This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಸರ್ಕಾರಿ ನೌಕರರ ರಜೆ ಕುರಿತಂತೆ ರಾಜ್ಯ ಸರ್ಕಾರದಿಂದ ಹೊಸ ನಿಯಮಗಳು – ಶಿಶುಪಾಲನಾ,ರಜೆ ಗಳಿಕೆ ರಜೆ ಸೇರದಂತೆ ಹಲವು ರಜೆಗಳ ಹೊಸ ಮಾಹಿತಿ ವಿವರಗಳು

Join The Telegram Join The WhatsApp

 


ಬೆಂಗಳೂರು

 

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ವಿವಿಧ ರಜೆಗಳನ್ನು ಪಡೆಯಬಹುದು ರಜೆಗಳಲ್ಲಿ ಸಹ ಹಲವು ವಿಧಗಳಿವೆ ಅವುಗಳನ್ನು ನೌಕರರು ತಿಳಿದಿರುವುದು ಅಗತ್ಯವಾಗಿದೆ. ನಿಯಮಗಳ ಅನ್ವಯ ರಜೆಗಳ ವಿವರಗಳನ್ನು ನೊಡೋದಾ ದರೆ ಕೆಲವೊಂದು ಸಂದರ್ಭದಲ್ಲಿ ತಾತ್ಕಾಲಿಕ ಸರ್ಕಾರಿ ನೌಕರ ಮಾರಣಾಂತಿಕ ಕಾಯಿಲೆಗಳು ಆದಂತಹ ಕ್ಷಯ,ಕ್ಯಾನ್ಸರ್ ಅಥವಾ ಮಾನಸಿಕ ಅಸ್ವಸ್ಥತೆಯಿಂದ ಬಳಲಿದರೆ ಅವನ ಇಡೀ ಸೇವಾ ಅವಧಿಯಲ್ಲಿ ಗರಿಷ್ಠ 360 ದಿವಸಗಳವರಗೆ ಗಳಿಸದ ರಜೆಯನ್ನು ಮಂಜೂರು ಮಾಡಬ ಹುದು

 

ಆದರೆ ಈ ರಜೆ ಪಡೆಯಲು ಷರತ್ತುಗಳು ಇದ್ದಿದ್ದು ನೌಕರನು ಒಂದು ವರ್ಷಕ್ಕಿಂತ ಕಡಿಮೆಯಿಲ್ಲದೇ ನಿರಂತರ ಸೇವೆಯನ್ನು ಸಲ್ಲಿಸಿರಬೇಕು ಸರ್ಕಾರಿ ನೌಕರನು ಯಾವ ಹುದ್ದೆಯಿಂದ ರಜೆಯ ಮೇಲೆ ತೆರಳುವನೋ ಆ ಹುದ್ದೆಯು ಅವನು ಕೆಲಸಕ್ಕೆ ಹಿಂತಿರುಗುವತನಕ ಮುಂದುವರೆಯುವ ಸಾಧ್ಯತೆ ಯಿರಬೇಕು.ಅಂಥ ರಜೆ ಮಂಜೂರಾತಿಯ ಕೋರಿಕೆಯನ್ನು ಜಿಲ್ಲೆಯ ಸಿವಿಲ್ ಸರ್ಜನ್ ಅಥವಾ ಜಿಲ್ಲಾ ವೈದ್ಯಾಧಿಕಾರಿಯ ದರ್ಜೆಗೆ ಕಡಿಮೆ ಇರದ ಸಂಬಂಧಪಟ್ಟ ಕಾಯಿಲೆಯ ತಜ್ಞನು ನೀಡಿದ ವೈದ್ಯಕೀಯ ಪ್ರಮಾಣ ಪತ್ರವು ಸಮರ್ಥಿಸಬೇಕು ಹಾಗೂ ಶಿಫಾರಸ್ಸು ಮಾಡಿರುವ ರಜೆ ಮುಕ್ತಾಯವಾದ ಮಲೆ ಸರ್ಕಾರಿ ನೌಕರನು ಗುಣಮುಖನಾಗುವ ಸಂಭವವಿದೆ ಎಂಬುದನ್ನು ಪ್ರಮಾಣ ಪತ್ರವು ನಿರ್ದಿಷ್ಟಪಡಿಸಬೇಕು.

 

ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಷರತ್ತುಗಳಿಗೆ ಒಳಪಟ್ಟು ಇಡೀ ಸೇವಾ ಅವಧಿ ಯಲ್ಲಿ ಗರಿಷ್ಠ 180 ದಿನಗಳ ಶಿಶುಪಾಲನ ರಜೆ ನೀಡಬಹುದು.ಮಹಿಳಾ ಸರ್ಕಾರಿ ನೌಕರರು ಹೊಂದಿರುವ ಮಕ್ಕಳ ಸಂಖ್ಯೆಯನ್ನು ಪರಿಗಣಿ ಸದೇ ಅತ್ಯಂತ ಕಿರಿಯ ಮಗುವು 18 ವರ್ಷ ತಲುಪುವವರೆಗೆ ರಜೆಯನ್ನು ಪಡೆಯಲು ಅರ್ಹ ರಾಗಿರುತ್ತಾರೆ.ಪ್ರತಿ ಬಾರಿಯೂ ಈ ರಜೆ ಮಂಜೂ ರಾತಿಯು ಕನಿಷ್ಠ 15 ದಿನಗಳಿಗಿಂದ ಕಡಿಮೆ ಇರಬಾರದು.

 

ಬುದ್ಧಿಮಾಂಧ್ಯ,ಅಂಗವಿಕಲ ಮಕ್ಕಳನ್ನು ಹೊಂದಿರುವ ಸರ್ಕಾರಿ ಮಹಿಳಾ ನೌಕರರಿಗೆ ಮಂಜೂರು ಮಾಡಿರುವ 730 ದಿನಗಳ ಶಿಶುಪಾಲನ ರಜೆಯನ್ನು ಆಯ್ಕೆ ಮಾಡಿಕೊ ಳ್ಳಬೇಕು.ಪೂರಕ ದಾಖಲೆಗಳ ಅವಶ್ಯಕತೆ ಇಲ್ಲ, ಸೇವಾ ಪುಸ್ತಕದಲ್ಲಿನ ಮಕ್ಕಳ ವಿವರಗಳ ಆಧಾರದ ಮೇಲೆ ಮಂಜೂರು ಮಾಡತಕ್ಕದ್ದು.ಈ ಪೂರ್ವದಲ್ಲಿ ಮಂಜೂರಾಗಿರುವ ಯಾವುದೇ ರಜೆಯನ್ನು ಶಿಶುಪಾಲನ ರಜೆಯನ್ನಾಗಿ ಪರಿವರ್ತಿ ಸತಕ್ಕದ್ದಲ್ಲ.ಸರ್ಕಾರಿ ನೌಕರರ ರಜೆ ನಿಯಮ 113, ರಜಾ (ಬಿಡುವಿರುವ) ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರಿಗೆ ಗಳಿಕೆ ರಜೆ ವಿವರಗಳಿವೆ.

 

ಬಿಡುವಿರುವ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿ ರುವ ಸರ್ಕಾರಿ ನೌಕರನ ಗಳಿಕೆ ರಜೆಯನ್ನು ಪ್ರತಿ ವರ್ಷ ಜನವರಿ ಮತ್ತು ಜುಲೈ ತಿಂಗಳ ಮೊದಲನೇ ದಿನದಂದು 5 ದಿನಗಳಂತೆ ಎರಡು ಕಂತುಗಳಲ್ಲಿ ಅವನ ಗಳಿಕೆ ರಜೆ ಲೆಕ್ಕಕ್ಕೆ ಮುಂಚಿತ ವಾಗಿ ಜಮಾ ಹಾಕತಕ್ಕದ್ದು.ಬಿಡುವಿರುವ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರನು ಅರ್ಧವರ್ಷದ ಅವಧಿಯಲ್ಲಿ ಯಾವುದೇ ಅಸಾಧಾರಣ ರಜೆಯನ್ನು ಬಳಸಿ ಕೊಂಡಿದ್ದರೆ ಅಥವ ಗೈರುಹಾಜರಿಯ ಕೆಲವು ದಿವಸಗಳನ್ನು ಕೆಲಸ ಮಾಡದ ಅಥವಾ ಕರ್ತವ್ಯ ವಲ್ಲದ ಅವಧಿಯೆಂದು ಪರಿಗಣಿಸಿದ್ದಲ್ಲಿ ಮುಂದಿನ ಅರ್ಧವರ್ಷದಲ್ಲಿ ಪ್ರಾರಂಭದಲ್ಲಿ ಗಳಿಕೆರಜೆಯನ್ನು ನೀಡುವಾಗ ಗರಿಷ್ಠ 5 ದಿನಗಳ ಅವಧಿಗೆ ಒಳಪಟ್ಟು ಕೆಲಸಮಾಡದ ಅವಧಿಯ 1/30 ಭಾಗದಷ್ಟು ಕಡಿಮೆ ಮಾಡತಕ್ಕದ್ದು.

 

ಯಾವುದೇ ಸರ್ಕಾರಿ ನೌಕರನು ಅರ್ಧವರ್ಷದ ಮಧ್ಯದಲ್ಲಿ ಸೇವೆಗೆ ಸೇರಿದರೆ ಆ ಅರ್ಧವರ್ಷ ಮುಗಿಯುವ ವರೆಗೆ 5/6 ದರದಲ್ಲಿ ಪ್ರತಿ ಒಂದು ತಿಂಗಳು ಪೂರ್ಣಗೊಂಡ ನಂತರ ಜಮೆ ಕೊಡಬ ಹುದು. ಸರ್ಕಾರಿ ನೌಕರನು ಬಿಡುವನ್ನು ಭಾಗಶಃ ಬಳಸಿಕೊಂಡಲ್ಲಿ ಬಳಸಿರದ ಬಿಡುವಿನ ದಿವಸಗ ಳಿಗೆ 30 ದಿವಸಗಳ ಅನುಪಾತದಲ್ಲಿ ಗಳಿಕೆ ರಜೆಯನ್ನು ಪಡೆಯುತ್ತಾನೆ.

 

ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳು ಹಾಗೂ ಇಂಡಿಯನ್ ಒಲಂಪಿಕ್ಸ್ ಅಸೋಸಿಯೇಷನ್‌ ಗಳಿಂದ ನಡೆಸಲ್ಪಡುವ ಕ್ರೀಡಾಕೂಟಗಳಿಗೆ ಭಾಗವಹಿಸುವ ಸರ್ಕಾರಿ ನೌಕರು ವಾಸ್ತವ ದಿನಗಳಿಗೆ ವಿಶೇಷ ಸಾಂಧರ್ಬಿಕ ರಜೆಯನ್ನು ಮಂಜೂರು ಮಾಡಬಹುದು.ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಅವರಿಂದ ಸಂಘಟಿಸಲ್ಪಡುವ ಪರ್ವತಾರೋಹಣ ಯಾತ್ರೆಗ ಳಿಗೆ ಭಾಗವಹಿಸುವ ಸರ್ಕಾರಿ ನೌಕರರು ಒಂದು ಕ್ಯಾಲೆಂಡರ್ ವರ್ಷದಲ್ಲಿ 30 ದಿನಗಳ ಕಾಲಾವ ಧಿಗೆ ಇಡಿ ಸೇವಾ ಅವಧಿಯಲ್ಲಿ ಒಟ್ಟು 3 ಬಾರಿ ವಿಶೇಷ ಸಾಂಧರ್ಬಿಕ ರಜೆಯನ್ನು ಪಡೆಯ ಬಹುದು

 

ವ್ಯಾಸಕ್ಟಮಿ ಅಥವಾ ಟ್ಯುಬೆಕ್ಟಮಿ ಲೆಪ್ರೋ ಸ್ಕೋಪಿ ಸಂತಾನಶಕ್ತಿ ಹರಣ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವ ಸರ್ಕಾರಿ ನೌಕರರಾದ ಗಂಡಸರು ಮತ್ತು ಹೆಂಗಸರಿಗೆ ವೈದ್ಯಾಧಿಕಾರಿಗಳ ಪ್ರಮನಾಣ ಪತ್ರದ ಆಧಾರದ ಮೇಲೆ 7 ದಿನಗಳು ವಿಶೇಷ ಸಾಂಧರ್ಭಿಕ ರಜೆಯನ್ನು ಮಂಜೂರು ಮಾಡಬಹುದು.ಒಂದು ಶಾಲೆಯಲ್ಲಿ 2 ಅಥವಾ 2ಕ್ಕಿಂತ ಹೆಚ್ಚು ಮಹಿಳಾ ಶಿಕ್ಷಕರು ರಜೆ ಕೋರಿ ಅರ್ಜಿ ಸಲ್ಲಿಸಿದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಮಗುವಿನ ಶಿಕ್ಷಕಿಗೆ ಸೇವಾ ಪುಸ್ತಕದಲ್ಲಿ ಈಗಾ ಗಲೇ ನಮೂದಿಸಿರುವ ಮಕ್ಕಳ ವಿವರಗಳ ಆಧಾರದ ಮೇಲೆ ರೊಟೇಷನ್ ಪದ್ಧತಿಯಲ್ಲಿ ಆದ್ಯತೆಯ ಮೇಲೆ ರಜೆ ಮಂಜೂರು ಮಾಡು ವುದು.

 

ತಾಲೂಕಿನಲ್ಲಿ ರಜೆ ಮಂಜೂರಾತಿ ಕೋರಿರುವ ಎಲ್ಲಾ ಅರ್ಜಿಗಳನ್ನು ಪ್ರಾಧಿಕಾರವು ಅರ್ಹತೆಯ ಆಧಾರದ ಮೇಲೆ ತೀರಾ ಅನಿವಾರ್ಯತೆ ಇರುವ ಹಾಗೂ ಪ್ರಕರಣಗಳ ಗಂಭೀರತೆಯನ್ನು ಪರಿಗ ಣಿಸಿ ಆದ್ಯತೆಯ ಮೇಲೆ ಮಂಜೂರಾತಿಗೆ ಕ್ರಮವ ಹಿಸುವುದು.ಸದರಿ ಸೌಲಭ್ಯವನ್ನು ಹಕ್ಕು ಎಂಬು ದಾಗಿ ಪರಿಗಣಿಸಿ ಕ್ಲೇಮು ಮಾಡಲು ಅವಕಾಶ ಇರುವುದಿಲ್ಲ. ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಸದರಿ ರಜೆಯನ್ನು ಕೋರಿ ಅರ್ಜಿ ಸಲ್ಲಿಸಿದಾಗ ರಜೆ ಮಂಜೂರಾತಿ ಪ್ರಾಧಿಕಾರವು ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿ ರಜೆ ಮಂಜೂರಾ ತಿಗಾಗಿ ಕ್ರಮವಹಿಸಬಹುದಾಗಿದೆ.ಪ್ರತಿ ಬಾರಿ ಈ ರಜೆ ಮಂಜೂರಾತಿಯು ಕನಿಷ್ಠ 15 ದಿನಗಳು ಗರಿಷ್ಠ 30 ದಿನಗಳು ಮೀರದಂತೆ ಇರಬೇಕು.


Suddi Sante Desk

Leave a Reply