ಬೆಂಗಳೂರು –
ಜಿಲ್ಲೆಯ ಶಾಸಕರೊಂದಿಗೆ ಸಭೆ ಮಾಡಿ ಸಚಿವ ಸಂತೋಷ ಲಾಡ್ – ಜಿಲ್ಲೆಯಲ್ಲಿನ ಕುಡಿಯುವ ನೀರಿನ ಯೋಜನೆ ಕುರಿತಂತೆ ಚರ್ಚೆ ಮಾಡಿದ ಸಚಿವರು…..ಶಾಸಕರಾದ ವಿನಯ ಕುಲಕರ್ಣಿ ,ಎನ್ ಹೆಚ್ ಕೋನರಡ್ಡಿ ಉಪಸ್ಥಿತಿ
ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಗಳ ಕುರಿತಂತೆ ಕಾರ್ಮಿಕ ಸಚಿವ ಸಂತೋಷ ಲಾಡ್ ಬೆಂಗಳೂರಿನಲ್ಲಿ ಸಭೆ ಮಾಡಿದರು.ಹೌದು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ರವರ ಕಚೇರಿಯಲ್ಲಿ ಧಾರವಾಡ ಜಿಲ್ಲೆಯಲ್ಲಿನ ಬೆಣ್ಣಿ ಹಳ್ಳದ ಅಭಿವೃದ್ದಿ ಕುರಿತಂತೆ ಹಾಗೂ ಇದರೊಂ ದಿಗೆ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆ ಕುರಿತಂತೆ ಸುಧೀರ್ಘವಾಗಿ ಚರ್ಚೆಯನ್ನು ಮಾಡಲಾಯಿತು.
ಈ ಒಂದು ಸಭೆಯಲ್ಲಿ ಗ್ರಾಮೀಣ ಶಾಸಕರಾದ ವಿನಯ್ ಕುಲಕರ್ಣಿ,ನವಲಗುಂದ ಕ್ಷೇತ್ರದ ಶಾಸಕರಾದ ಎನ್ ಹೆಚ್ ಕೋನರಡ್ಡಿ ಪಾಲ್ಗೊಂಡು ಕೆಲವೊಂದಿಷ್ಟು ಸಲಹೆ ಸೂಚನೆ ಗಳನ್ನು ನೀಡಿ ಯೋಜನೆ ರೂಪರೇಷೆ ಗಳ ಹಾಗೂ ಬದಲಾವಣೆ ಕುರಿತಂತೆ ಮಾಹಿತಿ ಯನ್ನು ಹಂಚಿಕೊಂಡರು.
ಈ ಒಂದು ಸಭೆಯಲ್ಲಿ ಕೆ.ಎನ್.ಎನ್.ಎಲ್ ನಿಗಮದ ಅಧಿಕಾರಿಗಳು ಕೂಡಾ ಪಾಲ್ಗೊಂಡು ಧಾರವಾಡ ಜಿಲ್ಲೆಯ ಬೆಣ್ಣೆ ಹಳ್ಳ ಅಭಿವೃದ್ಧಿ ಮತ್ತು ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಚರ್ಚಿಸಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..