊಂಡ ಯುವ ಮುಖಂಡ
ರಾಜ್ಯದಲ್ಲಿ ಮೂರು ವಿಧಾನ ಸಭಾ ಕ್ಷೇತ್ರಗಳ ಚುನಾವಣೆಯ ಕಾವು ಆರಂಭಗೊಂಡಿದೆ.ಈಗಾಗಲೇ ಎರಡು ಕ್ಷೇತ್ರಗಳಿಗೆ ಬಿಜೆಪಿ ಪಕ್ಷವು ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ಈ ನಡುವೆ ಸಂಡೂರು ವಿಧಾನ ಸಭಾ ಕ್ಷೇತ್ರಕ್ಕೆ ಬಂಗಾರು ಹನಮಂತ ಅವರನ್ನು ಪಕ್ಷವು ಅಭ್ಯರ್ಥಿಯನ್ನಾಗಿ ಅಖಾಡಕ್ಕಿಳಿಸಿದ್ದು ಈ ಒಂದು ಅಭ್ಯರ್ಥಿಯ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಆರಂಭಗೊಂಡಿದ್ದು
ಭಾರತೀಯ ಜನತಾ ಪಕ್ಷದ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಕೋಶಾಧ್ಯಕ್ಷ ಯುವ ಮುಖಂಡ ಮಣಿಕಂಠ ಶ್ಯಾಗೋಟಿ ಯವರು ಪ್ರಚಾರ ಕೈಗೊಂಡಿದ್ದಾರೆ.ಪಕ್ಷದ ಅಭ್ಯರ್ಥಿ ಯೊಂದಿಗೆ ಮತ್ತು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿಯವರೊಂದಿಗೆ ಕ್ಷೇತ್ರದಲ್ಲಿ ಪ್ರಚಾರ ವನ್ನು ಮಾಡಿದರು.ಇದರೊಂದಿಗೆ ಸಂಡೂರು ಉಪ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಮಣಿಕಂಠ ಶ್ಯಾಗೋಟಿಯವರು ಭಾಗಿಯಾಗಿದ್ದು ಕಂಡು ಬಂದಿತು
ಈ ಒಂದು ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಪ್ರಮುಖರು ನಾಯಕರು ಮುಖಂಡರು ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.ಸಂಡೂರು ತಾಲೂಕಿನ ಜನತೆ ಈ ಬಾರಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿ ಇತಿಹಾಸ ನಿರ್ಮಾಣ ಮಾಡಲು ಸಿದ್ದರಾಗಿದ್ದಾರೆ ಎಂಬ ವಿಶ್ವಾಸದ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬಂದವು.
ಸುದ್ದಿ ಸಂತೆ ನ್ಯೂಸ್ ಬಳ್ಳಾರಿ…..