ನವಲಗುಂದ –
ಶಾಸಕ NH ಕೋನರೆಡ್ಡಿ ಕ್ಷೇತ್ರಕ್ಕೆ ಭರಪೂರ ಅನುದಾನ ನೀಡಿದ ಮುಜರಾಯಿ ಇಲಾಖೆ ಗ್ಯಾರಂಟಿ ಯಲ್ಲಿ ಅನುದಾನವಿಲ್ಲ ಎನ್ನುತ್ತಿರುವ ಮಧ್ಯೆ ಜನಸೇವಕ NH ಕೋನರಡ್ಡಿಯವರಿಗೆ ಭರ್ಜರಿ ಅನುದಾನ ನೀಡಿದ ರಾಜ್ಯ ಸರ್ಕಾರ
ಸರಳ ಸಜ್ಜನಿಕೆಯ ರಾಜಕಾರಣಿಗಳಲ್ಲಿ ನವಲ ಗುಂದ ವಿಧಾನಸಭಾ ಕ್ಷೇತ್ರದ ಶಾಸಕ NH ಕೋನರೆಡ್ಡಿ ಕೂಡಾ ಒಬ್ಬರು.ತಾವಾಯಿತು ತಮ್ಮ ಕೆಲಸವಾಯಿತು ಅದರಲ್ಲೂ ಕ್ಷೇತ್ರದಲ್ಲಿದ್ದು ಕೊಂಡು ಹಗಲಿರುಳು ಮತದಾರರ ಸೇವೆಯನ್ನು ಮಾಡುತ್ತಾ ಜನಸೇವಕ ರಾಗಿದ್ದಾರೆ.
ಅದರಲ್ಲೂ ರಾಜ್ಯದಲ್ಲಿಯೇ ಯಾರು ಮಾಡ ಲಾರದ ಚಕ್ಕಡಿ ರಸ್ತೆಗಳಿಗೆ ಹೊಸ ರೂಪವನ್ನು ನೀಡುತ್ತಿರುವ ಇವರು ರೈತರಿಗೆ ಪ್ರೀತಿ ಪಾತ್ರರಾಗಿ ದ್ದಾರೆ.ಎರಡನೇಯ ಬಾರಿಗೆ ಸಧ್ಯ ಕ್ಷೇತ್ರದಲ್ಲಿ ಶಾಸಕರಾಗಿರುವ ಇವರು ಈಗಾಗಲೇ ಕ್ಷೇತ್ರದಲ್ಲಿ ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಸುತ್ತಾಡುತ್ತಿದ್ದು ಹೊಸ ಹೊಸ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಹೌದು ಇವರಿಗೆ ಸಧ್ಯ ರಾಜ್ಯ ಸರ್ಕಾರ ಅದರಲ್ಲೂ ಗ್ಯಾರಂಟಿ ಯೋಜನೆಯಲ್ಲಿ ಅನುದಾನವಿಲ್ಲ ಎಂದು ಮಾತನಾಡಿಕೊಳ್ಳುತ್ತಿರುವ ಮಧ್ಯೆ ಭರಪೂರ ಅನುದಾನವನ್ನು ನೀಡಿದೆ.ರಾಜ್ಯ ಮುಜರಾಯಿ ಇಲಾಖೆ ಶಾಸಕ ಎನ್ ಹೆಚ್ ಕೋನರೆಡ್ಡಿಯವರಿಗೆ ಕೋಟಿ ಕೋಟಿ ರೂಪಾಯಿ ಅನುದಾನವನ್ನು ನೀಡಿದೆ.
ನವಲಗುಂದ ಲಾಲಗುಡಿ ಹನಮಂತ ದೇವಸ್ಥಾ ನದ ಕಟ್ಟಡ ಕಾಮಗಾರಿಗೆ 50 ಲಕ್ಷ ರೂಪಾಯಿ. ಹುಬ್ಬಳ್ಳಿ ತಾಲ್ಲೂಕಿನ ಬಂಡಿವಾಡ ಗ್ರಾಮದ ಹನಮಂತ ದೇವಸ್ಥಾನಕ್ಕೆ 40 ಲಕ್ಷ ರೂಪಾಯಿ, ಬ್ಯಾಲ್ಯಾಳ ಗ್ರಾಮದ ಗ್ರಾಮದೇವತೆಯ ಕಟ್ಟಡದ ಕಾಮಗಾರಿಗೆ 30 ಲಕ್ಷ ರೂಪಾಯಿ,ತಿರ್ಲಾಪೂರ ಗ್ರಾಮದ ಹನಮಂತ ದೇವಸ್ಥಾನಕ್ಕೆ 25 ಲಕ್ಷ ರೂಪಾಯಿ ಅನುದಾನವನ್ನು ನೀಡಿದೆ.
ಇನ್ನೂ ಇದರೊಂದಿಗೆ ನಲವಡಿ ಗ್ರಾಮದ ಮಲ್ಲಮ್ಮನ ದೇವಸ್ಥಾನಕ್ಕೆ 75 ಲಕ್ಷ ರೂಪಾಯಿ ಅನುದಾನವನ್ನು ನೀಡಿದೆ.ಹೀಗೆ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ಭರ್ಜರಿಯಾದ ಅನುದಾ ನವನ್ನು ನೀಡಿದ್ದು ಕ್ಷೇತ್ರಕ್ಕೆ ಅನುದಾನವನ್ನು ನೀಡಿದ ರಾಜ್ಯ ಸರ್ಕಾರಕ್ಕೆ ಅದರಲ್ಲೂ ಮುಖ್ಯ ಮಂತ್ರಿಯವರಿಗೆ,
ಮುಜರಾಯಿ ಸಚಿವರಿಗೆ ಶಾಸಕ ಎನ್ ಹೆಚ್ ಕೋನರೆಡ್ಡಿಯವರು ಕ್ಷೇತ್ರದ ಮತದಾರರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ನವಲಗುಂದ…..