ಬೆಂಗಳೂರು –
ಖ್ಯಾತ ನಿರೂಪಕಿ ನಿಧನಕ್ಕೆ ಸಂತಾಪ ಸೂಚಿಸಿದ ಸಚಿವ ಸಂತೋಷ ಲಾಡ್ – ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎನ್ನುತ್ತಾ ಅಪರ್ಣಾ ನಿಧನಕ್ಕೆ ಕಂಬನಿ ಮಿಡಿದ ಸಂತೋಷ ಲಾಡ್
ಕನ್ನಡ ಭಾಷೆಯ ಖ್ಯಾತ ನಿರೂಪಕಿ ಅಪರ್ಣಾ ನಿಧನಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್ ಸಂತಾಪ ಸೂಚಿಸಿದ್ದಾರೆ.ಬೆಂಗಳೂರಿನಲ್ಲಿ ನಿಧನ ರಾದ ಅಪರ್ಣಾ ತಮ್ಮ ಅದ್ಭುತ ಮಾತುಗಾರಿಕೆ ಯಿಂದ ಹೆಸರು ಮಾಡಿದ್ದರು ಖ್ಯಾತ ನಿರೂಪಕಿ ಯಾಗಿದ್ದರು ಅಲ್ಲದೇ ನಟಿಯಾಗಿದ್ದ ಅಪರ್ಣಾ ಅವರ ಅಕಾಲಿಕ ನಿಧನ ನಿಜಕ್ಕೂ ಬೇಸರ ತರಿಸಿದೆ
ಅಪರ್ಣಾ ಅವರಾಡುತ್ತಿದ್ದ ಶುದ್ಧ ಕನ್ನಡ ಭಾಷೆಯನ್ನು ಕೇಳುವುದೇ ಅನನ್ಯ ಅನುಭವ. ಅವರ ನಿಧನ ಯಾವತ್ತಿಗೂ ತುಂಬಲಾರದ ನಷ್ಟವಾಗಿದೆ.ಅಪರ್ಣಾ ಅವರ ಆತ್ಮಕ್ಕೆ ಪರಮಾ ತ್ಮನು ಶಾಂತಿ ಕರುಣಿಸಲಿ ಅವರ ಕುಟುಂಬಕ್ಕೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ ಎಂದಿದ್ದಾರೆ ಸಚಿವ ಸಂತೋಷ ಲಾಡ್.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..