ಬೆಂಗಳೂರು –
ಸಾಮಾನ್ಯವಾಗಿ ಮಧ್ಯಮ ವರ್ಗದವರನ್ನು ಬಿಟ್ಟರೆ ಎಲ್ಲರೂ ಇವತ್ತು ಏನೇ ಇದ್ದರೂ ವಿಮಾನ ಕಾರು ಇಲ್ಲವೇ ಬೇರೆ ಏನಾದರೂ ಸಾರಿಗೆ ವ್ಯವಸ್ಥೆ ಮೂಲಕ ಪ್ರಯಾಣ ಮಾಡತಾರೆ ಇದನ್ನು ನಾವು ನೋಡಿದ್ದೇವೆ ಕೇಳಿದ್ದೇವೆ ಅದರಲ್ಲೂ ರಾಜಕಾ ರಣಿ ಗಳಂತೂ ಹೈ ಪೈ ಯಾಗಿರುತ್ತಾರೆ ಹೀಗಿರು ವಾಗ ಸದಾ ಯಾವಾಗಲೂ ಸರಳತೆಯಿಂದ ಇರುವ ಸಚಿವ ದಿನೇಶ್ ಗುಂಡೂರಾವ್ ಅವರು ಮತ್ತೊಂದು ಕಾರ್ಯದ ಮೂಲಕ ಸಾಮಾನ್ಯ ರಂತೆ ಕಾಣಿಸಿಕೊಂಡಿದ್ದಾರೆ
ಹೌದು ರಾಜ್ಯದಲ್ಲಿ ಲೋಕಸಭೆ ಚುನಾವಣೆ ಪ್ರಚಾರರ ಅಬ್ಬರದ ನಡುವೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ..ಅದು ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಕೊಂಡು ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣ ಮಾಡಿದ್ದಾರೆ.ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಯಾಣಿಸಿದ್ದು ಕಂಡು ಬಂದಿತು
ಸರ್ಕಾರಿ ಸಾರಿಗೆ ಸೇವೆಯ ಮೊದಲ ಅನುಭವ ಪಡೆಯಬೇಕಿತ್ತು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಳಸಲು ಜನರನ್ನು ಉತ್ತೇಜಿಸಲು ಕೆಎಸ್‌ಆರ್‌ಟಿಸಿ ಅಂಬಾರಿ ಡ್ರೀಮ್ ಕ್ಲಾಸ್ ಬಸ್‌ನಲ್ಲಿ ಪ್ರಯಾಣಿಸಿದ್ದೇನೆ ಎಂದು ಹೇಳಿ ಕೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..