ರಾಯಚೂರು –
ಬರ ಅಧ್ಯಯನ ಸಂಚಾರ ಆರಂಭ ಮಾಡಿದ ಶಾಸಕ ಅರವಿಂದ ಬೆಲ್ಲದ – ರೈತರೊಂದಿಗೆ ಬರ ಪ್ರವಾಸ ಮಾಡುತ್ತಿರುವ ಶಾಸಕರು ಹೌದು
ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಬರ ಅಧ್ಯ ಯನ ಪ್ರವಾಸವನ್ನು ಆರಂಭ ಮಾಡಿದ್ದಾರೆ. ಹೌದು ಪಕ್ಷದ ಸೂಚನೆಯಂತೆ ರಾಜ್ಯದ ತುಂಬೆಲ್ಲಾ ಬಿಜೆಪಿ ಪಕ್ಷದ ನಾಯಕರು ಸುತ್ತಾ ಡುತ್ತಿದ್ದಾರೆ.ಇತ್ತ ಶಾಸಕ ಅರವಿಂದ ಬೆಲ್ಲದ ಕೂಡಾ ಪ್ರವಾಸವನ್ನು ಆರಂಭ ಮಾಡಿದ್ದು ಬರ ಅಧ್ಯಯನ ಪ್ರವಾಸ ಕಾರ್ಯಕ್ರಮದಡಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಪ್ರವಾಸವನ್ನು ಕೈಗೊಂಡಿದ್ದಾರೆ.
ಸಿಂಧನೂರು ಮತ್ತು ಮಾನ್ವಿ ಹಾಗೂ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಸಕಾಲಕ್ಕೆ ಮಳೆ ಇಲ್ಲದೆ ಬೆಳೆ ನಷ್ಟ ಹೊಂದಿದ ರೈತರ ಜಮೀನುಗಳಿಗೆ ಬರ ಅಧ್ಯ. ಯನ ತಂಡದೊಂದಿಗೆ ಭೇಟಿ ನೀಡಿ ವೀಕ್ಷಣೆ ಮಾಡಿ ಮಾಹಿತಿಯನ್ನು ಪಡೆದುಕೊಂಡರು.ಇದೇ ವೇಳೆ ಸರ್ಕಾರಕ್ಕೆ ಶೀಘ್ರ ಪರಿಹಾರಕ್ಕಾಗಿ ಒತ್ತಾ ಯವನ್ನು ಮಾಡಿದರು.
ಶಾಸಕ ಅರವಿಂದ ಬೆಲ್ಲದರೊಂದಿಗೆ ಈ ಸಂದರ್ಭದಲ್ಲಿ ರೈತರು,ಮಾಜಿ ಶಾಸಕರಾದ ಪ್ರತಾಪ್ ಗೌಡ ಪಾಟೀಲ್,ಬಸನಗೌಡ ಬ್ಯಾಗವಾಟ್,ಕೆ. ಕರಿಯಪ್ಪ, ರಾಯಚೂರು ಜಿಲ್ಲಾಧ್ಯಕ್ಷರಾದ ರಮಾನಂದ ಯಾದವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಶಿರಾಜ್ ಮಸ್ಕಿ, ಮಂಡಲ ಅಧ್ಯಕ್ಷರು, ರೈತ ಮೋರ್ಚಾ ಪದಾಧಿ ಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸುದ್ದಿ ಸಂತೆ ನ್ಯೂಸ್ ರಾಯಚೂರು…..