LIVE TV LocalCrimeNationalInternationalPoliticsEducationTechnologyEntertainmentSportsFeature
State News

ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ಗೆ ನೂತನ ಸಾರಥಿ ಜಿಲ್ಲಾಧ್ಯಕ್ಷರಾಗಿ ಚಂದ್ರಶೇಖರ ಜುಟ್ಟಲ್ ನೇಮಕ.....

ಧಾರವಾಡ -

ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ಗೆ ನೂತನ ಸಾರಥಿ ಜಿಲ್ಲಾಧ್ಯಕ್ಷರಾಗಿ ಚಂದ್ರಶೇಖರ ಜುಟ್ಟಲ್ ನೇಮಕ ಹೌದು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಗೋವಿಂದಪ್ಪ ಜುಟ್ಟಲ್ ಅವರನ್ನು ನೇಮಕ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಜಿಲ್ಲಾ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ದಿಂದ ರಾಜ್ಯದ ವಿವಿಧ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಧಾರವಾಡ ಗ್ರಾಮೀಣ ಜಿಲ್ಲೆಗೆ ಜುಟ್ಟಲ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. 

ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲಿ ಧಾರವಾಡ ಗ್ರಾಮೀಣ ಜಿಲ್ಲೆಯಲ್ಲಿ ಹಲವು ಮಂದಿ ಆಕಾಂಕ್ಷಿಗಳಿದ್ದರು. ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಸಂಘಟನಾ ಸಾಮರ್ಥ್ಯ ಹೊಂದಿರುವ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿತ್ತು. ಈ ವೇಳೆ ಚಂದ್ರಶೇಖರ ಜುಟ್ಟಲ್ ಅವರ ಹೆಸರೂ ಪ್ರಮುಖವಾಗಿ ಕೇಳಿಬಂದಿತ್ತು.

ಚಂದ್ರಶೇಖರ ಜುಟ್ಟಲ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದು, ಈ ಹಿಂದೆ ಕೆಪಿಸಿಸಿ ಪ್ರಚಾರ ಸಮಿತಿಯ ಧಾರವಾಡ ಗ್ರಾಮೀಣ ವಿಭಾಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಉಲ್ಲೇಖವೂ ಇದೆ.ನೂತನ ಜವಾಬ್ದಾರಿಯೊಂದಿಗೆ ಧಾರವಾಡ ಗ್ರಾಮೀಣ ಜಿಲ್ಲೆಯಾದ್ಯಂತ ಪಕ್ಷದ ಸಂಘಟನೆಯನ್ನು ಬೂತ್ ಮಟ್ಟದಿಂದ ಬಲಪಡಿಸು ವುದು, ಕಾರ್ಯಕರ್ತರನ್ನು ಒಗ್ಗೂಡಿಸುವುದು ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವ ಸವಾಲು ಜುಟ್ಟಲ್ ಅವರ ಮುಂದಿದೆ.

ಚಂದ್ರಶೇಖರ ಜುಟ್ಟಲ್ ಅವರ ನೇಮಕಕ್ಕೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಂದ ಅಭಿನಂದ ನೆಗಳು ವ್ಯಕ್ತವಾಗಿದ್ದು, ಅವರ ನೇತೃತ್ವದಲ್ಲಿ ಗ್ರಾಮೀಣ ಭಾಗದಲ್ಲಿ ಪಕ್ಷದ ಸಂಘಟನೆ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ಗೆ ನೂತನ ಸಾರಥಿ ಜಿಲ್ಲಾಧ್ಯಕ್ಷರಾಗಿ ಚಂದ್ರಶೇಖರ ಜುಟ್ಟಲ್ ನೇಮಕ.....ನೂತನ ಜಿಲ್ಲಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ.....CM ಭೇಟಿಯಾದ ರಾಜ್ಯ ಸರ್ಕಾರಿ ನೌಕರರ ನಿಯೋಗ.....ಷಡಾಕ್ಷರಿ ಯವರ ನೇತೃತ್ವದಲ್ಲಿ ಭೇಟಿಯಾದ ಟೀಮ್.....ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಭಾಗ್ಯ.....NPS ನಿಂದ OPS ಸೇರ್ಪಡೆ.....ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....